ದೀಪಿಕಾ ಪಡುಕೋಣೆಯ ಕೇಸರಿ ಬಣ್ಣದ ಬಿಕನಿ ಹಾಡು ನೋಡಿ ದೀಪಿಕಾ ಬಾನ್ ಆಗಬೇಕು ಎಂದ ನೆಟ್ಟಿಗರು ಕಾರಣ ಏನು

Deepika Padukone in ‘Besharam Rang’ : ದೀಪಿಕಾ ಪಡುಕೋಣೆಯ ಹೊಸ ಅವತಾರವನ್ನು ನೋಡಿ ವೀಕ್ಷಕರು ಬೆಚ್ಚಾಗಿದ್ದಂತೂ ನಿಜ. ಕುಮಾರ್ ಅವರ ಸಾಹಿತ್ಯದೊಂದಿಗೆ ವಿಶಾಲ್ ಶೇಖರ್ ಸಂಯೋಜಿಸಿದ ‘ಬೇಷರಂ ರಂಗ್’ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಮೆಸ್ಟ್ರಿಯು ಕಣ್ಣರಳಿಸಿ ನೋಡುವಂತೆ ಮೂಡಿಬಂದಿದೆ. ಕೇಸರಿ ಬಣ್ಣದ ತುಂಡು ಬಟ್ಟೆ ತೊಟ್ಟು ಕುಣಿದಿರುವ ದೀಪಿಕಾಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ.

(Shah Rukh Khan) ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರವಾದ ‘Pathaan’ ನ ಮೊದಲ ಹಾಡು, ‘ಬೇಷರಂ ರಂಗ್’ ಹೊರಗೆ ಬಿದ್ದು ನೋಡುಗರ ಗಮನ ಸೆಳೆಯುತ್ತಿದ್ದಂತಲೇ, Like button ಒತ್ತಿದವರ ಜೊತೆಗೆ ಕಾಮೆಂಟ್ಸ್ ಗಳನ್ನು ಮಾಡಿದವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಮ್ಯೂಸಿಕ್, ವಿಡಿಯೋವನ್ನು ವೀಕ್ಷಿಸಿದ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದರೆ, ಟ್ವಿಟರ್ ನಲ್ಲಿ ಚಿತ್ರದ ಬಹಿಷ್ಕಾರದ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ.

Deepika Padukone in 'Besharam Rang'
Sharukh khan and deepika padukone

ಹಾಡಿನಲ್ಲಿರುವ ಬಿಸಿ ಬಿಸಿ ದೃಶ್ಯಗಳು ಭಾರತೀಯರಿಗೆ ಸಂಬಂಧಪಟ್ಟಿವೆ; ಅಶ್ಲೀಲ ದೃಶ್ಯಗಳ ಹಾಡನ್ನು ಹೊಂದಿರುವ ಈ ಚಿತ್ರವನ್ನು ನಿಷೇಧಿಸಬೇಕೆಂಬುದು ಕೆಲವರ ಒತ್ತಾಯ. ಟ್ವೀಟರ್ ನಲ್ಲಿ ಕೆಲವರು ‘ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕಿನಿ ಬಟ್ಟೆಯು ನಮಗೆ ಅಸಮಾಧಾನ ಉಂಟುಮಾಡಿದ್ದು, ಹಿಂದೂ ಧ-ರ್ಮದ ದೈ-ವಿಕ ಬಣ್ಣವನ್ನು ಗೇಲಿ ಮಾಡಿದಂತಿದೆ’ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ರಾಷ್ಟ್ರೀಯ ಸೇವಕ ಸಮಿತಿಯ ಬೆಂಬಲಿಗರು ಸೇರಿದಂತೆ ಹಲವರು ಮುಂಬರುವ ‘ಪಠಾನ್’ ಚಿತ್ರವನ್ನು ಚಲನಚಿತ್ರ ಮಂಡಳಿಯವರು ನಿಷೇಧಿಸುವಂತೆ ಕೋರಿ ‘BoycottPathaan’ ಎಂಬ ಹ್ಯಾಶ್ ಟಾಗ್ ನ ಅಡಿಯಲ್ಲಿ ಟ್ಟೀಟರ್ ನಲ್ಲಿ ಬರೆದು ಹಂಚಿಕೊಂಡಿದ್ದಾರೆ.

‘ಬಾಲಿವುಡ್ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ಅಸಭ್ಯತೆ ಮತ್ತು ಹಿಂ-ಸೆಯನ್ನು ಬಳಸುತ್ತಿದೆ..ಇದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇಂತಹ ಚಲನಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು’ ಎಂದು ಸುಮಿತಾ ದಾಸ್ ಎಂಬ ಟ್ವಿಟರ್ ಬಳಕೆದಾರರು ಬರೆದು ಹಂಚಿಕೊಂಡಿದ್ದಾರೆ.

‘ದೀಪಿಕಾ ಪಡುಕೋಣೆ ಕೇಸರಿ ಬಟ್ಟೆಗಳನ್ನು ಧರಿಸಿ, ಅಗ್ಗದ ಅಸಭ್ಯ ವರ್ತನೆಯನ್ನು ತೋರಿಸಿದ್ದಾರೆ. ಬಾಲಿವುಡ್ ಉದ್ದೇಶಪೂರ್ವಕವಾಗಿ ಹಿಂದೂ ಧ-ರ್ಮದ ದೈವಿಕ ಬಣ್ಣವನ್ನು ಲೇವಡಿ ಮಾಡುತ್ತಿದೆ. ಆದರೆ SRK ಹಸಿರು ಬಟ್ಟೆಗಳನ್ನು ಧರಿಸಿರುತ್ತಾರೆ. ಇದು #Love Jih-ad ನ ಹಿಡನ್ ಅಜೆಂಡಾ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇವೆಲ್ಲದರ ಹೊರತಾಗಿಯೂ ಹಲವು ನೆಟ್ಟಿಗರು ‘Besharam Rang’ ಹಾಡಿನ ಕುರಿತಾಗಿ ತಮಾಷೆಯನ್ನು ಸಹ ಹಂಚಿಕೊಂಡಿದ್ದಾರೆ.

Leave a Comment

error: Content is protected !!