Deepika Padukone: ಉಪ್ಪಿ ಜೊತೆಗೆ ಚಿತ್ರರಂಗಕ್ಕೆ ಕಾಲಿಟ್ಟು ಎಂದು ಬಾಲಿವುಡ್ ಚಿತ್ರರಂಗವನ್ನು ಬೆಳಗುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Deepika Padukone ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ದೀಪಿಕಾ ಪಡುಕೋಣೆ(Deepika Padukone) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಐಶ್ವರ್ಯ ಸಿನಿಮಾದ ಮೂಲಕ 2006ರಲ್ಲಿ ಪಾದಾರ್ಪಣೆ ಮಾಡುವಂತಹ ಇವರು ಬೆಳಗಿದ್ದು ಮಾತ್ರ ಬಾಲಿವುಡ್ ಚಿತ್ರರಂಗವನ್ನು. ಉಪೇಂದ್ರ ಅವರ ಜೊತೆಗೆ ನಟನೆ ಮಾಡಿದ್ದರು ಕೂಡ ದೀಪಿಕಾ ಪಡುಕೋಣೆ ಹೆಚ್ಚಾಗಿ ಸದ್ದು ಮಾಡಿದ್ದೆ ಬಾಲಿವುಡ್ ಕಿಂಗ್ ಖಾನ್(King Khan) ಜೊತೆಗೆ ನಟನೆ ಮಾಡುವ ಮೂಲಕ.

ಅಂದರೆ ಪ್ರತಿಯೊಬ್ಬರೂ ಕೂಡ ನಟಿ ದೀಪಿಕಾ ಪಡುಕೋಣೆ ಅವರನ್ನು ಗುರುತಿಸುತ್ತಿರುವುದು ಶಾರುಖ್ ಖಾನ್(Shah Rukh Khan) ಅವರ ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಆಗಿರುವಂತಹ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸುವ ಮೂಲಕ. ಇನ್ನು ಕಳೆದ 18 ವರ್ಷಕ್ಕಿಂತಲೂ ಅಧಿಕಕಾಲ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ದೀಪಿಕಾ ಪಡುಕೋಣೆ ರಣವೀರ್ ಸಿಂಗ್(Ranveer Singh) ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಸದ್ಯಕ್ಕೆ ಇತ್ತೀಚಿಗಷ್ಟೇ ಅವರ ಹಾಗೂ ಶಾರುಖ್ ಖಾನ್ ಕಾಂಬಿನೇಷನ್ನಲ್ಲಿ ಮೂಡಿ ಬಂದಂತಹ ಪಠಾಣ್(Pathaan) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿಗೋ ಅಧಿಕ ಕಲೆಕ್ಷನ್ ಮಾಡುವ ಮೂಲಕ ಪಾತಾಳಕ್ಕೆ ಕುಸಿದಿದ್ದ ಬಾಲಿವುಡ್ ಚಿತ್ರರಂಗವನ್ನು ಮೇಲಕ್ಕೆ ಎತ್ತಿದೆ. ಇನ್ನು ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ದೀಪಿಕಾ ಪಡುಕೋಣೆ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ತಿಳಿಯೋಣ.

1986ರಲ್ಲಿ ಡೆನ್ಮಾರ್ಕ್ ನಲ್ಲಿ ಜನಿಸಿರುವಂತಹ ದೀಪಿಕಾ ಪಡುಕೋಣೆ(Deepika Padukone) ಅವರ ನಿಜವಾದ ವಯಸ್ಸು 37 ವರ್ಷವಾಗಿದೆ. ಇಂದಿಗೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿರುವಂತಹ ದೀಪಿಕಾ ಪಡುಕೋಣೆ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಹೃತಿಕ್ ರೋಷನ್(Hrithik Roshan) ಜೊತೆಗೆ ಕಾಣಿಸಿಕೊಳ್ಳುತ್ತಿರುವ ಫೈಟರ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.

Leave a Comment

error: Content is protected !!