Kaatera: ದರ್ಶನ್ ನಟನೆಯ ಬಹುನಿರೀಕ್ಷಿತ ಕಾಟೇರ ಸಿನಿಮಾ ಯಾವಾಗ ಬಿಡುಗಡೆಯಾಗ್ತಿದೆ ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ತರುಣ್ ಸುಧೀರ್(Tharun Sudhir) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಟೇರ(Kaatera) ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ ಎಂಬುದಾಗಿ ಸುದ್ದಿ ಕೇಳಿ ಬರುತ್ತಿದೆ. ಸಿನಿಮಾ ಟೈಟಲ್ ಅನೌನ್ಸ್ಮೆಂಟ್ ನಿಂದಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.

ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ರಾಧನ ರಾಮ್(Radhana Ram) ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಾಕಷ್ಟು ಜನರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ(Vijay Sethupathy) ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಕಾಟೇರ ಪಾತ್ರದಲ್ಲಿ ಸಖತ್ ಮಾಸ್ ಹಾಗೂ ಲೋಕಲ್ ಆಗಿ ಕಾಣಿಸಿಕೊಳ್ಳುವುದು ಕೂಡ ಅಭಿಮಾನಿಗಳಲ್ಲಿ ಸಂತೋಷ ತಂದಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ನೈಜ ಘಟನೆಯನ್ನು ಆಧರಿಸಿದಂತಹ ಕಥೆ ಇರಲಿದ್ದು ಖಂಡಿತವಾಗಿ ನಿಜವಾದ ಘಟನೆಗಳನ್ನು ನೋಡುವಂತಹ ಸಿನಿಮಾ ಪ್ರೇಕ್ಷಕರಿಗೆ ಇದೊಂದು ಹಬ್ಬದೂಟವಾಗಲಿದೆ. ಇನ್ನು ಕಾಟೇರ ಸಿನಿಮಾ(Kaatera Film) ಯಾವಾಗ ಬಿಡುಗಡೆ ಆಗಬಹುದು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕೂಡ ಉತ್ತರ ದೊರಕಿದಂತಿದೆ. ಹಾಗಿದ್ದರೆ ಯಾವಾಗ ಕಾಟೇರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬುದನ್ನು ತಿಳಿಯೋಣ ಬನ್ನಿ.

ಇದೇ ಡಿಸೆಂಬರ್ ತಿಂಗಳಿನ ಮಧ್ಯಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ ಬಹುನಿರೀಕ್ಷಿತ ಕಾಟೇರ ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸಾಕಷ್ಟು ಸಮಯಗಳ ನಂತರ ಡಿ ಬಾಸ್(Dboss) ಈ ಸಿನಿಮಾದ ಮೂಲಕ ದೊಡ್ಡ ಪದದ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಈ ಸಿನಿಮಾದ ಕುರಿತಂತೆ ನಿರೀಕ್ಷೆ ಹೆಚ್ಚಿದೆ.

Leave a Comment

error: Content is protected !!