ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ಡಿ ಬಾಸ್ ಕಾರಣ ಏನು ಗೊತ್ತೆ
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದರ್ಶನ್ ಅವರ ರಾಬರ್ಟ್ ಚಿತ್ರ ಬಿಡುಗಡೆಯಾಗಿತ್ತು. ಸುಮಾರು ವರ್ಷಗಳ ನಂತರ ಡಿ ಬಾಸ್ ಅವರನ್ನ ಹೊಸದಾದ ಮಾಸ್ ಲುಕ್ ನಲ್ಲಿ ನೋಡುವ ಸದವಕಾಶ ನಮಗೆಲ್ಲಾ ಒದಗಿತ್ತು. ದರ್ಶನ್ ಅವರನ್ನು ಸುಮಾರು ವರ್ಷಗಳ ನಂತರ ಹೊಸತಾದ ಮಾಸ್ ಲುಕ್ ನಲ್ಲಿ ಅಭಿಮಾನಿಗಳೆಲ್ಲರೂ ಕಣ್ತುಂಬಿಕೊಂಡಿದ್ದರು. ರಾಬರ್ಟ್ ಚಿತ್ರ ಸೂಪರ್ ಹಿಟ್ ಆಗಿತ್ತು. ಡಿ ಬಾಸ್ ಅಭಿಮಾನಿಗಳಿಗಂತೂ ರಾಬರ್ಟ್ ಚಿತ್ರ ರಸದೌತಣವಾಗಿತ್ತು.
ರಾಬರ್ಟ್ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳು ಕಳೆಯುತ್ತಾ ಬಂದಿವೆ ದರ್ಶನ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಕರೋನ ಕಾರಣದಿಂದ ದರ್ಶನ್ ಅವರು ಕೆಲವು ತಿಂಗಳುಗಳ ಕಾಲ ಸಿನಿಮಾ ಶೂಟಿಂಗ್ ಕೂಡ ಹೋಗಿಲ್ಲ. ಶೂಟಿಂಗ್ ಗೆ ಹೋಗದೆ ಲ್ಯಾಕ್ ಡೌನ್ ಸಮಯದಲ್ಲಿ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದರು. ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಎಂಬ ಹೊಸದಾದ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಚಿತ್ರ ಇದೇ ವರ್ಷ ಬಿಡುಗಡೆ ಯಾಗಲಿದೆ.
ದರ್ಶನ್ ಅವರ ಈ ಹೊಸ ಚಿತ್ರ ಕ್ರಾಂತಿ ಕನ್ನಡ ಶಾಲೆ ಮತ್ತು ಕನ್ನಡ ಭಾಷೆಯ ಉಳಿವು ಮತ್ತು ಅರಿವಿನ ಬಗ್ಗೆ ಸಂದೇಶ ರವಾನಿಸುವ ಚಿತ್ರ. ಸಾಮಾಜಿಕ ಕಳಕಳಿ ಹೊಂದಿರುವ ಈ ಚಿತ್ರ ವಿಭಿನ್ನವಾಗಿ ಮೂಡಿಬರಲಿದೆ. ದರ್ಶನ್ ಅವರ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ತುಂಬಾ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿ ರೂಪುಗೊಳ್ಳುತ್ತಿದೆ. ಇದಕ್ಕಾಗಿ ದರ್ಶನ್ ಕೂಡ ಜಬರ್ದಸ್ತ್ ಆಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಅವರ ಸಿನಿಮಾಗಳು ಚೆನ್ನಾಗಿಲ್ಲದಿದ್ದರೂ ಕೂಡ ದರ್ಶನ್ ಅವರನ್ನು ನೋಡಲು ನೋಡೋಕೆ ಅಂತಾನೆ ಅಭಿಮಾನಿಗಳು ಥಿಯೇಟರ್ ಗೆ ಬರುತ್ತಾರೆ.
ಕ್ರಾಂತಿ ಸಿನಿಮಾಗೋಸ್ಕರ ಮತ್ತು ಅಭಿಮಾನಿಗಳಿಗೋಸ್ಕರ ದರ್ಶನ್ ಅವರು ತುಂಬಾ ಪರಿಶ್ರಮ ಪಡುತ್ತಿದ್ದಾರೆ. ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಜಿಮ್ ನಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾರೆ. ಕ್ರಾಂತಿ ಸಿನಿಮಾದ ಮುಕ್ಕಾಲು ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ ಇನ್ನೂ ಶೇಕಡಾ 25 ರಷ್ಟು ಬಾಕಿಯಿದೆ. ಕಾಲುಭಾಗ ಚಿತ್ರೀಕರಣಕ್ಕೆ ದರ್ಶನ್ ಅವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹೊರಟಿದ್ದಾರೆ. ಈಗಾಗಲೇ ದರ್ಶನ್ ಅವರು ಸುಮಾರು ಹದಿನೈದು ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ದರ್ಶನ್ ಅವರು ತೂಕವನ್ನು ಕಡಿಮೆ ಮಾಡಿಕೊಂಡು ಸ್ಕ್ರೀನ್ ಮೇಲೆ ಈ ಬಾರಿ ಫಿಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