Pushpa 2: ಪುಷ್ಪ 2 ಸಿನಿಮಾಗೆ ಡಾಲಿ ಧನಂಜಯ್ ಕೇಳ್ತಿರೋ ಸಂಭಾವನೆ ಎಷ್ಟು ಗೊತ್ತಾ? ಬಂಪರ್!

Daali Dhananjay ಜಯನಗರ ಫೋರ್ತ್ ಬ್ಲಾಕ್ ಎನ್ನುವ ಕಿರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುವ ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಕೂಡ ಯಶಸ್ಸಿನ ಹಾದಿ ತುಳಿಯಲು ಪ್ರಾರಂಭಿಸಿದ್ದು ಶಿವಣ್ಣ(Shivanna) ನಟನೆಯ ಟಗರು ಸಿನಿಮಾದಲ್ಲಿ ಡಾಲಿ(Daali) ಎನ್ನುವ ಖಳನಾಯಕನ ಪಾತ್ರವನ್ನು ಮಾಡಿದ ನಂತರವಷ್ಟೇ ಎಂಬುದು ಪ್ರತಿಯೊಬ್ಬರೂ ಕೂಡ ತಿಳಿದಿರುವಂತಹ ಒಂದು ವಿಚಾರ.

ಈಗ ಡಾಲಿ ಧನಂಜಯ್(Daali Dhananjay) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿರುವಂತಹ ವಿಚಾರ. ಬಡವರ ಮಕ್ಕಳು ಬೆಳಿಬೇಕು ಕಂಡ್ರೆಯ ಎನ್ನುವ ಡಾಲಿ ಧನಂಜಯ್ ಅವರ ಘೋಷಣೆ ಇಂದಿಗೂ ಕೂಡ ಕನ್ನಡ ಚಿತ್ರರಂಗದ ಪ್ರೇಕ್ಷಕರಲ್ಲಿ ಪ್ರಸ್ತುತವಾಗಿದೆ. ಇನ್ನು ನಿಮಗೆಲ್ಲ ನೆನಪಿರಬಹುದು ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪಾ ಸಿನಿಮಾದಲ್ಲಿ ಕೂಡ ಜಾಲಿ ರೆಡ್ಡಿಯೆನ್ನುವ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು.

ಡಾಲಿ ಧನಂಜಯ್ ಅಲ್ಲು ಅರ್ಜುನ್ ಅವರ ಎದುರುಗಡೆ ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಸಾಕಷ್ಟು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಭಾಗದಲ್ಲಿ ಡಾಲಿ ಧನಂಜಯ್ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ ಆದರೆ ಎರಡನೇ ಭಾಗದಲ್ಲಿ(Pushpa 2) ಡಾಲಿ ಧನಂಜಯ್ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರಲಿದೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಎರಡನೇ ಭಾಗಕ್ಕಾಗಿ ಡಾಲಿ ಧನಂಜಯ್ ರವರು ಭರ್ಜರಿ ಮೂರರಿಂದ ಐದು ಕೋಟಿ ರೂಪಾಯಿವರೆಗೂ ಸಂಭಾವನೆಯನ್ನು ಕೇಳಿದ್ದು ನಿರ್ಮಾಪಕರು ಕೊಡಲು ಒಪ್ಪಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಸುದ್ದಿಗಳ ಪ್ರಕಾರ ಡಾಲಿ ಧನಂಜಯ್ ತಮ್ಮ ಜೀವಮಾನದ ಅತ್ಯಂತ ಶ್ರೇಷ್ಠ ಸಂಭಾವನೆಯನ್ನು ಪುಷ್ಪ 2(Pushpa 2) ಸಿನಿಮಾದ ಜಾಲಿ ರೆಡ್ಡಿ(Jolly Reddy) ಪಾತ್ರಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿಯ ಇನ್ನಷ್ಟು ಅವಕಾಶಗಳು ಡಾಲಿ ಧನಂಜಯ್ ಅವರಿಗೆ ಹುಡುಕಿಕೊಂಡು ಬರಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!