Dboss ಪಕ್ಕದಲ್ಲೇ ಲ್ಯಾಂಬೋರ್ಗಿನಿ ಇದ್ರೂ ಕೆಲಸದವರ ಜೊತೆಗೆ ಮಲಗಿದ ಡಿಬಾಸ್. ವೀಡಿಯೋ ವೈರಲ್!

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವಾರು ವಿವಾ’ದಾತ್ಮಕ ವಿಚಾರಗಳಲ್ಲಿ ಕೇಂದ್ರಬಿಂದುವಾಗಿ(Centre Point) ಕಾಣಿಸಿಕೊಂಡಿದ್ದಾರೆ. ಅವರು ಬೇಡ ಎಂದರು ಕೂಡ ಇಂತಹ ವಿಚಾರಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಇಂತಹ ಅಹಿತಕರ ಘಟನೆಗಳು ಅವರ ಜೀವನದಲ್ಲಿ ನಡೆದಿವೆ ಎಂದು ಹೇಳಬಹುದಾಗಿದೆ. ಇವುಗಳು ಡಿ ಬಾಸ್ ಅವರ ಮನಸ್ಸನ್ನು ಕುಗ್ಗಿಸಿವೆ ಎಂದರೆ ತಪ್ಪಾಗಲಾರದು.

ವಿಶೇಷವಾಗಿ ಪಬ್ ನಲ್ಲಿ ನಡೆದಂತಹ ಘಟನೆ ಹಾಗೂ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆಗಳು ಸಾಕಷ್ಟು ವ್ಯತರಿಕ್ತ ಪರಿಣಾಮವನ್ನು ಬೀರಿದೆ ಎಂದು ಹೇಳಬಹುದಾಗಿದೆ. ಏನು ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶ್ರೀಮಂತ ಜೀವನವನ್ನೇ ನಡೆಸುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿರುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಫಾರ್ಮ್ ಹೌಸ್(Farm House) ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾರೆ.

ಅದರಲ್ಲಿ ಇತ್ತೀಚಿಗೆ ಯೂಟ್ಯೂಬ್ ಚಾನೆಲ್(YouTube Channel) ಸಂದರ್ಶನ ಒಂದರಲ್ಲಿ ಕ್ಯಾಮರಾ ಕಣ್ಣಿನಲ್ಲಿ ಬಿದ್ದಂತಹ ಕೆಲವೊಂದು ದೃಶ್ಯಗಳು ದರ್ಶನ್ ಅವರು ತಮ್ಮ ಜೀವನದಲ್ಲಿ ಎಷ್ಟು ಸರಳವಾಗಿ ಇರುತ್ತಾರೆ ಎಂಬುದಕ್ಕೆ ಜೀವಂತ ಉದಾಹರಣೆಯಂತಿವೆ. ಹೌದು ಮಿತ್ರರೇ ಆ ಯೂಟ್ಯೂಬ್ ವಿಡಿಯೋದಲ್ಲಿ ದರ್ಶನ್ ಅವರು ಇತ್ತೀಚಿಗಷ್ಟೇ ಪಕ್ಕದಲ್ಲಿ ಲ್ಯಾಂಬೋರ್ಗಿನಿ(Lamborghini) ಕಾರ್ ಪಾರ್ಕ್ ಆಗಿದ್ದರೂ ಕೂಡ ಕೆಲಸದವರೊಂದಿಗೆ ಮಂಚದ ಮೇಲೆ ಹೊರಗೆ ಮಲಗಿರುವುದು ಕಂಡುಬಂದಿತ್ತು.

ಕೇವಲ ಎಷ್ಟು ಮಾತ್ರವಲ್ಲದೆ ಒಬ್ಬ ರೈತ ಹಾಗೆ ಪಶು ಸಂಗೋಪನೆ ಹಾಗೂ ಕೃಷಿಯ(Agricultural) ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೆಚ್ಚಿನ ಆಸಕ್ತಿಯನ್ನು ಬಳಸಿಕೊಂಡು ಅದಕ್ಕೆ ಬೇಕಾಗಿರುವಂತಹ ಕೆಲಸವನ್ನು ತಾವೇ ಖುದ್ದಾಗಿ ಮಾಡುತ್ತಿದ್ದಾರೆ. ಸಿನಿಮಾ ನಂತರದ ಜೀವನದ ಯೋಜನೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗಲೇ ಹಾಕಿಕೊಂಡಂತಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇತ್ತೀಚೆಗೆ ನಡೆಯುತ್ತಿರುವಂತಹ ಅಹಿತಕರ ಘಟನೆಗಳು ಇಲ್ಲಿಗೆ ಬಂದು ನಡೆಸುವಂತೆ ಮಾಡುತ್ತಿವೆ ಎಂಬುದಾಗಿ ಹೇಳುತ್ತಿದ್ದಾರೆ. ಇವೆರಡರಲ್ಲಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!