ಸರ್ಕಾರಿ ಶಾಲೆಗೆ ದರ್ಶನ್ ಕೊಟ್ಟ ಹಣವೆಷ್ಟು ಗೊತ್ತಾ? ಶಾಲಾ ಮಕ್ಕಳ ಬಾಯಿಂದಲೇ ಹೊರಬಂದ ಸತ್ಯ

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋವಿಂಗ್ ಇದೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಇವರನ್ನು ಕರೆಯುತ್ತಾರೆ. ನಟ ದರ್ಶನ್ ಅವರ ಸಿನಿಮಾ ಚೆನ್ನಾಗಿರಲಿ ಚೆನ್ನಾಗಿಲ್ಲದೆ ಇರಲಿ.. ಇವರ ಸಿನಿಮಾಗಳು ಹಿಟ್ ಆಗುವುದಂತೂ ಖಂಡಿತ. ನಟ ದರ್ಶನ್ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಪಾತ್ರಗಳಿಗಿಂತಲೂ ಹೆಚ್ಚಾಗಿ ಜನರು ನಿಜಜೀವನದ ವ್ಯಕ್ತಿತ್ವವನ್ನು ಹೆಚ್ಚು ಇಷ್ಟಪಡುತ್ತಾರೆ.

ದರ್ಶನ್ ಅವರ ಮಾತು ಒರಟಾದರೂ ಮನಸ್ಸು ಮೃದು. ಅತಿಯಾದ ಕೋಪ ಮತ್ತು ನೇರ ನುಡಿಗಳಿಂದ ದರ್ಶನ್ ಅವರು ಆಗಾಗ ಕಾಂಟ್ರವರ್ಸಿ ಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇವರ ಮೇಲೆ ಎಷ್ಟೇ ತಪ್ಪುಗಳನ್ನು ಎತ್ತಿ ಹಾಕಿದರೂ ಸಹ ಇವರ ವ್ಯಕ್ತಿತ್ವವನ್ನು ಹಾಗೂ ಇವರ ಅಭಿಮಾನಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದರ್ಶನ್ ಅವರ ಪರೋಪಕಾರ ಮನೋಭಾವ ವೈ ಅವರನ್ನು ಇಂದಿಗೂ ಕೂಡ ಬೆಳೆಸಿಕೊಂಡು ಹೋಗುತ್ತಿದೆ.

ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಅಷ್ಟೇ ಕಾಳಜಿ ಇಲ್ಲ ಬಡವರು ಹಾಗೂ ಮಕ್ಕಳ ಮೇಲೆ ಕೂಡ ದರ್ಶನ್ ಅವರಿಗೆ ಅಷ್ಟೇ ಕನಿಕರ ಇದೆ. ಯಾರಿಗೂ ಗೊತ್ತಿಲ್ಲದೆ ತಮ್ಮ ಕೈಲಾದಷ್ಟು ಸಹಾಯವನ್ನು ದರ್ಶನ್ ಮಾಡ್ತಾರೆ. ಹತ್ತು₹ದಾನ ಮಾಡಿದರೂ ಕೂಡ ಫೋಟೊ ತೆಗೆದುಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವ ಸ್ವಾರ್ಥ ಜನರ ಮಧ್ಯೆ ನಾವೆಲ್ಲರೂ ಬದುಕುತ್ತಿದ್ದೇವೆ. ಇಂಥ ಕಾಲದಲ್ಲಿ ನಟ ದರ್ಶನ್ ಅವರು ಎಷ್ಟೇ ದೊಡ್ಡ ಸಹಾಯ ಮಾಡಿದರೂ ಕೂಡ ಯಾರಿಗೂ ಗೊತ್ತಿಲ್ಲದ ಹಾಗೆ ರಹಸ್ಯವಾಗಿ ಇಡುತ್ತಾರೆ.

ಮೊನ್ನೆಯಷ್ಟೇ ನಟ ದರ್ಶನ್ ಅವರು ಮಂಡ್ಯ ಜಿಲ್ಲೆಯ ಹತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದರು. ಮತ್ತು ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದರು. ದರ್ಶನ್ ಅವರು ಹಣ ಕೊಟ್ಟು ಹೋದ ವಿಚಾರವನ್ನು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ದರ್ಶನ್ ಅವರು ಹಣ ಕೊಟ್ಟಿರುವ ವಿಷಯವನ್ನು ಇದೀಗ ಶಾಲೆಯ ಮಕ್ಕಳೇ ಮುಂದೆ ಬಂದು.. ದರ್ಶನ್ ಅವರ ಸಹಾಯವನ್ನು ನೆನೆದು ವಂದನೆಗಳನ್ನು ತಿಳಿಸಿದ್ದಾರೆ.

ಹೌದು ಗೆಳೆಯರು.. ನಟ ದರ್ಶನ್ ಅವರು 13 ಸರ್ಕಾರಿ ಶಾಲೆಗಳ ಅಭಿವದ್ಧಿಗೆ ಧನ ಸಹಾಯವನ್ನು ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಕ್ರಾಂತಿಯನ್ನು ಶುರು ಮಾಡಿದ್ದಾರೆ. ಪ್ರತಿ ಶಾಲೆಗೆ ನಟ ದರ್ಶನ್ ಅವರು ತಲಾ ಇಪ್ಪತ್ತೈದು ಸಾವಿರ ರೂಪಾಯಿಗಳ ಧನಸಹಾಯ ಮಾಡಿದ್ದಾರೆ. ದರ್ಶನ್ ಸರ್ ಬಂದಿದ್ದು ನಮಗೆಲ್ಲ ತುಂಬಾ ಖುಷಿಯಾಗಿದೆ. ದರ್ಶನ್ ಸರ್ ಇಪ್ಪತ್ತೈದು ಸಾವಿರ ರೂಪಾಯಿಗಳ ಅನುದಾನ ನೀಡಿದ್ದಾರೆ. ಇಪ್ಪತ್ತೈದು ಸಾವಿರ ರೂಪಾಯಿಗಳಲ್ಲಿ ನಾವು ಆಟಿಕೆ ಸಾಮಾನುಗಳು, ಲ್ಯಾಪ್ ಟಾಪ್ , ಪುಸ್ತಕಗಳನ್ನು ಮತ್ತು ಉಪಕರಣಗಳನ್ನು ಖರೀದಿ ಮಾಡುತ್ತೆವೆ ಎಂದು ಸರ್ಕಾರಿ ಶಾಲೆ ಮಕ್ಕಳು ತಿಳಿಸಿದ್ದಾರೆ.

Leave a Comment

error: Content is protected !!