ಸೌತ್ ಇಂಡಿಯಾದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಕೀರ್ತಿ ಸುರೇಶ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರತಿಭಾನ್ವಿತ ಹಾಗೂ ಗ್ಲಾಮರಸ್ ನಟಿಯರು ಆಗಮಿಸಿದ್ದು ನಿಜಕ್ಕೂ ಕೂಡ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ ಸೌಂದರ್ಯವತಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಈಗಿನ ಕಾಲದಲ್ಲಿ ಪ್ರೇಕ್ಷಕರು ಕೇವಲ ಸೌಂದರ್ಯ ಮಾತ್ರವಲ್ಲದೆ ಅವರ ಪ್ರತಿಭೆಯನ್ನು ಕೂಡ ಲೆಕ್ಕ ಹಾಕುತ್ತಾರೆ. ಪ್ರತಿಭೆ ಹಾಗೂ ಸೌಂದರ್ಯ ಎರಡು ಕೂಡ ಸಮಾನ ಭಾಗದಲ್ಲಿ ಹೊಂದಿರುವ ಕೆಲವೇ ಕೆಲವು ನಟಿಯರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಕೀರ್ತಿ ಸುರೇಶ್ ಕೂಡ ಒಬ್ಬರು.

ಹೌದು ಮಿತ್ರರೇ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೀರ್ತಿ ಸುರೇಶ್ ಅವರ ಪ್ರಭಾವ ಎನ್ನುವುದು ಗಣನೀಯವಾಗಿ ಹೆಚ್ಚಾಗಿದೆ ಎನ್ನಬಹುದಾಗಿದೆ. ಮಹೇಶ್ ಬಾಬು ತಲಪತಿ ವಿಜಯ್ ಅವರಂತಹ ಖ್ಯಾತ ದೊಡ್ಡ ಮಟ್ಟದ ಸ್ಟಾರ್ ನಟರೊಂದಿಗೆ ಕೂಡ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ. ಆ ಮಟ್ಟಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಪ್ರಮುಖವಾಗಿ ಮೊದಲ ಬಾರಿಗೆ ತಮ್ಮ ನಟನೆಯ ಮೂಲಕ ಎಲ್ಲಾ ಪ್ರೇಕ್ಷಕರನ್ನು ಕೀರ್ತಿ ಸುರೇಶ್ ರವರು ಗೆದ್ದುಕೊಂಡಿದ್ದು ಮಹಾ ನಟಿ ಸಿನಿಮಾದ ಮೂಲಕ. ಈ ಬಯೋಪಿಕ್ ಸಿನಿಮಾಗಳಿ ಕೇವಲ ಪಾತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೆ ಪರಕಾಯ ಪ್ರವೇಶವನ್ನು ಮಾಡಿ ಪಾತ್ರದಲ್ಲಿ ಜೀವಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಪಾತ್ರಕ್ಕಾಗಿ ಅವರು ನ್ಯಾಷನಲ್ ಅವಾರ್ಡ್ ಅನ್ನು ಕೂಡ ಈಗಾಗಲೇ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಇಷ್ಟೊಂದು ಪ್ರತಿಭೆ ಹಾಗೂ ಬೇಡಿಕೆಯನ್ನು ಹೊಂದಿರುವ ಕೀರ್ತಿ ಸುರೇಶ್ ಅವರು ಒಂದು ಸಿನಿಮಾಕ್ಕಾಗಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರಂತೆ. ಹೌದು ಗೆಳೆಯರೇ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಕೂಡ ಕೀರ್ತಿ ಸುರೇಶ್ ಅವರು ಕಾಣಿಸಿಕೊಳ್ಳುತ್ತಾರೆ. ಕೀರ್ತಿ ಸುರೇಶ್ ನಟನೆಯ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!