Daali Dhananjay: ಕಾಂಗ್ರೆಸ್ ಸರ್ಕಾರದ 10 ಕೆಜಿ ಉಚಿತ ಅಕ್ಕಿಯ ಯೋಜನೆ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇ ಬೇರೆ

Daali Dhananjay ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್(Daali Dhananjay) ಅವರು ಅತ್ಯಂತ ಮಾಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿರುವುದರಿಂದ ಅವರಿಗೆ ಸಾಮಾಜಿಕ ಪರಿಸ್ಥಿತಿಗಳು ಸಾಕಷ್ಟು ತಿಳುವಳಿಕೆಗೆ ಬರುತ್ತವೆ.

ಅದನ್ನೇ ಅವರು ತಮ್ಮ ಸಿನಿಮಾಗಳಲ್ಲಿ ಕೂಡ ತೋರಿಸಿಕೊಂಡು ಬಂದಿದ್ದಾರೆ. ನಿಜಕ್ಕೂ ಕೂಡ ಅವರ ಸಿನಿಮಾಗಳನ್ನು ನೋಡಿದಾಗಲೂ ಕೂಡ ನಮಗೆ ಇದು ಅರ್ಥವಾಗುತ್ತದೆ. ಯಾವುದೇ ವಿಚಾರ ಅನ್ನಾದರೂ ನೇರವಾಗಿ ಹೇಳುವಂತಹ ನೇರವಂತಿಗೆ ಧನಂಜಯ್ ಅವರು ಈಗಲೇ ತಮ್ಮ ಜೀವನ ಶೈಲಿಯಲ್ಲಿ ಬೆಳೆಸಿಕೊಂಡಿದ್ದಾರೆ ಎನ್ನುವುದು ಪ್ರತಿಯೊಬ್ಬರು ಮೆಚ್ಚ ಬೇಕಾದ್ದೇ.

ಇನ್ನು ಸರ್ಕಾರ ಇತ್ತೀಚಿಗಷ್ಟೇ ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಉಚಿತ ಅಕ್ಕಿಯನ್ನು ನೀಡುವಂತಹ ಯೋಜನೆಯನ್ನು ರೂಪಿಸಿದ್ದು ಇದರ ಕುರಿತಂತೆ ಸಾಕಷ್ಟು ಪಾರ ವಿರೋಧ ಚರ್ಚೆಗಳು ಕೂಡ ನಡೆಯುತ್ತಿದ್ದು ಕೆಲವರು ಇದನ್ನು ಉಚಿತವಾಗಿ ಅಕ್ಕಿ ನೀಡುವ ಮೂಲಕ ಜನರನ್ನು ಸರಕಾರ ಸೋಮಾರಿ ಗೊಳಿಸುತ್ತಿದೆ ಎಂಬುದಾಗಿ ಆರೋಪ ಮಾಡುವಂತೆ ಕೂಡ ಮಾಡಿತ್ತು.

ಇದಕ್ಕೆ ಈಗ ಡಾಲಿ ಧನಂಜಯ್(Daali Dhananjay) ಅವರು ಮಾತನಾಡುತ್ತಾ ಆದ ಇಲ್ಲದ ಬಡ ಜನರಿಗೆ ಅನ್ನವನ್ನು ನೀಡುವುದು ಪುಣ್ಯದ ಕೆಲಸ ಇದರಿಂದ ಸೋಮಾರಿಗಳು ಹೇಗೆ ಆಗುತ್ತಾರೆ. ಊಟ ಮಾಡಿದ ನಂತರವೂ ಕೂಡ ಅವರು ಹೊಟ್ಟೆಪಾಡಿಗಾಗಿ ಏನನ್ನಾದರೂ ದುಡಿಯಲೇ ಬೇಕು ಹೀಗಾಗಿ ಅದನ್ನು ತಪ್ಪಿಸಲು ಈ ರೀತಿಯ ಹೇಳಿಕೆ ನೀಡುವುದು ನನ್ನ ಪ್ರಕಾರ ತಪ್ಪು ಎನ್ನುವ ಅರ್ಥದಲ್ಲಿ ಪರೋಕ್ಷವಾಗಿ ಮಾತನಾಡಿದ್ದಾರೆ.

Leave a Comment

error: Content is protected !!