Kiccha Sudeep: ಡಿ ಬಾಸ್ ಗೆ ಕೋಪ ಬಂದಾಗ ಕಿಚ್ಚ ಸುದೀಪ್ ಏನ್ ಮಾಡ್ತಿದ್ರು ಗೊತ್ತಾ. ದರ್ಶನ್ ಅವರೇ ಹೇಳಿದ್ದ ಮಾತಿದು.

Darshan Thoogudeepa ಒಂದು ಕಾಲದಲ್ಲಿ ದಚ್ಚು ಕಿಚ್ಚ ಆಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್(Kiccha Sudeep) ಅವರ ಸ್ನೇಹ ಎನ್ನುವುದು ಯಾವ ರೀತಿ ಮಾಯವಾಗಿ ಹೋಗಿದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅವರಿಬ್ಬರ ನಡುವೆ ಯಾವ ರೀತಿಯಲ್ಲಿ ಸ್ನೇಹವಿತ್ತು ಎಂದರೆ ಎಲ್ಲರೂ ಕೂಡ ಅಂಬರೀಶ್ ಹಾಗೂ ವಿಷ್ಣುದಾದಾ(Vishnu Dada) ಸ್ನೇಹವನ್ನು ಇವರಿಬ್ಬರ ಸ್ನೇಹಕ್ಕೆ ಹೋಲಿಸಲು ಪ್ರಾರಂಭಿಸಿದ್ದರು.

ಅಷ್ಟರ ಮಟ್ಟಿಗೆ ಇವರಿಬ್ಬರ ನಡುವೆ ಸ್ನೇಹ ಸಂಬಂಧಕ್ಕಿಂತ ಹೆಚ್ಚಾಗಿ ಸಹೋದರತ್ವದ ಭಾಂದವ್ಯ ಇತ್ತು ಎಂದರೆ ಕೂಡ ತಪ್ಪಾಗಲಾರದು. ಚಿತ್ರರಂಗದ ಪ್ರತಿಯೊಂದು ಕಾರ್ಯಕ್ರಮಗಳಿಗೂ ಕೂಡ ಇಬ್ಬರು ಒಟ್ಟಾಗಿ ಹೋಗುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Krantiveera Sangolli Rayanna) ಸಿನಿಮಾಗೆ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಧ್ವನಿಯನ್ನು ನೀಡಿದ್ದರು. ಇಷ್ಟೊಂದು ಚೆನ್ನಾಗಿದ್ದ ಇವರಿಬ್ಬರ ನಡುವೆ ಹುಳಿ ಹಿಂಡಿದವರು ಯಾರು ಎಂಬುದೇ ನಿಗೂಢ ಪ್ರಶ್ನೆಯಾಗಿದೆ.

ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಇವರಿಬ್ಬರೂ ಚೆನ್ನಾಗಿದ್ದ ಸಂದರ್ಭದಲ್ಲಿ ದರ್ಶನ್ ಮಾತನಾಡಿರುವ ವಿಡಿಯೋ ಒಂದು ಈಗ ವೈರಲ್ ಆಗುತ್ತಿದ್ದು ಅದರಲ್ಲಿ ದರ್ಶನ್(Darshan) ತಮ್ಮ ಹಾಗೂ ಕಿಚ್ಚ ಸುದೀಪ್ ಅವರ ಕೋಪದ ಬಗ್ಗೆ ಸಂಪೂರ್ಣ ವಿವರವಾಗಿ ಮಾತನಾಡಿರುವ ಮಾಹಿತಿ ಲಭ್ಯವಾಗಿದೆ. ನಾನು ತುಂಬಾ ಶಾರ್ಟ್ ಟೆಂಪರ್ಡ್ ಹೀಗಾಗಿ ಸುದೀಪ್(Sudeep) ಗೆ ನನ್ನ ಜೊತೆಗೆ ಯಾವಾಗ ಹೇಗೆ ಮಾತನಾಡಬೇಕು ಎನ್ನುವ ಸರಿಯಾದ ಅರಿವು ಇದೆ. ಹೀಗಾಗಿ ಆಗಾಗ ನನ್ನನ್ನು ಸಮಾಧಾನ ಮಾಡುತ್ತಲೇ ಇರುತ್ತಾನೆ ಎಂಬುದಾಗಿ ಹೇಳಿದ್ದಾರೆ.

ನಾನು ಕೂಡ ಕಡಿಮೆ ಇಲ್ಲ ಇಬ್ಬರೂ ಕೂಡ ಕೂಡಲೇ ಕೋಪ ಮಾಡಿಕೊಳ್ಳುತ್ತೇವೆ. ಒಮ್ಮೆ ನಾನು ಅವನನ್ನು ಸಮಾಧಾನ ಮಾಡುತ್ತೇನೆ ಹಾಗೂ ಕೆಲವೊಮ್ಮೆ ಅವನು ನನ್ನನ್ನು ಸಮಾಧಾನ ಮಾಡುತ್ತಾನೆ ಎಂದು ತಮ್ಮಿಬ್ಬರ ನಡುವೆ ಇದ್ದಂತಹ ಭ್ರಾತೃತ್ವದ(Brotherhood) ಸಂಬಂಧವನ್ನು ಎಲ್ಲರಿಗೂ ತಿಳಿಸಿದ್ದರು. ಅಂದು ಬಿಡುಗಡೆಯಾಗಿದ್ದ ಆ ಸಂದರ್ಶನದ ವಿಡಿಯೋವನ್ನು ಈಗ ನೋಡುವಾಗ ನಿಜಕ್ಕೂ ಕೂಡ ಬೇಸರವಾಗುತ್ತದೆ. ಮೊದಲಿನ ಹಾಗೆ ಇಬ್ಬರು ಕೂಡ ಒಂದಾಗಲಿ ಎಂಬುದಾಗಿ ಅಭಿಮಾನಿಗಳು ಕೂಡ ಹಾರೈಸುತ್ತಿದ್ದಾರೆ.

Leave A Reply

Your email address will not be published.