Dboss: ಒಂದು ಸಿನಿಮಾಗೆ ಡಿಬಾಸ್ ಕೊಡೋ ಡೇಟ್ಸ್ ಇಷ್ಟೇನೆ. ಇದ್ರ ಮೇಲೆ ಡಿಬಾಸ್ ಬರೋದೆ ಇಲ್ಲ. ಅವ್ರೆ ಹೇಳಿರೋ ಸತ್ಯ ಇದು‌.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೆಯ ಸಾಲಿನಲ್ಲಿ ಕಾಣಿಸುತ್ತಿದ್ದಾರೆ. ವರ್ಷಕ್ಕೆ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿದ್ದರೂ ಕೂಡ ಅವರ ಜನಪ್ರಿಯತೆ ಎನ್ನುವುದು ಸಿನಿಮಾಗಳಿಗೂ ಮೀರಿ ದೊಡ್ಡಮಟ್ಟಿಗೆ ಇದೆ ಎಂದು ಹೇಳಬಹುದು. ನಿಜ ಜೀವನದಲ್ಲಿ ಕೂಡ ಜನರ ಕಷ್ಟಕ್ಕೆ ಮಿಡಿಯುವ ಮೂಲಕ ನಿಜವಾದ ಜನನಾಯಕನಾಗಿದ್ದಾರೆ ನಮ್ಮೆಲ್ಲರ ನೆಚ್ಚಿನ ಡಿ ಬಾಸ್(Dboss).

ಇನ್ನು ಅವರ ಮಾಸ್ ಸಿನಿಮಾಗಳನ್ನು ನೋಡಲೆಂದೆ ದೊಡ್ಡಮಟ್ಟದ ಮಾಸ್ ಅಭಿಮಾನಿಗಳು ಕೂಡ ಕನ್ನಡ ಚಿತ್ರರಂಗದಲ್ಲಿದ್ದಾರೆ. ಇನ್ನು ಅವರ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನೋಡಿಯೇ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ(Box Office Sultana) ಎಂಬುದಾಗಿ ವಿಮರ್ಶಕರು ಹಾಗೂ ಅಭಿಮಾನಿಗಳು ಕರೆಯುತ್ತಾರೆ. ಅವರ ಪ್ರತಿಯೊಂದು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸುತ್ತವೆ.

ಇದಕ್ಕಾಗಿ ಅವರ ಜೊತೆಗೆ ಸಿನಿಮಾ ಮಾಡಲು ನಿರ್ಮಾಪಕರ ಹಿಂಡೇ ಅವರನ್ನು ಅರಿಸಿಕೊಂಡು ಬರುತ್ತದೆ. ಸದ್ಯಕ್ಕೆ ಕಾಟೇರ(Kaatera) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಡಿ ಬಾಸ್ ರವರು ಒಂದು ಸಿನಿಮಾಗೆ ಹೆಚ್ಚೆಂದರೆ ಎಷ್ಟು ದಿನಗಳ ಕಾಲ ಡೇಟ್ಸ್ ವನ್ನು ನೀಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬನ್ನಿ ಇಂದಿನ ಲೇಖನಿಯಲ್ಲಿ ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ.

ಹೌದು ಗೆಳೆಯರೇ ಒಂದು ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಹೆಚ್ಚೆಂದರೆ 70 ದಿನಗಳ ಕಾಲ ತಮ್ಮ ಕಾಲ್ ಶೀಟ್ ನೀಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಯಾವುದೇ ಸಿನಿಮಾಗಳಿಗೆ ಕೂಡ ಡೇಟ್ಸ್ ನೀಡುವುದಿಲ್ಲ. ಇದನ್ನು ಯಾವುದೋ ಗಾಳಿ ಸುದ್ದಿ ಕೇಳಿ ಹೇಳುತ್ತಿರುವುದಲ್ಲ ಬದಲಾಗಿ ಸ್ವತಃ ದರ್ಶನ್ ರವರೆ ಹೇಳಿರುವುದನ್ನು ನಿಮ್ಮ ಎದುರು ಹೇಳುತ್ತಿದ್ದೇವೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!