Darshan Thoogudeepa: ಡಿ ಬಾಸ್ ನಟನೆಯ ಸಿನಿಮಾದಲ್ಲಿ ಎಂಟ್ರಿ ನೀಡಲಿದ್ದಾರೆ ಕನ್ನಡದ ಖ್ಯಾತ ನಟಿ!

Dboss Kaatera ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗಿನ ಅತ್ಯಂತ ಬಹುನಿರೀಕ್ಷಿತ ಸಿನಿಮಾಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕಾಟೇರ(Kaatera) ಸಿನಿಮಾ ಕೂಡ ಒಂದಾಗಿದೆ. ಇತ್ತೀಚಿಗಷ್ಟೇ ಇದರ ಅಧಿಕೃತ ಟೈಟಲ್ ಅನೌನ್ಸ್ಮೆಂಟ್ ಆಗಿದ್ದು ಅದಾಗಲೇ ಚಿತ್ರೀಕರಣ ಕೂಡ ಸಾಕಷ್ಟು ಪೂರ್ಣಗೊಳಿಸಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಕನಸಿನ ರಾಣಿ ಮಾಲಾಶ್ರೀ(Malashree) ಅವರ ಮಗಳಾಗಿರುವ ರಾಧನ ರಾಮ್(Radhana Ram) ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು ಖಂಡಿತವಾಗಿ ಮೊದಲ ಸಿನಿಮಾದಲ್ಲಿ ದರ್ಶನ್ ಅವರಂತಹ ದೊಡ್ಡ ನಟನ ಜೊತೆಗೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ಅವರ ಅದೃಷ್ಟ ಎಂದು ಭಾವಿಸಬಹುದಾಗಿದೆ.

ಈಗ ಸದ್ದು ಮಾಡುತ್ತಿರುವುದು ಈ ವಿಚಾರಕ್ಕಲ್ಲ ಬದಲಾಗಿ ಕಾಟೇರ(Kaatera) ಸಿನಿಮಾದಲ್ಲಿ ದರ್ಶನ ಅವರ ಜೊತೆಗೆ ಮತ್ತೊಬ್ಬ ಕನ್ನಡ ಚಿತ್ರರಂಗದ ಖ್ಯಾತ ನಟಿ ನಟಿಸುತ್ತಿದ್ದಾರೆ ಎನ್ನುವ ವಿಚಾರಕ್ಕಾಗಿ. ಅತಿಥಿಪಾತ್ರದಲ್ಲಿ ಕಾಟೇರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಕನ್ನಡದ ಸ್ಟಾರ್ ನಟಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಖಂಡಿತವಾಗಿ ಹೆಸರನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಎರಡನೇ ಮಾತಿಲ್ಲ.

ಹೌದು ಮಿತ್ರರೇ ಡಿ ಬಾಸ್(Dboss) ನಟನೆಯ ಕಾಟೇರ ಸಿನಿಮಾದಲ್ಲಿ ಅವರ ಜೊತೆಗೆ ಅತಿಥಿ ಪಾತ್ರದಲ್ಲಿ ನಟಿ ಅಮೂಲ್ಯ(Actress Amulya) ಅವರು ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೆ ಕಂಬ್ಯಾಕ್ ಮಾಡಲು ಸಿದ್ಧರಾಗಿ ನಿಂತಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಇದು ಎಷ್ಟರಮಟ್ಟಿಗೆ ಸತ್ಯವಾದ ಸುದ್ದಿ ಎಂಬುದನ್ನು ಮುಂದಿನ ದಿನಗಳಲ್ಲಿ ಸಿನಿಮಾ ತಂಡದಿಂದ ಅಧಿಕೃತವಾಗಿ ಸುದ್ದಿ ಹೊರಬಂದ ಮೇಲೆ ನಾವು ಕಾದು ನೋಡಬೇಕಾಗಿದೆ.

Leave a Comment

error: Content is protected !!