ದರ್ಶನ್ ಅವರನ್ನು ಅಪ್ಪು ಎಂದು ಕರೆಯುತ್ತಿದ್ದದ್ದು ಯಾರು? ಯಾಕೆ?

Darshan called as appu :ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star Darshan) ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅದರಲ್ಲಿಯೂ ವಿಶೇಷವಾಗಿ ಮಾಸ್ ಅಭಿಮಾನಿಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುವಂತಹ ಸ್ಟಾರ್ ಆಗಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ವಿರುದ್ಧ ನಿಂತರು ಕೂಡ ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಬೇಸ್ ಗೆ ಯಾರು ಏನು ಕೂಡ ಮಾಡಿಕೊಳ್ಳುವ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಕ್ರಾಂತಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಕಷ್ಟದಲ್ಲಿಯೇ ತಮ್ಮ ಸಿನಿಮಾ ಕರಿಯರ್ ಅನ್ನು ಪ್ರಾರಂಭಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವಾರು ಧಾರವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಇಂದು ಬಾಕ್ಸಾಫೀಸ್ ಸುಲ್ತಾನ ಆಗಿ ತಮ್ಮ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟವನ್ನು ಅನುಭವಿಸುತ್ತಿದ್ದಾರೆ. ಇನ್ನು ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾದ ಪ್ರಮೋಷನ್ ಹಾಗೂ ಯೂಟ್ಯೂಬ್ ಸಂದರ್ಶನಗಳು ಜೋರಾಗಿ ನಡೆಯುತ್ತಿವೆ.

Darshan called as appu

ಈ ಸಂದರ್ಶನದ ನಡುವಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೈಯಕ್ತಿಕ ಜೀವನಕ್ಕೆ ಹಾಗೂ ಬಾಲ್ಯ ಜೀವನಕ್ಕೆ ಸಂಬಂಧಿಸಿದಂತಹ ಹಲವಾರು ವಿಚಾರಗಳು ಹೊರ ಬರುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ಖಳ ನಾಯಕರಲ್ಲಿ ಒಬ್ಬರಾಗಿರುವ ತೂಗುದೀಪ ಶ್ರೀನಿವಾಸ ಅವರು ತಮ್ಮ ಮಗನಿಗೆ ಬಾಲ್ಯದಲ್ಲಿ ಯಾವ ಹೆಸರಿನಿಂದ ಕರೆಯುತ್ತಿದ್ದರು ಎಂಬುದನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳು ಇಡುವುದು ಕನ್ಫರ್ಮ್.

ಸಂದರ್ಶನ ಒಂದರಲ್ಲಿ ಸುದೀಪ್ ಬಗ್ಗೆ ನಟ ದರ್ಶನ್ ಹೇಳಿದ್ದೇನು? ಮತ್ತೆ ಕುಚುಕು ಜೋಡಿ ಒಂದಾಗುತ್ತಾರೆ ಎಂದು ಅಭಿಮಾನಿಗಳು!

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ತಂದೆ ಬಾಲ್ಯದಲ್ಲಿ ಅಪ್ಪು ಎನ್ನುವ ಹೆಸರಿನಿಂದ ಕರೆಯುತ್ತಿದ್ದರಂತೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೂಡ ನಾವೆಲ್ಲರೂ ನೆಚ್ಚಿನಿಂದ ಅಪ್ಪು (Puneet rajkumar) ಎಂಬುದಾಗಿ ಕರೆಯುತ್ತೇವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾಗೂ ಅಪ್ಪು ಅವರ ಬಾಲ್ಯದ ಮನೆಯಲ್ಲಿ ಕರೆಯುವ ಹೆಸರಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಬಹುದಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ನೇಹದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!