ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಪ್ಪಲಿ ಎಸೆದ ಹುಡುಗ ಇವನೇನಾ?

Dboss hospet kranti : ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹಲವಾರು ಸಮಯಗಳಿಂದಲೂ ಕೂಡ ಕಿತ್ತಾಟ ನಡೆದುಕೊಂಡು ಬರುತ್ತಲೇ ಇತ್ತು. ಆ ಕಡೆ ದರ್ಶನ್ ಅಭಿಮಾನಿಗಳು ಅಪ್ಪು ಅವರ ಮರಣದ ಸಂದರ್ಭದಲ್ಲಿ ಹೊರಬಂದಂತಹ ಚಿತ್ರಗಳನ್ನು ಇಟ್ಟುಕೊಂಡು ಹಾಗೂ ಇನ್ನು ಕೆಲವು ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿದರೆ, ಈ ಕಡೆ ಪವರ್ ಸ್ಟಾರ್ ಅಭಿಮಾನಿಗಳು ಅದರ ವಿರುದ್ಧವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿ ಕ್ರಾಂತಿ ಸಿನಿಮಾವನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂಬುದಾಗಿ ತಾಕೀತು ಮಾಡಿದ್ದರು.

ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ ನಂತರ ಡಿ ಬಾಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಅಡ್ಡಕ್ಕೆ ಬಂದು ರಿಲೀಸ್ ಮಾಡ್ತಾ ಇದ್ದೀವಿ ಏನು ಮಾಡುತ್ತಿರುವ ಮಾಡ್ಕೊಳ್ಳಿ ಎಂಬುದಾಗಿ ಪಂಥಾಹ್ವಾನ ಮಾಡುತ್ತಾರೆ. ಇದಕ್ಕೆ ಕೋಪಿತರಾದ ಅಪ್ಪು ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿಂತ ಹೆಚ್ಚಿನ ಮಟ್ಟದಲ್ಲಿ ಹೊಸಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಅಪ್ಪು ಅವರ ಕಟೌಟ್ ಬ್ಯಾನರ್ ಗಳನ್ನು ನಿಲ್ಲಿಸಿ ಸೆಲೆಬ್ರೇಶನ್ ಮಾಡುತ್ತಾರೆ..

ಆದರೆ ಅದು ಇಷ್ಟಕ್ಕೆ ನಿಲ್ಲಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎದುರೇ ಅಪ್ಪು ಅಪ್ಪು ಎಂಬುದಾಗಿ ಕಾರ್ಯಕ್ರಮದಲ್ಲಿ ಜಯ ಘೋಷಗಳು ಕೂಡ ಅವರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ನಡೆಯಿತು. ಎಲ್ಲಕ್ಕಿಂತ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಪ್ಪಲಿ ಎಸೆತವನ್ನು ಕೂಡ ಅಲ್ಲಿ ಮಾಡಲಾಯಿತು.

ಅಸಮಾಧಾನಗಳು ಭಿನ್ನಾಭಿಪ್ರಾಯಗಳು ಒಂದು ತೂಕವಾದರೆ ಈ ಕಡೆ ಚಪ್ಪಲಿಯನ್ನು ಎಸೆದಿರುವುದು ನಿಜಕ್ಕೂ ಕೂಡ ಅತ್ಯಂತ ಖಂಡನೀಯ ಕೃತ್ಯ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಭಿಮಾನಿಗಳ ನಡುವೆ ನಡೆದಂತಹ ಕಿತ್ತಾಟವನ್ನು ಒಬ್ಬ ಕನ್ನಡ ಚಿತ್ರರಂಗದ ಮೇರು ನಟನ ಮೇಲೆ ತೋರಿಸುವುದು ಎಷ್ಟರ ಮಟ್ಟಿಗೆ ನ್ಯಾಯ ಎಂಬುದನ್ನು ಯಾರು ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದರ ನಡುವೆ ರಾಜ್ಯಾದ್ಯಂತ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೇರಿದಂತೆ ಡಿ ಬಾಸ್ ಅಭಿಮಾನಿಗಳು ಚಪ್ಪಲಿ ಎಸೆದವರನ್ನು ಹುಡುಕಿ ಅವರಿಗೆ ಕಾನೂನಾತ್ಮಕ ಶಿಕ್ಷೆಯನ್ನು ನೀಡಬೇಕು ಎಂಬುದಾಗಿ ಆಗ್ರಹಿಸುತ್ತಿದ್ದಾರೆ.

Dbos hhospet incident

ಇದರ ನಡುವೆ ನಿಜಕ್ಕೂ ಈ ಕಾರ್ಯವನ್ನು ಮಾಡಿರೋದು ಯಾರು ಎಂಬುದಾಗಿ ಎಲ್ಲರೂ ಕೂಡ ಸಿಕ್ಕಿರುವಂತಹ ವಿಡಿಯೋ ಫೂಟೇಜ್ ಗಳಲ್ಲಿ ಹುಡುಕುತ್ತಿದ್ದಾರೆ. ಇದರಲ್ಲಿ ಕಾರ್ಯಕ್ರಮಕ್ಕೂ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಅನುಚಿತವಾಗಿ ಹೇಳಿಕೆಯನ್ನು ನೀಡುತ್ತಿದ್ದ ಒಬ್ಬ ಇರಬಹುದು ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಿದ್ದು ಮುಂದಿನ ದಿನಗಳಲ್ಲಿ ನಡೆಯಲಿರುವ ತನಿಖೆಯ ನಂತರವಷ್ಟೇ ನಿಜಕ್ಕೂ ಯಾರು ಮಾಡಿದ್ದಾರೆ ಎಂಬುದಾಗಿ ಖಾತರಿ ಆಗಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!