ಗಂಧದಗುಡಿ ಸೆಟ್ಟಿನಲ್ಲಿ ನಿಜಕ್ಕೂ ರಾಜಕುಮಾರ್ ಮೇಲೆ ಗುಂಡು ಹಾರಿಸಿದ್ದು ಯಾರು ಗೊತ್ತಾ? ವಿಷ್ಣುವರ್ಧನ್ ಬಲಿ ಪಶು ಆಗಿದ್ದೇಕೆ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಾ.ರಾಜಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರದು ಬಹಳ ದೊಡ್ಡ ಹೆಸರು. ಸಿನಿಮಾರಂಗಕ್ಕೆ ಇವರಿಬ್ಬರ ಕೊಡುಗೆಯು ಅಪಾರ. ಇವರಿಬ್ಬರೂ ಪ್ರತ್ಯೇಕವಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಜನ ಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣು ವರ್ಧನ್ ಅವರು ಜೊತೆಯಾಗಿ ನಟಿಸಿದ್ದು ಗಂಧದಗುಡಿ ಎನ್ನುವ ಒಂದೇ ಒಂದು ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅದೊಂದು ಘಟನೆ ನಡೆಯದೆ ಇದ್ದಿದ್ದರೆ ಇಬ್ಬರು ಜೊತೆಯಾಗಿ ನಟಿಸಿದ ಅದೆಷ್ಟು ಚಿತ್ರಗಳನ್ನು ನಾವು ಇಂದಿಗೂ ಮೆಲಕು ಹಾಕಬಹುದಿತ್ತು.

ಆಗುತ್ತಾನೆ ನಾಗರಹಾವು ಚಿತ್ರದ ಸೂಪರ್ ಹಿಟ್ ಕಂಡಿತ ವಿಷ್ಣುವರ್ಧನ್ ಅವರು ರಾಜಕುಮಾರ್ ಅವರ 150ನೇ ಚಿತ್ರವಾದ ಗಂಧದಗುಡಿ ಚಿತ್ರದಲ್ಲಿ ಒಂದು ವಿಲನ್ ರೋಲ್ ಮಾಡಲು ಒಪ್ಪಿಕೊಳ್ಳುತ್ತಾರೆ. ಒಮ್ಮೆ ಖಳನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡರೆ ಮತ್ತೆ ನಾಯಕ ನಟನಾಗಿ ಕಂಬ್ಯಾಕ್ ಮಾಡೋದು ಕಷ್ಟ. ಆದರೂ ರಾಜಕುಮಾರ್ ಅವರ ಜೊತೆ ನಟಿಸುವುದು ನನ್ನ ಭಾಗ್ಯ ಎನ್ನುವ ಕಾರಣಕ್ಕೆ ವಿಷ್ಣುವರ್ಧನ್ ಅವರು ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಇವರಿಬ್ಬರು ಒಟ್ಟಾಗಿ ನಟಿಸುತ್ತಿದ್ದ ಗಂಧದಗುಡಿ ಹೋಗುತ್ತದೆ. ಆ ಘಟನೆ ಆದಮೇಲೆ ಅದರ ಪರಿಣಾಮವನ್ನು ಜೀವನ ಪರ್ಯಂತ ಅನುಭವಿಸಿದ್ದು ಮಾತ್ರ ವಿಷ್ಣು ದಾದಾ.

ಗಂಧದ ಗುಡಿನಲ್ಲಿ ಬಂದು ಫೈಟಿಂಗ್ ಸೀನ್ ಇರುತ್ತೆ. ಅದರಲ್ಲಿ ವಿಲನ್, ಹೀರೋ ಕಡೆಗೆ ಗುಂಡನ ಹಾರಿಸುವ ಒಂದು ಸನ್ನಿವೇಶ ಶೂಟಿಂಗ್ ಮಾಡಲಾಗುತ್ತೆ. ಈ ಸಮಯದಲ್ಲಿ ಬಾಲಣ್ಣ ಅವರು ನಾನು ಈಗ ಗುಂಡು ಹಾರೈಸುತ್ತೇನೆ ಅಂತ ನಾಯಕ ನಟನಾದ ರಾಜಕುಮಾರ್ ಅವರ ಕಡೆಗೆ ಗುಂಡು ಹಾರಿಸುವ ಸನ್ನಿವೇಶ ಅದಾಗಿತ್ತು. ಆ ಸಮಯದಲ್ಲಿ ವಿಷ್ಣುವರ್ಧನ್ ಆ ಸ್ಥಳದಲ್ಲಿ ಇರಲಿಲ್ಲ ಅವರ ಸೀನ್ ಇಲ್ಲವಾದ ಕಾರಣ ಅವರು ಊಟಕ್ಕೆ ಎಂದು ತೆರಳಿದ್ದರು.

