ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮುಂದೆ ಡಿ ಬಾಸ್ ಗರಂ ಆಗಿದ್ದೇಕೆ ಗೊತ್ತಾ


ಪುನೀತ್ ರಾಜ್ ಕುಮಾರ್ ಅವರನ್ನು ಕರೆದುಕೊಂಡು ಸುಮಾರು ನಾಲ್ಕರಿಂದ 4 ತಿಂಗಳು ಕಳೆಯುತ್ತಿವೆ. ಇನ್ನೂ ಕೂಡ ಕರ್ನಾಟಕದಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆದರೆ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಸಿನಿಮಾಗಳು ಬಿಡುಗಡೆಯಾದರೂ ಸಹ ಪುನೀತ್ ರಾಜ್ ಕುಮಾರ್ ಅವರ ಮೊದಲು ಪರದೆಯ ಮೇಲೆ ಫೋಟೋ ಕಾಣಿಸುತ್ತದೆ. ಇಲ್ಲೇ ಗೊತ್ತಾಗುತ್ತೆ ಈ ವ್ಯಕ್ತಿಯನ್ನ ಕಣ್ಣೋಟ ಪುರಜನರು ಎಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು ಎಂದು.

ಪುನೀತ್ ರಾಜ್ ಕುಮಾರ್ ಅವರು ತೀರಿಕೊಂಡ ನಂತರ ದೊಡ್ಡ ಮನೆಯ ಜವಾಬ್ದಾರಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹೆಗಲ ಮೇಲೆ ಹೊತ್ತು ಒತ್ತಡವನ್ನು ನಿಭಾಯಿಸುತ್ತಿದ್ದಾರೆ. ನಿಧಾನವಾಗಿ ಅಶ್ವಿನಿಯವರು ಸಭೆ ಸಮಾರಂಭಗಳಿಗೆ ಭಾಗಿಯಾಗುತ್ತಿದ್ದಾರೆ ಮತ್ತು ತಮ್ಮ ದುಃಖದ ದಿನಗಳನ್ನು ಮರೆಸಲು ಜನರೊಂದಿಗೆ ಬೆರೆಯುತ್ತಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಂಡು ಬಂದಿದ್ದ ಪಿಆರ್ ಕೆ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈಗ ತುಂಬಾ ಬ್ಯುಸಿ. ತಮ್ಮನ್ನು ತಾವು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಇಲ್ಲವಾದರೆ ಸಭೆ ಸಮಾರಂಭಗಳಲ್ಲಿ ಭಾಗಿ ಆಗುತ್ತಾರೆ. ಅಶ್ವಿನಿ ಅವರು ಇತ್ತೀಚೆಗೆ ಫಿಲ್ಮ್ ಫೆಸ್ಟಿವಲ್ ಸಮಾರಂಭಕ್ಕೆ ಹೋಗಿದ್ದರು. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಹಾಗೆ ಮುಖ್ಯಮಂತ್ರಿಗಳಾದ ಸಿಎಂ ಬೊಮ್ಮಾಯಿಯವರು ಕೂಡ ಬಂದಿದ್ದರು. ಹಾಗೆ ನಟ ದರ್ಶನ್ ಅವರು ಕೂಡ ಆಗಮಿಸಿದ್ದರು. ನಟ ದರ್ಶನ್ ಅವರು ಸಭೆಯಲ್ಲಿ ಇದ್ದಕ್ಕಿದ್ದಂತೆ ತುಂಬಾ ಕೋಪಗೊಂಡಿದ್ದಾರೆ.

ಪುನೀತ್ ಪತ್ನಿ ಅಶ್ವಿನಿ ಮತ್ತು ಸಿಎಂ ಬೊಮ್ಮಾಯಿಯವರ ಮುಂದೆ ನಟ ದರ್ಶನ್ ಗುಡುಗಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ.. ನಟ ದರ್ಶನ್ ಅವರು ಸಭೆಗೆ ಆಗಮಿಸಿದ ತಕ್ಷಣವೇ ಅಲ್ಲಿ ನೆರೆದಿದ್ದ ದರ್ಶನ್ ಅಭಿಮಾನಿಗಳು ಜೋರಾಗಿ ಕಿರುಚುವುದು ಮತ್ತು ಕೂಗಾಡುವುದಕ್ಕೆ ಶುರು ಮಾಡ್ತಾರೆ. ಇದರಿಂದ ಸಮಾರಂಭದಲ್ಲಿ ಉಪಸ್ಥಿತರಾಗಿದ್ದ ಗಣ್ಯರಿಗೆ ಸ್ವಲ್ಪ ಮುಜುಗರ ಉಂಟು ಮಾಡಿದೆ. ಸಿಎಂ ಬೊಮ್ಮಾಯಿ ಮತ್ತು ಪುನೀತ್ ಅವರ ಪತ್ನಿ ಅಶ್ವಿನಿ ಮುಂದೆ ತನ್ನ ಅಭಿಮಾನಿಗಳು ನಡೆದುಕೊಂಡ ರೀತಿ ಡಿ ಬಾಸ್ ಅವರಿಗೆ ಸ್ವಲ್ಪ ಕೂಡ ಇಷ್ಟವಾಗಲಿಲ್ಲ.

ತಕ್ಷಣ ಡಿ ಬಾಸ್ ವೇದಿಕೆಯ ಮೇಲೆ ಬಂದು ಮೈಕ್ ಮುಂದೆ ನಿಂತು ಬಂದು ತನ್ನ ಅಭಿಮಾನಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಗಣ್ಯ ವ್ಯಕ್ತಿಗಳ ಮುಂದೆ ಹೇಗೆ ವರ್ತಿಸಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ವಿನಯಿತೆಯಿಂದ ನಡೆದುಕೊಳ್ಳಿ ಎಂದು ಅಭಿಮಾನಿಗಳಿಗೆ ತಿಳುವಳಿಕೆ ನೀಡಿದ್ದಾರೆ. ಸಿಎಂ ಅವರು ಮಾತನಾಡುವಾಗ ಮರ್ಯಾದೆ ಕೊಡಬೇಕು, ಪ್ರತಿಯೊಬ್ಬರು ಸೈಲೆಂಟಾಗಿ ಇರಬೇಕು. ಆಟ ಹುಡುಗಾಟ ಆಮೇಲೆ ಆಡಿಕೊಳ್ಳಿ ದಯವಿಟ್ಟು ಪ್ಲೀಸ್.. ಎಂದು ಕೋಪದಿಂದ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ


Leave A Reply

Your email address will not be published.