Yash: ಯಾರಿಗೂ ಗೊತ್ತಿಲ್ಲದ ಯಶ್ ಅವರ ಇನ್ನೊಂದು ಮುಖವನ್ನು ಬಿಚ್ಚಿಟ್ಟ ತಮಿಳು ನಟ!

Rocking Star Yash ರಾಕಿಂಗ್ ಸ್ಟಾರ್ ಯಶ್(Yash) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಈಗಾಗಲೇ ಭಾರತದ ಪ್ರತಿಯೊಂದು ಮೂಲೆಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ಅತ್ಯಂತ ಬಹು ಬೇಡಿಕೆಯ ನಟ. ಕೆಜಿಎಫ್(KGF) ಸಿನಿಮಾ ಎನ್ನುವುದು ಅವರನ್ನು ಕೇವಲ ನ್ಯಾಷನಲ್ ಮಾತ್ರವಲ್ಲದೆ ಇಂಟರ್ನ್ಯಾಷನಲ್ ಸ್ಟಾರ್ ಅನ್ನಾಗಿ ಮಾಡಿದೆ. ಯಶ್ ಅವರ ಮುಂದಿನ ಸಿನಿಮಾಗಾಗಿ ಪ್ರತಿಯೊಬ್ಬ ಪ್ರೇಕ್ಷಕನು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ನಾಯಕತ್ವದ ಗುಣ ಎಲ್ಲರಿಗೂ ತಿಳಿದಿದೆ ಆದರೆ ಅವರ ಮತ್ತೊಂದು ಮುಖವನ್ನು ತಮಿಳು ಚಿತ್ರರಂಗದ ಖ್ಯಾತ ಖಳನಾಯಕ ಆಗಿರುವ ಡೇನಿಯಲ್ ಬಾಲಾಜಿ(Daniel Balaji) ಅವರು ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಚಾರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಡೇನಿಯಲ್ ಬಾಲಾಜಿ(Daniel Balaji) ಅವರಿಗೆ ನಾಲ್ಕು ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಸಿನಿಮಾದಲ್ಲಿ ನಟಿಸಲು ಆಫರ್ ನೀಡಲು ಕರೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಡೇನಿಯಲ್ ಬಾಲಾಜಿ ಅವರು ನನಗೆ ಸ್ವಲ್ಪ ಕೆಲಸ ಇದೆ ಅದನ್ನು ಮುಗಿಸಿಕೊಂಡು ನಿಮ್ಮ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಕೇಳಿದಾಗ ಯಶ್ ಅಷ್ಟು ಮುಖ್ಯವಾದ ಕೆಲಸ ಏನು ಎಂಬುದಾಗಿ ಕೇಳುತ್ತಾರೆ. ನಾನೊಂದು ದೇವಸ್ಥಾನವನ್ನು ತಮಿಳುನಾಡಿನಲ್ಲಿ ಕಟ್ಟಿಸಬೇಕಃದು ನಿರ್ಧರಿಸಿದ್ದು ಅದರ ಕೆಲಸ ಕಾರ್ಯಗಳು ಸಾಗುತ್ತಿವೆ ಹೀಗಾಗಿ ಅದು ಮುಗಿದ ನಂತರವಷ್ಟೇ ನಾನು ಬರಲು ಸಾಧ್ಯ ಎಂಬುದಾಗಿ ಹೇಳಿದ್ದರು.

ಇದಾದ ನಂತರ ಫೋನ್ ಕಟ್ ಮಾಡಿದ ಯಶ್(Yash) ಅವರು ಖಾತೆಗೆ ಹಣವನ್ನು ಟ್ರಾನ್ಸ್ಫರ್ ಮಾಡುತ್ತಾರೆ. ಆಗ ಡೇನಿಯಲ್ ಬಾಲಾಜಿಯವರು ಮತ್ತೆ ಕರೆ ಮಾಡಿ ಸಿನಿಮಾ ವನ್ನು ಒಪ್ಪಿಕೊಳ್ಳುವ ಮುಂಚೆನೇ ಅಡ್ವಾನ್ಸ್ ಹಾಕಿದ್ದೀರಲ್ಲ ಸರ್ ಎಂಬುದಾಗಿ ಕೇಳಿದಾಗ ಯಶ್(Yash) ಅವರು ಇದು ಅಡ್ವಾನ್ಸ್ ಅಲ್ಲ ನಿಮ್ಮ ದೇವಸ್ಥಾನ ನಿರ್ಮಾಣಕ್ಕೆ ನನ್ನದೊಂದು ಚಿಕ್ಕ ಕೊಡುಗೆ ಎನ್ನುವುದಾಗಿ ಹೇಳುತ್ತಾರೆ. ಇದು ಯಶ್ ಅವರು ತಮ್ಮ ಪ್ರೀತಿ ಪಾತ್ರರಿಗೆ ತೋರುತ್ತಿದ್ದ ಗೌರವ ಹಾಗೂ ಪ್ರೀತಿ ಎನ್ನುವುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

Leave A Reply

Your email address will not be published.