Dboss: ಡಿ ಬಾಸ್ ಹಾಕೋಳೋ ಒಂದು ಜೀನ್ಸ್ ಪ್ಯಾಂಟ್ ಬೆಲೆ ಎಷ್ಟಿರುತ್ತೆ ಗೊತ್ತಾ? ಇದು ಡಿ ಬಾಸ್ ರೇಂಜ್ ಅಂದ್ರೆ.

Darshan Thoogudeepa ಡಿ ಬಾಸ್ ರವರನ್ನು ನೋಡಿದಾಗ ಖಂಡಿತವಾಗಿ ನಾವು ಮೊದಲು ಹೇಳುವ ವಿಚಾರ ಏನೆಂದರೆ ಅವರು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮಾಸ್ ನಾಯಕ ನಟ ಎನ್ನುವುದು. ಹೌದು ಅದರಲ್ಲಿ ಎರಡು ಮಾತಿಲ್ಲ ಆದರೆ ಸ್ಟೈಲ್ ವಿಚಾರದ ಬಗ್ಗೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಯಾರಿಗೇನು ಕಮ್ಮಿ ಇಲ್ಲ. ಅದನ್ನು ಹಲವಾರು ಬಾರಿ ಕೂಡ ನಾವು ನೋಡಿದ್ದೇವೆ.

ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಾಯಕ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸದ್ಯಕ್ಕೆ ಕಾಟೇರ(Kaatera) ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಾಟೇರ ಸಿನಿಮಾ 70ರ ದಶಕದಲ್ಲಿ ಮೂಡಿಬರುವಂತಹ ಚಿತ್ರಕಥೆಯನ್ನು ಈ ಸಿನಿಮಾ ಹೊಂದಿದೆ. ಕಾಟೆರಾ ಈಗಾಗಲೇ ಎಲ್ಲಾ ಕಡೆ ಸದ್ದು ಮಾಡುತ್ತಿರುವುದಕ್ಕೆ ಮತ್ತೊಂದು ಕಾರಣ ಈ ಸಿನಿಮಾದಲ್ಲಿ ಡಿ ಬಾಸ್(Dboss) ಕಾಣಿಸಿಕೊಂಡಿರುವ ರೀತಿ.

Dboss – Darshan Thoogudeepa

ಕೈಯಲ್ಲಿ ಮ’ಚ್ಚು ಹಿಡಿದು ಸೊಂಟಕ್ಕೆ ಲುಂಗಿ ಸಿಕ್ಕಿಸಿಕೊಂಡು ಪಕ್ಕ ನಾಟಿ ಸ್ಟೈಲ್ ನಲ್ಲಿ ಕಂಡುಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಲುಕ್ ಪ್ರತಿಯೊಬ್ಬರನ್ನು ಕೂಡ ಸೆಳೆದಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಸ್ಟೈಲ್ ವಿಚಾರಕ್ಕೆ ಬರುವುದಾದರೆ ಅವರು ಧರಿಸುವಂತಹ ಒಂದು ಜೀನ್ಸ್ ಪ್ಯಾಂಟ್ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ತಲೆ ತಿರುಗಿ ಬೀಳ್ತೀರಾ.

ಹೌದು ಗೆಳೆಯರೇ, ವಿದೇಶಿ ಬ್ರಾಂಡೆಡ್ ಕಂಪನಿಯ ಜೀನ್ಸ್ ಪ್ಯಾಂಟ್ ಗಳನ್ನೇ ಧರಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಧರಿಸುವ ಜೀನ್ಸ್ ಪ್ಯಾಂಟುಗಳ ಬೆಲೆ ಏನಿಲ್ಲವೆಂದರು 1 ಲಕ್ಷದಿಂದ ಹಿಡಿದು 10 ಲಕ್ಷದವರೆಗೂ ಕೂಡ ಇರುತ್ತವೆ. ನೋಡುವುದಕ್ಕೆ ಸಿಂಪಲ್ ಆಗಿ ಕಾಣಿಸಿಕೊಂಡರು ಕೂಡ ಡಿ ಬಾಸ್(Dboss Darshan) ಧರಿಸುವ ಬಟ್ಟೆಗಳ ಬೆಲೆ ಮಾತ್ರ ಗಗನದ ಎತ್ತರಕ್ಕೆ ಇರುತ್ತವೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!