ಗುಂಡು ಹಾರಿಸುವುದಕ್ಕೆ ಇಟ್ಟ ಬಂದೂಕನ ಬಲನ ಅವರ ಕೈಲಿ ಎತ್ತುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗಾಗಿ ಗಂಧದಗುಡಿ ನಿರ್ಮಾಪಕರು ಆಗಿದ್ದ ಎಂಪಿ ಶಂಕರ್ ಅವರು ತಮ್ಮ ಬಳಿ ಶಿಕಾರಿಕೆಂದು ಇಟ್ಟುಕೊಂಡಿದ್ದ ಅಧಿಕೃತ ಬಂದು ಆ ಸನ್ನಿವೇಶವನ್ನು ಮುಗಿಸುವುದಕ್ಕಾಗಿ ಕೊಡುತ್ತಾರೆ. ಬಾಲಣ್ಣ ಅವರಿಗೆ ಬಂದೂಕನ ಸರಿಯಾಗಿ ಹಿಡಿದುಕೊಳ್ಳಲು ಬರುತ್ತಿರಲಿಲ್ಲ ಹಾಗಾಗಿ ಈ ಶೂಟಿಂಗ್ ಸಮಯದಲ್ಲಿ ಅರ್ಧ ಟ್ರಿಗರ್ ಒತ್ತುತ್ತಾರೆ ಕೊನೆಗೆ ಶಾಟ್ ಕೂಡ ಓಕೆ ಆಗುತ್ತೆ.

ಸದಾ ಶಿಕಾರಿಕೆ ಹೋಗುತ್ತಿದ್ದ ಎಂಪಿ ಶಂಕರ್ ಅವರು ತಮ್ಮ ಬಂದೂಕಿನಲ್ಲಿ ಆ ದಿನ ಗುಂಡು ತೆಗೆಯುವುದಕ್ಕೆ ಮರೆತಿರುತ್ತಾರೆ, ಅರ್ಧ ಟ್ರಿಗರ್ ಆಗಿದ್ದ ಬಂದೂಕು ಎಂಪಿ ಶಂಕರ್ ಅವರ ಕೈ ಸೇರುತ್ತಿದ್ದಂತೆ ಪೂರ್ತಿ ಟ್ರಿಗರ್ ಓದುತ್ತಾರೆ ಆಗ ಅಲ್ಲಿ ನಡೆದ ಘಟನೆ ಮಾತ್ರ ನಿಜಕ್ಕೂ ಮೈ ಜುಮ್ ಎನ್ನುತ್ತೆ. ಯಾಕಂದ್ರೆ ಆ ಬಂದೂಕಿನಲ್ಲಿ ಇದ್ದದ್ದು ಡಮ್ಮಿ ಬುಲೆಟ್ ಅಲ್ಲ ನಿಜವಾದ ಬುಲೆಟ್! ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರು ಸಿನಿಮಾ ಚಿತ್ರಿಕರಣವಾಗುತ್ತಿದ್ದ ಹಾಗೆ ಆ ಗುಂಡು ಡಾಕ್ಟರ್ ರಾಜಕುಮಾರ್ ಅವರ ಎದೆಯನ್ನು ಸೀಳಿ ಬಿಡುತ್ತಿತ್ತು.

