ಹತ್ತಾರು ವರ್ಷಗಳ ಆಸೆಯನ್ನು ವಿಷ್ಣು ಸ್ಮಾರಕದ ಮೂಲಕ ಪೂರೈಸಿದ ಮುಖ್ಯಮಂತ್ರಿಗಳು ನೀಡಿದ್ರು ಮತ್ತೊಂದು ಆಶ್ವಾಸನೆ. ವಿಷ್ಣು ಅಭಿಮಾನಿಗಳು ಫುಲ್ ಖುಷ್ ಏನದು?

Dr Vishnuvardhan ಕನ್ನಡ ಚಿತ್ರರಂಗ ಕಂಡಂತಹ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ(Monument) ಕನಸು ಹತ್ತಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಕೂಡ ಈಡೇರಿಸಲಿಲ್ಲ. ಆದರೆ ಕೊನೆಗೂ ಈ ವರ್ಷ ನಿನ್ನೆಯಷ್ಟೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ವಿಷ್ಣುವರ್ಧನ ಅಭಿಮಾನಿಗಳ ಹತ್ತಾರು ವರ್ಷದ ಕನಸನ್ನು ಈಡೇರಿಸಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಎಚ್ ಡಿ ಕೋಟೆ ನಲ್ಲಿರುವ ಹಾಲಾಳು ಎನ್ನುವ ಗ್ರಾಮದಲ್ಲಿ ಭವ್ಯವಾಗಿ ಎದ್ದು ನಿಂತಿದೆ.

ಎರಡುವರೆ ಎಕರೆ ಜಾಗದಲ್ಲಿ 11 ಕೋಟಿಗೂ ಅಧಿಕ ವೆಚ್ಚದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಎದ್ದು ನಿಂತಿದ್ದು ಈ ಸ್ಮಾರಕದಲ್ಲಿ 6000ಕ್ಕೂ ಅಧಿಕ ವಿಷ್ಣುವರ್ಧನ್ ಅವರ ಫೋಟೋಗಳನ್ನು ಹೊಂದಿರುವ ಗ್ಯಾಲರಿ ಇದೆ. ಆಡಿಟೋರಿಯಂ(Auditorium) ಕೂಡ ಇದ್ದು ಇವೆಲ್ಲ ಭವ್ಯತೆಯ ನಡುವೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಎಲ್ಲರ ಕಣ್ಮನಗಳನ್ನು ಕಂಗೊಳಿಸುವಂತೆ ಮೂಡಿ ಬಂದಿದೆ. ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಹಾಗೂ ಅವರ ನೆಚ್ಚಿನ ವಸ್ತುಗಳನ್ನು ಕೂಡ ಅಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

Dr Vishnuvardhan Smaraka

ಇನ್ನು ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕಾರಣಿಗಳು ಹಾಗೂ ವಿಷ್ಣುವರ್ಧನ್ ಅವರ ಕುಟುಂಬಸ್ಥರು ಕೂಡ ಉದ್ಘಾಟನಾ(Inauguration) ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ಸಮಾರಂಭದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಷ್ಣುವರ್ಧನ್ ಅವರಿಗೆ ಯಾಕೆ ಕರ್ನಾಟಕ ರತ್ನ ನೀಡಿಲ್ಲ ಅವರು ಕೂಡ ಕರ್ನಾಟಕ ರತ್ನ ಅಲ್ವಾ ಎಂಬುವಂತಹ ಫಲಕಗಳನ್ನು ಕಾರ್ಯಕ್ರಮದ ಮುಂಭಾಗದಲ್ಲಿ ಹಿಡಿದುಕೊಂಡು ನಿಂತಿದ್ದರು. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ನೀಡಿದ ಉತ್ತರ ನಿಜಕ್ಕೂ ಕೂಡ ವಿಶೇಷವಾಗಿತ್ತು.

ಹೌದು ಗೆಳೆಯರೆ ಇದಕ್ಕೆ ಉತ್ತರ ನೀಡಿದ ಬಸವರಾಜ ಬೊಮ್ಮಾಯಿ ಅವರು ನೀವು ಫಲಕಗಳಲ್ಲಿ ಬರೆದಿಟ್ಟುಕೊಂಡಿರುವ ವಿಚಾರವನ್ನು ನಾವು ಗಮನಿಸಿದ್ದೇವೆ. ನಮ್ಮ ಸರ್ಕಾರ ಅತಿ ಶೀಘ್ರದಲ್ಲಿ ನಿಮ್ಮ ಈಡೇರಿಕೆಯನ್ನು ಕೂಡ ಈಡೇರಿಸಲಿದ್ದೇವೆ ಎಂಬ ಗಟ್ಟಿ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಸಾಕಷ್ಟು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿರುವ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಗೌರವ ಸಲ್ಲಬೇಕೆಂಬ ಆಸೆ ನಿಮಗೂ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!