Rachita Ram ರಚಿತಾ ರಾಮ್ ಇಷ್ಟೊಂದು ವರ್ಷ ಚಿತ್ರರಂಗದಲ್ಲಿ ನಾಯಕಿಯಾಗಿ ಇರೋದಕ್ಕೆ ಇದೇ ಕಾರಣವಂತೆ. ದುನಿಯಾ ವಿಜಯ್ ಬಿಚ್ಚಿಟ್ಟ ಕರಾಳ ಸತ್ಯ ಏನು ಗೊತ್ತಾ?

Rachita Ram ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ನಿಜ ಹೆಸರಾಗಿರುವ ಬಿಂದಿಯಾ ರಾಮ್ ಎನ್ನುವ ಹೆಸರಿನಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ 200 ಜನ ನಟಿಯರಲ್ಲಿ ಆಡಿಶನ್(Audition) ನೀಡಿ ಆಯ್ಕೆಯಾಗಿ ನಾಯಕನಟಿಯಾಗಿ ಆಯ್ಕೆಯಾಗುತ್ತಾರೆ. ನಂತರ ನಡೆದಿದ್ದು ಇತಿಹಾಸ ನಿಮಗೆ ಗೊತ್ತೇ ಇದೆ.

ಹೌದು ಮಿತ್ರರೇ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ನಾಯಕನಟಿಯಾಗಿ ಕಾಣಿಸಿಕೊಂಡಿರುವಂತಹ ಏಕೈಕ ನಾಯಕ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂದು ಹೇಳಬಹುದಾಗಿದೆ. ಅಷ್ಟೊಂದು ಪ್ರಭುದ್ಧತೆ(Maturity) ಹಾಗೂ ನಟನ ಕೌಶಲ್ಯ ರಚಿತಾ ರಾಮ್ ಅವರ ನರನಾಡಿಗಳಲ್ಲೂ ಕೂಡ ಹಾಸು ಹೊಕ್ಕಾಗಿದೆ ಎಂದು ಹೇಳಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಯಕನಟಿಯರ ಅವಧಿ ಚಿತ್ರರಂಗದಲ್ಲಿ ನಾಯಕ ನಟರಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಹೀಗಿದ್ದರೂ ರಚಿತರಾಮ್ ಚಿತ್ರರಂಗದಲ್ಲಿ ಇಷ್ಟೊಂದು ವರ್ಷಗಳ ಕಾಲ ನಾಯಕ ನಟಿಯಾಗಿ ತಮ್ಮ ಬೇಡಿಕೆಯನ್ನು ಖಾಯಂ ಆಗಿ ಕಾಯ್ದಿರಿಸಿಕೊಂಡಿದ್ದಾರೆ.

Rachita Ram

ಇಷ್ಟೊಂದು ವರ್ಷಗಳ ಕಾಲ ನಾಯಕನಟಿಯಾಗಿ ರಚಿತಾ ರಾಮ್ ಅವರು ಇರೋದಕ್ಕೆ ಅದೊಂದೇ ವಿಚಾರ ಕಾರಣ ಎಂಬುದಾಗಿ ಕನ್ನಡ ಚಿತ್ರರಂಗದ ಬ್ಲಾಕ್ ಕೋಬ್ರಾ ಎಂದೇ ಬಿರುದಾಂಕಿತರಾಗಿರುವ ದುನಿಯಾ ವಿಜಯ್ ಅವರು ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ದುನಿಯಾ ವಿಜಯ್ ಅವರು ರಚಿತಾ ರಾಮ್ ಅವರ ಬಗ್ಗೆ ನೀಡಿರುವಂತಹ ಆ ಹೇಳಿಕೆ(Statement) ಆದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ರಚಿತಾ ರಾಮ್ ಅವರನ್ನು ಹೊಗಳುತ್ತಾ ಅವರ ಮನಸ್ಸಿನಲ್ಲಿ ಕೆಟ್ಟದ್ದೇನು ಇಲ್ಲ ಒಳ್ಳೇದೇ ಇರೋದು ಹೀಗಾಗಿ ಅವರು ಚಿತ್ರರಂಗದಲ್ಲಿ ಇಷ್ಟೊಂದು ವರ್ಷಗಳ ಕಾಲ ನಾಯಕನಟಿಯಾಗಿ ಬೇಡಿಕೆಯಲ್ಲಿದ್ದಾರೆ ಎಂಬುದಾಗಿ ದುನಿಯಾ ವಿಜಯ್ ಹೇಳುತ್ತಾರೆ. ರಚಿತರಾಮ್ ಅವರ ಕಣ್ಣಲ್ಲಿ ಅದೇನೋ ಕಾಂತಿ ಪಳಪಳ ಹೊಳೆಯುತ್ತದೆ. ಅದು ಎಲ್ಲರನ್ನು ಸೆಳೆಯುತ್ತದೆ ಎಂಬುದಾಗಿ ರಚಿತಾರಾಮ್ ಅವರ ಬಗ್ಗೆ ದುನಿಯಾ ವಿಜಯ್ ಮುಕ್ತ ಕಂಠದಿಂದ ಗುಣಗಾನ(Praising) ಮಾಡುತ್ತಾರೆ. ರಚಿತಾ ರಾಮ್ ಅವರ ಬಗ್ಗೆ ದುನಿಯಾ ವಿಜಯ್ ನೀಡಿರುವ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!