ದ್ವಾರಕೀಶ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅಂಥದ್ದೇನುಮಾಡಿ ಇಂದು ಕಣ್ಣೀರಿಡುತ್ತಿದ್ದಾರೆ??

ವಿಷ್ಣುವರ್ಧನ್ ಅವರು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ 220ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಸಂಪತ್ ಕುಮಾರನಾಗಿ ತೆರೆಗೆ ಎಂಟ್ರಿ ಕೊಟ್ಟಿದ್ದ ಇವರು ಕನ್ನಡಿಗರ ಸಂಪತ್ತು. ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್, ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಸೇರಿದಂತೆ ಹಲವು ಅವಾರ್ಡ್ ಗಳನ್ನು ಪಡೆದ ಕನ್ನಡ ಚಿತ್ರರಂಗದ ‘ಸಾಹಸಸಿಂಹ’.

ದ್ವಾರಕೀಶ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಸ್ಯನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡು ‘ಕುಳ್ಳ’ ಎಂದೇ ಪ್ರಸಿದ್ಧಿಯಾಗಿದ್ದಾರೆ. ಕಳ್ಳ ಕುಳ್ಳ, ಮನೆ ಬೆಳಗಿದ ಸೊಸೆ, ಕೂಡಿ ಬಾಳೋಣ, ನಾನಿರುವುದೇ ನಿನಗಾಗಿ, ಮಕ್ಕಳ ಭಾಗ್ಯ, ಅವಳ ಹೆಜ್ಜೆ, ಕಿಟ್ಟು ಪುಟ್ಟು, ಆಪ್ತಮಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ದ್ವಾರಕೀಶ್ ಮತ್ತು ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ಅವರು ಒಟ್ಟಿಗೆ ನಟಿಸಿದ್ದಾರೆ. ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಇವರಿಬ್ಬರ ಮಧ್ಯೆ ಆಗಾಗ ಮನಸ್ತಾಪಗಳು ಕಾಣುತ್ತಿದ್ದವು.

ವಾಣಿಜ್ಯ ಮಂಡಳಿಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ನಟ ಅನಿರುದ್ಧವರು ‘ಡಾಕ್ಟರ್ ವಿಷ್ಣುವರ್ಧನ್ ಕುರಿತು ಯಾಕಿ ಅಗೌರವ?’ ಎಂದು ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದ ಅನಿರುದ್ಧವರು ‘ಡಾಕ್ಟರ್ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಆದರೆ ಈವರೆಗೆ ಅದನ್ನು ಸ್ಮರಿಸುವ ಕಾರ್ಯ ನಡೆದಿಲ್ಲ ಎಂಬುದು ಬೇಸರದ ಸಂಗತಿ. ವಾಣಿಜ್ಯ ಮಂಡಳಿಯವರನ್ನು ಕೇಳಿದರೆ ಪುತ್ತಳಿಯನ್ನು ಇಡುವುದಿಲ್ಲ ಎನ್ನುತ್ತಾರೆ. ಕಲಾವಿದರ ಭವನಕ್ಕೆ ಅವರ ಹೆಸರನ್ನು ಇಡಲು ಹಿಂಜರಿಯುತ್ತಾರೆ. ಈ ರೀತಿಯ ಧೋರಣೆ ಯಾಕೆ?? ಅವರ ಕಲಾ ಸೇವೆಗೆ ಬೆಲೆಯೇ ಇಲ್ಲದಂತಾಯಿತೆ?? ರಾಜಕುಮಾರ್, ಅಂಬರೀಶ್ ಗೆ ಸಿಕ್ಕಿರುವಂತಹ ಗೌರವದ ಬಗ್ಗೆ ಖುಷಿ ಇದೆ. ಇವರಂತೆ ಕಲಾವಿದರ ಭವನದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರು ಕೂಡ ಇರಬೇಕು. ಕನ್ನಡ ಚಿತ್ರರಂಗದ ಕೀರ್ತಿಪ್ರಾಯರಾದ ವಿಷ್ಣುವರ್ಧನ್ ಅವರಿಗೆ ಗೌರವವು ಸಿಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳೇಕೆ ಯೋಚಿಸುತ್ತಿಲ್ಲ..??’ ಎಂದು ಪ್ರಶ್ನಿಸಿದ್ದರು.

ನಂತರದಲ್ಲಿ ನಡೆದ ಸಂದರ್ಶನದಲ್ಲಿ ದ್ವಾರಕೀಶ್ ಅವರು ‘ನಾನು ವಿಷ್ಣುವರ್ಧನ್ ಅವರನ್ನು ಉಳಿದ ಚಿತ್ರರಂಗದ ನಾಯಕರಂತೆ ಓರ್ವ ನಾಯಕನಾಗಿ ನೋಡಲೇ ಇಲ್ಲ. ಅವರಿಗೆ ನೀಡಬೇಕಾದ ಬೆಲೆ ಮತ್ತು ಗೌರವವನ್ನು ಕೊಡಲೇ ಇಲ್ಲ. ಬೇರೆ ಬೇರೆ ಹಂತದಲ್ಲಿ ಅವನಿಗೆ ಅವಮಾನ ಮಾಡಿದ್ದೇನೆ. ನಾನೇ ಆತನನ್ನು ಬೆಳೆಸಿದ್ದು ಎಂಬ ಅಹಂ ಭಾವನೆ ಮನಸ್ಸಿನಲ್ಲಿ ಮೂಡಿದ್ದರಿಂದ ನನ್ನ ಚಿತ್ರಕ್ಕಾಗಿ ಮಾತ್ರ ಆತ ಕೆಲಸ ಮಾಡಬೇಕು ಎಂದುಕೊಳ್ಳುತ್ತಾ ಆತನನ್ನು ನನ್ನ ಉಪಯೋಗಕ್ಕಾಗಿ ಬಳಸಿಕೊಂಡೆ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವೂ ದೊರೆತಿದ್ದ ನನಗೆ ಅಹಂ ಇತ್ತು. ನಾಯಕನಟನೆ ಕೇಂದ್ರೀಕೃತವಾದ ಚಿತ್ರಗಳಲ್ಲಿ ನಟಿಸಲು ಆತನಿಗೆ ಅವಕಾಶಗಳನ್ನೇ ಕೊಡಲಿಲ್ಲ’ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ.

Leave a Comment

error: Content is protected !!