Dboss: ಡಿ ಬಾಸ್ ನ ಕಾಟೇರ ಸಿನಿಮಾದಲ್ಲಿ ನಟಿಸುತ್ತಿರೋ ತಮಿಳು ನಟ ವಿಜಯ್ ಸೇತುಪತಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Vijay Sethupathi ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸುತ್ತಿರುವ ಕಾಟೇರ(Kaatera) ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ದರ್ಶನ್(Darshan) ಅವರ ಮೊದಲ ಬಾರಿಗೆ ನೈಜ ಘಟನೆಯ ಮೇಲೆ ಆಧಾರಿತ ಆಗಿರುವಂತಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ದರ್ಶನ್ ಅವರ ಈ ಸಿನಿಮಾದ ಮೇಲೆ ಬೇರೆ ಎಲ್ಲ ಸಿನಿಮಾಗಳಿಗಿಂತ ನಿರೀಕ್ಷೆ ಹೆಚ್ಚಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ದರ್ಶನ್ ರವರು ಪಕ್ಕ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ವಿಭಿನ್ನ ಲುಕ್ ಮೇಲೆ ಕೂಡ ಅಭಿಮಾನಿಗಳ ದೃಷ್ಟಿ ನೆಟ್ಟಿದೆ. ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ಜಗಪತಿ ಬಾಬು(Jagapathi Babu) ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಅವರ ಜೊತೆಗೆ ತಮಿಳು ಚಿತ್ರರಂಗದ ಸ್ಟಾರ್ ನಟ ಆಗಿರುವ ವಿಜಯ್ ಸೇತುಪತಿ(Vijay Sethupathi) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿದೆ. ಇನ್ನು ಅವರು ಈ ಸಿನಿಮಾಗೆ ಎಷ್ಟು ಸಂಭಾವನೆಯನ್ನು ಪಡೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರವನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ತಮಿಳು ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಸ್ಟಾರ್ ನಟ ಆಗಿರುವ ಹಾಗೂ ಬಾಲಿವುಡ್ ನಲ್ಲಿ ಕೂಡ ಇತ್ತೀಚಿಗಷ್ಟೇ ವೆಬ್ ಸೀರೀಸ್ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಿಜಯ್ ಸೇತುಪತಿ(Vijay Sethupathi) ರವರು ಕಾಟೇರ ಸಿನಿಮಾಗೆ ಭರ್ಜರಿ ಒಂಬತ್ತು ಕೋಟಿ ರೂಪಾಯಿ ಪಡೆದುಕೊಳ್ಳಬಹುದು ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿಯೇ ಇದ್ದರೆ ಖಂಡಿತವಾಗಿ ಒಂದೇ ಪರದೆಯ ಮೇಲೆ ದರ್ಶನ್(Dboss) ಹಾಗೂ ವಿಜಯ್ ಸೇತುಪತಿ ಅವರನ್ನು ನೋಡುವ ಭಾಗ್ಯ ಅಭಿಮಾನಿಗಳದ್ದಾಗಲಿದೆ.

Leave a Comment

error: Content is protected !!