Kabzaa: ರಿಲೀಸ್ ಆಗ್ತಿರೋದು ಕಬ್ಜಾ ಫಿಲಂ! ಆದರೆ ಖುಷಿಯಾಗ್ತಿರೋದು ದರ್ಶನ್ ಅಭಿಮಾನಿಗಳಿಗೆ! ಇಲ್ಲಿ ಎಲ್ಲಾ ಉಲ್ಟಾಪಲ್ಟಾ.

Darshan Thoogudeepa ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಉಪ್ಪಿ ಅವರ ಜೊತೆಗೆ ಶಿವಣ್ಣ(Shivanna) ಹಾಗೂ ಕಿಚ್ಚ(Kiccha) ಕೂಡ ಇರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಕಣ್ಣಿಗೆ ಹಬ್ಬ ನೀಡುವಂತಹ ಸನ್ನಿವೇಶ ಬಂದಿದೆ ಎಂದು ಹೇಳಬಹುದಾಗಿದೆ.

ಸಿನಿಮಾದ ಟ್ರೈಲರ್ ಈಗಾಗಲೇ ಪರಭಾಷೆಗಳನ್ನು ಕೂಡ ಮೆಚ್ಚಿಸಿದ್ದು ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಪರಭಾಷ ಪ್ರೇಕ್ಷಕರಲ್ಲಿ ಕೂಡ ಹೆಚ್ಚಿತ್ತು. ಈಗಾಗಲೇ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ಎಲ್ಲಾ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಹರಿದು ಬರುತ್ತಿದೆ ಎಂಬುದಾಗಿ ಕೂಡ ಸಿನಿಮಾ ಪಂಡಿತರ ಮಾತುಗಳಿಂದ ತಿಳಿದುಬರುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಸಿನಿಮಾ ದೊಡ್ಡಮಟ್ಟದ ಕಲೆಕ್ಷನ್ ಮಾಡುವ ಸಾಧ್ಯತೆ ಕೂಡ ಇದೆ.

ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಅವರ ಬರ್ತಡೆ ದಿನದಂದು ಈ ಸಿನಿಮಾ ಬಿಡುಗಡೆ ಕಂಡಿದ್ದು ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಅಭಿಮಾನಿಗಳು ಕೂಡ ಸಂತೋಷದಿಂದ ಇದ್ದಾರೆ. ಆದರೆ ಅವರು ಸಂತೋಷದಿಂದ ಇರುವುದಕ್ಕೆ ಕಾರಣ ಕಬ್ಜಾ ಸಿನಿಮಾದ ರಿಲೀಸ್ ಅಲ್ಲ ಬದಲಾಗಿ ಕ್ರಾಂತಿ(Kranti) ಸಿನಿಮಾ. ಅರೆ ಇದೇನಪ್ಪಾ ಕ್ರಾಂತಿ ಸಿನಿಮಾಗೂ ಕಬ್ಜಾ(Kabzaa ) ಸಂಬಂಧ ಎನ್ನುವುದಾಗಿ ನೀವು ಕೇಳಬಹುದು ಬನ್ನಿ ತಿಳಿದುಕೊಳ್ಳೋಣ.

ಹೌದು ಮಿತ್ರರೇ ಕಬ್ಜಾ ಸಿನಿಮಾ ಬಿಡುಗಡೆಯಾಗುವ ಈ ಸಂದರ್ಭದಲ್ಲಿ ಕ್ರಾಂತಿ ಸಿನಿಮಾ ಕೂಡ ಬಿಡುಗಡೆಯಾಗಿ ತನ್ನ 50ನೇ ದಿನವನ್ನು ಚಿತ್ರಮಂದಿರಗಳಲ್ಲಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಇದೇ ವಿಚಾರ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು. ಡಿ ಬಾಸ್(Dboss) ಅಭಿಮಾನಿಗಳು ಕೂಡ ಈ ವಿಚಾರವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಬ್ಜಾ ಸಿನಿಮಾವನ್ನು ನೀವು ಕೂಡ ನೋಡಿದ್ರೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!