ಹೊಸಪೇಟೆಯಲ್ಲಿ ನಡೆದಿರುವ ಅವಮಾನಕ್ಕೆ ಸಡ್ಡು ಹೊಡೆಯಲು ಸಿದ್ದರಾದ ಡಿ ಬಾಸ್ ಅಭಿಮಾನಿಗಳು ಮಾಡಲು ಹೊರಟಿರುವುದೇನು ಗೊತ್ತಾ?

D boss Darshan Hospete incident ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗಿರುವ ವ್ಯಕ್ತಿಗಳು ಮಾಡಿರುವ ಅವಮಾನ ಗೊತ್ತಿರುವ ವಿಚಾರವಾಗಿದೆ. ಈ ವಿಚಾರವಾಗಿ ಇಡೀ ಕರ್ನಾಟಕ ರಾಜ್ಯವೇ ದರ್ಶನ್ ಅವರ ಪರವಾಗಿ ನಿಂತು ಈ ಕೃತ್ಯಕ್ಕೆ ಕಾರಣ ಆದವರನ್ನು ಹಿಡಿದು ಶಿಕ್ಷಿಸಬೇಕು ಎಂಬುದಾಗಿ ಆಗ್ರಹಿಸಿತ್ತು. ಆದರೆ ಈ ಘಟನೆ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಅಸಮಾಧಾನವನ್ನು ಕೂಡ ಮೂಡಿಸುತ್ತೆ.

D boss Darshan

ಆದರೆ ಈ ಅಸಮಾಧಾನ ಎನ್ನುವುದು ನಿಜಕ್ಕೂ ಕೂಡ ಈಗ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದು ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ. ಎರಡು ಅಭಿಮಾನಿಗಳು ಕೂಡ ತಮ್ಮ ನಟನ ವಿರುದ್ಧವಾಗಿ ಹೇಳಿ ಬರುತ್ತಿರುವ ಅಪವಾದಗಳ ಕುರಿತಂತೆ ಅದರ ವಿರುದ್ಧವಾಗಿ ರೋಡಿಗಿಳಿದು ಪ್ರತಿಭಟನೆಯನ್ನು ( Protest ) ಮಾಡುತ್ತಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆ ( Bronze Statue ) ಬಳ್ಳಾರಿಯ ಹೊಸಪೇಟೆಯಲ್ಲಿ ಇದೆ.

ದರ್ಶನ್ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ನಡೆದಿರುವಂತಹ ಅವಮಾನಕ್ಕೆ ಪ್ರತಿಕಾರವನ್ನು ತೀರಿಸಿಕೊಳ್ಳಲು ದರ್ಶನ ಅಭಿಮಾನಿಗಳು ಈಗ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆ ( Statue ) ಬಳ್ಳಾರಿಯ ಹೊಸಪೇಟೆಯಲ್ಲಿದೆ. ಇದಕ್ಕೆ ಸೆಡ್ಡು ಹೊಡೆಯುವಂತೆ ಇದಕ್ಕೆ ಸರಿಯಾದ ಕಾರ್ಯವನ್ನು ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸಪೇಟೆಯ ಅಭಿಮಾನಿಗಳು ನಿರ್ಧರಿಸಿದ್ದಾರೆ ಅದೇನೆಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯಶ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ರಾಕಿ ಭಾಯ್. ಯಶ್ ಬರೆದ್ರು ಭಾವುಕ ಪತ್ರ.

ಹೌದು ಗೆಳೆಯರೇ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ಡಿ ಬಾಸ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆ ಗಿಂತ ಅತ್ಯಂತ ಎತ್ತರವಾಗಿರುವ ಪ್ರತಿಮೆಯನ್ನು ಡಿ ಬಾಸ್ ಅವರ ಹೆಸರಿನಲ್ಲಿ ನಿರ್ಮಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಡಿ ಬಾಸ್ ಅವರಿಗೆ ಅವಮಾನ ನಡೆದಿರುವಂತಹ ಅದೇ ವೃತ್ತದಲ್ಲಿ (Circle ) ಪ್ರತಿಮೆ ತಲೆ ಎತ್ತಿ ನಿಲ್ಲಲಿದೆ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿದೆ ಇದು ಎಷ್ಟರಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Comment

error: Content is protected !!