ಸಂದರ್ಶನ ಒಂದರಲ್ಲಿ ಸುದೀಪ್ ಬಗ್ಗೆ ನಟ ದರ್ಶನ್ ಹೇಳಿದ್ದೇನು? ಮತ್ತೆ ಕುಚುಕು ಜೋಡಿ ಒಂದಾಗುತ್ತಾರೆ ಎಂದು ಅಭಿಮಾನಿಗಳು!

Darshan and sudeep : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದ್ಭುತ ಪ್ರತಿಭೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದಾಸ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಅಂದ್ರೆ ಚಪ್ಪಾಳೆಯ ಸುರಿಮಳೆ ಗಯ್ಯುತ್ತಾರೆ ಅಭಿಮಾನಿಗಳು. ಇದೀಗ ಕ್ರಾಂತಿ ಸಿನಿಮಾದ ಮೂಲಕ ದರ್ಶನ್ ಮತ್ತೆ ಬೆಳ್ಳಿ ತೆರೆಯ ಮೇಲೆ ಬಾಕ್ಸ್ ಆಫಿಸ್ ಕೊಳ್ಳೆಹೊಡೆಯಲು ಬರಲಿದ್ದಾರೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೇನು ತೆರೆ ಕಾಣಲಿದೆ. ದರ್ಶನ್ ಅವರ ಕೆರಿಯರ್ ನಲ್ಲಿ ಬಹಳ ವಿಶೇಷವಾದ ಸಿನಿಮಾ ಇದು ಅಕ್ಷರ ಕ್ರಾಂತಿ ಮಾಡುವ ಮೂಲಕ ಅದ್ಭುತ ಸಂದೇಶವನ್ನು ಕೂಡ ದರ್ಶನ್ ನೀಡಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಸಿನಿಮಾವನ್ನು ಪ್ರಮೋಷನ್ ಮಾಡುವುದಿಲ್ಲ ಅಂತ ಮಾಧ್ಯಮಗಳು ಹಿಂದೇಟು ಹಾಕಿದ್ದಾರೆ ಆದರೆ ದರ್ಶನ್ ಅವರ ಸಿನಿಮಾವನ್ನು ಕೈಗೆತ್ತಿಕೊಂಡು ಪ್ರಚಾರದ ಕಾರ್ಯದಲ್ಲಿ ಅವರ ಅಭಿಮಾನಿಗಳೇ ನಿರತರಾಗಿದ್ದಾರೆ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ದರ್ಶನ್, ಸದಾ ಅಭಿಮಾನಿಗಳೇ ದೇವರು ಎಂದು ಹೇಳುತ್ತಾರೆ ಅವರ ಈ ಸರಳತೆ ಎಲ್ಲರಿಗೂ ಇಷ್ಟವಾಗುವುದು.

Darshan about sudeep
Darshan about sudeep

ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಈಗಾಗಲೇ ಹಲವಾರು ಸೋಶಿಯಲ್ ಮೀಡಿಯಾ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತನ್ನ ಕುಚುಕು ಸ್ನೇಹಿತ ಆಗಿದ್ದ ಸುದೀಪ್ ಹೆಸರನ್ನ ಹೇಳಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಗಳಸ್ಯ- ಕಂಠಸ್ಯ ಎಂದು ಹೇಳುವಂತಹ ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರ ನಡುವೆ ವೈಮನಸ್ಸು ಬಂದು ಸುಮಾರು ವರ್ಷಗಳಿಂದ ಇಬ್ಬರು ದೂರಾಗಿದ್ದಾರೆ ಆದರೆ ದರ್ಶನ್ ಹಾಗೂ ಸುದೀಪ್ ಅವರ ಅಭಿಮಾನಿಗಳಿಗೆ ಮಾತ್ರ ಇವರಿಬ್ಬರನ ಮತ್ತೆ ಒಂದಾಗಿ ನೋಡುವ ಹಂಬಲ. ಅದಕ್ಕಾಗಿ ಸ್ನೇಹಿತರಿಬ್ಬರನ್ನು ಒಂದು ಮಾಡುವುದಕ್ಕೆ ಅಭಿಮಾನಿಗಳು ಕೂಡ ಹಲವಾರು ಬಾರಿ ಪ್ರಯತ್ನಪಟ್ಟಿದ್ದಾರೆ.

ನಿಶ್ಚಿತಾರ್ಥದಲ್ಲಿ ಸಿಲ್ಕ್ ಸೀರೆ ಧರಿಸಿಕೊಂಡು ಮಿರ ಮಿರ ಅಂತ ಮಿಂಚಿದ ಹರಿಪ್ರಿಯಾ ಧರಿಸಿದ್ದ ಪ್ರೇಮಿಯಂ ಸಿಲ್ಕ್ ಸೀರೆಯ ಬೆಲೆ ಎಷ್ಟು ಗೊತ್ತಾ

ರಚಿತರಾಮ್ ಕಳೆದ ಹತ್ತು ವರ್ಷಗಳಿಂದ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ ಸುದೀಪ್ (kichcha sudeep) , ಶಿವಣ್ಣ (shivanna) ಮೊದಲಾದವರ ಜೊತೆ ಅಭಿನಯಿಸಿದ್ದಾರೆ ಎಂದು ಹೇಳುತ್ತಾ ದರ್ಶನ್ (darshan) ಅವರು ಸುದೀಪ್ ಹೆಸರನ್ನ ಹೇಳಿದರೆ ಇದರಿಂದ ಅವರ ಅಭಿಮಾನಿಗಳಲ್ಲಿ ಮೂಡಿರುವ ಸಂತಸ ಅಷ್ಟಿಷ್ಟಲ್ಲ. ಡಿ ಬಾಸ್ ಮತ್ತೆ ತಮ್ಮ ಸ್ನೇಹಿತನ ಹೆಸರನ್ನ ಹೇಳಿರುವುದಕ್ಕೆ ಇವರಿಬ್ಬರು ಶೀಘ್ರದಲ್ಲೇ ಮತ್ತೆ ಒಂದಾಗುತ್ತಾರೆ ಎನ್ನುವ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ದರ್ಶನ್ ಸುದೀಪ್ ಹೆಸರನ್ನ ಹೇಳಿರುವ ಒಂದು ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಅಭಿಮಾನಿಗಳ ಹಂಬಲದಂತೆ ಮತ್ತೆ ಒಂದಾಗಿ ಕುಚುಕು ಫ್ರೆಂಡ್ಸ್ ಆಗುತ್ತಾರಾ? ಕಾದು ನೋಡಬೇಕು.

Leave a Comment

error: Content is protected !!