Dilshan: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀಲಂಕಾ ಕ್ರಿಕೇಟಿಗ ದಿಲ್ಶನ್ ಎಷ್ಟು ಕ್ಲೋಸ್ ಗೊತ್ತಾ? ಈ ಫೋಟೋ ನೋಡಿದ್ರೆ ಗೊತ್ತಾಗುತ್ತೆ.

Golden Star Ganesh ಮೊದಲಿಗೆ ಕಿರುತೆರೆಯ ವಾಹಿನಿಗಳಲ್ಲಿ ಕಾಮಿಡಿ ಪ್ರೋಗ್ರಾಮ್ ನಡೆಸಿಕೊಂಡು ಬರುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್(Ganesh Kannada Actor) ರವರು ಒಂದೇ ಒಂದು ಮುಂಗಾರು ಮಳೆ ಎನ್ನುವ ಸಿನಿಮಾದ ಯಶಸ್ಸಿನ ನಂತರ ಯಾವ ರೀತಿ ಕನ್ನಡ ಚಿತ್ರರಂಗದ ಟಾಪ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನಾವು ನಿಮಗೆಲ್ಲ ವಿಶೇಷವಾಗಿ ವಿವರಿಸಿ ಹೇಳಿ ತಿಳಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ನಿಜಕ್ಕೂ ಅವರ ಯಶಸ್ಸು ಎನ್ನುವುದು ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ಯುವಕನಿಗೆ ಸ್ಪೂರ್ತಿಯ ದಾರಿಯನ್ನಬಹುದಾಗಿದೆ.

ಅತ್ಯಂತ ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಇಂದು ಕೋಟಿ ಕೋಟಿ ಸಂಪಾದನೆಯನ್ನು ಪಡೆಯುವಂತಹ ಸ್ಟಾರ್ ನಟ. ಕನ್ನಡ ಚಿತ್ರರಂಗದ ಮೊದಲ 50 ಕೋಟಿ ಕಲೆಕ್ಷನ್ ಮಾಡಿರುವ ಮುಂಗಾರು ಮಳೆ(Mungaru Male) ಸಿನಿಮಾದ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಹೇಳುವುದಕ್ಕೆ ಪ್ರತಿಯೊಬ್ಬರಿಗೂ ಕೂಡ ಹೆಮ್ಮೆ ಅನಿಸುತ್ತದೆ.

ಇನ್ನು ಅವರು ಅಂತರಾಷ್ಟ್ರೀಯ ಕ್ರಿಕೆಟಿಗ ಆಗಿರುವ ದಿಲ್ಶನ್(Dilshan) ಅವರ ಜೊತೆಗೂ ಕೂಡ ಸಾಕಷ್ಟು ಆತ್ಮೀಯವಾದ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಡೆಸಿಕೊಡುವಂತಹ ಕೆಸಿಸಿ ಟೂರ್ನಮೆಂಟ್ ಮೂಲಕ ಗಣೇಶ್ ಹಾಗೂ ತಿಲಕರತ್ನೆ ದಿಲ್ಸನ್ ನಡುವೆ ಸ್ನೇಹ ಭಾವ ಮೂಡಿದೆ. ಇಲ್ಲಿಂದಲೇ ಇವರಿಬ್ಬರ ನಡುವಿನ ಸ್ನೇಹ ಭಾವ ಪ್ರಾರಂಭವಾಗಿರುವುದು ತಿಳಿದು ಬರುತ್ತದೆ.

ಈ ಬಾರಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂಡದಲ್ಲಿ ತಿಲಕರತ್ನೆ ದಿಲ್ಶನ್(Tilakaratne Dilshan) ಆಡಿದ್ದು ಇವರಿಬ್ಬರೂ ಎಷ್ಟು ಕ್ಲೋಸ್ ಫ್ರೆಂಡ್ಸ್ ಎನ್ನುವುದನ್ನು ಈ ಮೇಲಿರುವ ಫೋಟೋ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಅಂತರಾಷ್ಟ್ರೀಯ ಕ್ರಿಕೆಟಿಗನ ಜೊತೆಗೆ ನಮ್ಮ ಕನ್ನಡದ ನಟ ಸ್ನೇಹ ಸಂಬಂಧವನ್ನು ಹೊಂದಿರುವುದು ಅಷ್ಟೊಂದು ಸುಲಭದ ಮಾತಲ್ಲ. ಇವರ ಸ್ನೇಹ ಸಂಬಂಧ ಹೀಗೆ ಮುಂದುವರೆಯಲಿ ಎಂಬುದಾಗಿ ಅಭಿಮಾನಿಗಳು ಫೋಟೋ ನೋಡಿ ಹಾರೈಸುತ್ತಿದ್ದಾರೆ.

Leave a Comment

error: Content is protected !!