ಅಂದಹಾಗೆ ಈ ಘಟನೆ ನಡೆದಿದ್ದು ಎಂಪಿ ಶಂಕರ್ ಅವರ ಒಂದು ಸಣ್ಣ ಮರೆವಿನಿಂದ, ಅವರ ತಪ್ಪಿನಿಂದ ಆದರೆ ಹೊರಗಿನ ಪ್ರಪಂಚಕ್ಕೆ ಕುತಂತ್ರಗಳ ಬಾಯಿಗೆ ಬಿದ್ದವರು ಮಾತ್ರ ವಿಷ್ಣುವರ್ಧನ್ ಅವರು. ವಿಷ್ಣುವರ್ಧನ್ ಅವರು ಈ ಘಟನೆ ನಡೆಯುವಾಗ ಸ್ಥಳದಲ್ಲಿಯೇ ಇರಲಿಲ್ಲ ಆದರೆ ಅವರಿಗೆ ಡಾಕ್ಟರ್ ರಾಜಕುಮಾರ್ ಅವರ ಯಶಸ್ಸನ್ನ ಕಂಡು ಹೊಟ್ಟೆಕಿಚ್ಚು. ಹಾಗಾಗಿ ಅವರನ್ನು ಸಾಯಿಸುವ ಪ್ರಯತ್ನ ಮಾಡಿದ್ದರು ಅಂತ ಜನ ಗುಲ್ಲೆಬ್ಬಿಸುತ್ತಾರೆ.

ಈ ಘಟನೆಯಾದ ಬಳಿಕ ಕನ್ನಡ ಸಿನಿಮಾ ರಂಗ ವಿಷ್ಣುವರ್ಧನ್ ಅವರ ನೋಡುವ ರೀತಿ ಬದಲಾಗಿ ಹೋಗುತ್ತೆ. ವಿಷ್ಣು ಅವರು ಇದುವರೆಗೆ ಸಾಕಷ್ಟು ಸಿನಿಮಾ ಮಾಡಿದ್ದಾರೆ ನಿಜ ಆದರೆ ತಮ್ಮ ಜೀವಿತಾವಧಿಯಲ್ಲಿ ಅವರು ಇದೊಂದು ಘಟನೆಯಿಂದ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಅದೆಷ್ಟು ಬಾರಿ ಡಾಕ್ಟರ್ ರಾಜಕುಮಾರ್ ಅವರ ಬಳಿ ವಿಷ್ಣುವರ್ಧನ್ ಹೋಗಿ ಮಾತನಾಡಲು ಪ್ರಯತ್ನಿಸಿದರೆ ಕುತಂತ್ರಗಳು ಅದನ್ನು ತಪ್ಪಿಸುತ್ತಿದ್ದರು. ಇವರಿಬ್ಬರ ನಡುವೆ ಪೈಪೋಟಿಯನ್ನ ತಾವಾಗಿಯೇ ಸೃಷ್ಟಿಸಿದರು.

ಆದರೆ ಕೊನೆಯವರೆಗೂ ಡಾಕ್ಟರ್ ವಿಷ್ಣುವರ್ಧನ್ ಆಗಲಿ ರಾಜಕುಮಾರ್ ಅವರಾಗಲಿ ಈ ಬಗ್ಗೆ ಯಾವ ಮಾತುಗಳನ್ನು ಆಡಲಿಲ್ಲ. ಅಲ್ಲದೇ ಪರಸ್ಪರ ಸಿನಿಮಾಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದರು. ಪರಸ್ಪರ ಒಬ್ಬರ ಮೇಲೆ ಒಬ್ಬರು ಗೌರವ ಪ್ರೀತಿಯನ್ನು ಇಟ್ಟುಕೊಂಡಿದ್ದ ಮಹಾನ ನಟರು ಇವರು. ಆದರೆ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಇವರಿಬ್ಬರ ಸ್ನೇಹವನ್ನು ದೂರ ಮಾಡಿದ್ದು ಅಲ್ಲದೆ ವಿಷ್ಣುವರ್ಧನ್ ಅವರ ಮೇಲೆ ಕಪ್ಪು ಚುಕ್ಕಿಯನ್ನು ಶಾಶ್ವತವಾಗಿ ಉಳಿಸಿಬಿಟ್ಟರು.

Leave a Comment

error: Content is protected !!