ಸಿಲ್ಕ್ ಸ್ಮಿತಾ ಸಾಯುವುದಕ್ಕೂ ಕೆಲವೇ ಕೆಲವು ನಿಮಿಷಗಳ ಮುನ್ನ ರವಿಚಂದ್ರನ್ ಅವರೊಂದಿಗೆ ಏಕೆ ಮಾತನಾಡಿದ್ದಳು ಗೊತ್ತಾ ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳೆಂದರೆ ಹೊಸ ಹೊಸ ರೀತಿಯ ಹಾಡು, ವಿಭಿನ್ನ ಕಥೆ ಇರುತ್ತದೆ. ಅಲ್ಲದೆ ಇವರ ಚಿತ್ರಗಳಲ್ಲಿ ಸುಂದರ ತಾರೆಯರ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿ, ಚಿತ್ತಾಕರ್ಷಕದ ರೀತಿಯಲ್ಲಿ ಪರದೆಯ ಮೇಲೆ ತೋರಿಸಲಾಗುತ್ತದೆ. ಆದರೆ ರವಿಚಂದ್ರನ್ ಅವರು ಯಾವೊಬ್ಬ ನಾಯಕಿಗೂ ನೀವು ಇದೇ ರೀತಿಯ ಪಾತ್ರವನ್ನು ಮಾಡಬೇಕು ಎಂದು ಮನಸ್ಸಿಲ್ಲದವರಿಗೆ ಒತ್ತಾಯಿಸಿದವರಲ್ಲ. ಚಿತ್ರಕ್ಕಾಗಿ ನಟಿಯ ಆಯ್ಕೆ ಮಾಡುವಾಗಲೇ ಪಾತ್ರಗಳು ಯಾವ ರೀತಿಯಾಗಿವೆ ಎಂದು ವಿವರಿಸಿ ಅದಕ್ಕೆ ಒಪ್ಪಿಗೆ ಸೂಚಿಸಿದವರನ್ನು ಮಾತ್ರ ಚಿತ್ರಕ್ಕಾಗಿ ಆಯ್ಕೆಮಾಡುತ್ತಾರೆ. ಅದಕ್ಕಾಗಿ ಯಾವ ನಟಿಯರಿಗೂ ರವಿಚಂದ್ರನ್ ಅವರ ಮೇಲೆ ಬೇಸರವಿಲ್ಲ.

ರವಿಚಂದ್ರನ್ ಅವರು ಜೊತೆಯಲ್ಲಿ ಕೆಲಸ ಮಾಡಿದ ಹಲವಾರು ಜನರ ದುಃಖವನ್ನು ಆಲಿಸುತ್ತಾ, ಕೈಲಾದ ಸಹಾಯ ಮಾಡುತ್ತಾ ಸ್ನೇಹವನ್ನು ಕಾಪಾಡಿಕೊಂಡು ಬಂದವರು. ನಮಗೆಲ್ಲ ತಿಳಿದಿರುವ ಹಾಗೆ ಸಿಲ್ಕ್ ಸ್ಮಿತಾ ಹಾಗೂ ರವಿಚಂದ್ರನ್ ಅವರು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ಚಿತ್ರ ಹಳ್ಳಿ ಮೇಷ್ಟ್ರು. ರವಿಚಂದ್ರನ್ ಹಾಗೂ ಸಿಲ್ಕ್ ಸ್ಮಿತಾ ಅವರು ಈ ಚಿತ್ರದ ಮೂಲಕವಾಗಿ ಒಳ್ಳೆಯ ಸ್ನೇಹವನ್ನು ಹೊಂದಿರುತ್ತಾರೆ. ಸಿಲ್ಕ್ ಸ್ಮಿತಾ ಅವರು ಯಾವುದೇ ಕಷ್ಟವಿದ್ದರೂ ರವಿಚಂದ್ರನ್ ನವರಲ್ಲಿ ಹೇಳಿಕೊಳ್ಳುತ್ತಿದ್ದರು.

ಸಿಲ್ಕ್ ಸ್ಮಿತಾ ಅವರಿಗೆ ತಂದೆ ತಾಯಿಯ ಅಪ್ಪುಗೆಯ ಪ್ರೀತಿಯು ಅಷ್ಟಾಗಿ ದೊರಕಿರಲಿಲ್ಲವಂತೆ. ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದಾಗ ಸ್ನೇಹಿತರಾಗಲಿ, ಪ್ರೀತಿಸಿದವರಾಗಲಿ, ಬಂಧುಗಳಾಗಲಿ ಹೆಗಲಾಗಿ ನಿಂತು ಸಂತೈಸಿರಲಿಲ್ಲವಂತೆ. ಸಿಲ್ಕ್ ಸ್ಮಿತಾ ಅವರಲ್ಲಿ ಹಣದ ಕೊರತೆ ಇರಲಿಲ್ಲ. ಅಭಿನಯದ ಮೂಲಕ ಹೆಸರು ಕೂಡ ಗಳಿಸಿದ್ದರು. ಆದರೆ ಸಿಲ್ಕ್ ಸ್ಮಿತಾ ಅವರಿಗೆ ನೆಮ್ಮದಿ ಮಾತ್ರ ಕಿಂಚಿತ್ತು ಇರಲಿಲ್ಲವಂತೆ. ಅನಾರೋಗ್ಯದಲ್ಲಿ, ಒತ್ತಡದ ಸಮಯದಲ್ಲಿ ಕಾಳಜಿ ತೋರುವವರಿಗೆ ಕೊರತೆ ಇತ್ತು.

ಮನನೊಂದ ಸಿಲ್ಕ್ ಸ್ಮಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಾಗ ಅಂದರೆ ಸಾಯುವುದಕ್ಕೂ ಒಂದು ದಿನ ಮುಂಚೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕರೆ ಮಾಡಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತನಾಡಿದ್ದರಂತೆ. ಯಾವಾಗಲೂ ಹಿತನುಡಿಗಳನ್ನು ಆಡುತ್ತಿದ್ದ ರವಿಚಂದ್ರನ್ ಅವರ ಧ್ವನಿಯನ್ನು ಕೇಳಲು ಇಚ್ಚಿಸಿ ಕರೆ ಮಾಡಿ ‘ನಾನು ಜೀವನದಲ್ಲಿ ತುಂಬಾ ಕುಗ್ಗಿಹೋಗಿದ್ದೇನೆ. ಈ ಜೀವನವೇ ಸಾಕಾಗಿ ಹೋಗಿದೆ’ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರಂತೆ.

ರವಿಚಂದ್ರನ್ ಅವರು ‘ಎಲ್ಲ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಂಡು ತಲೆ ಕೆಡಿಸಿಕೊಳ್ಳಬೇಡಿ. ಸಮಾಧಾನದಿಂದಿರಿ ಎಲ್ಲವೂ ಸರಿ ಹೋಗುತ್ತವೆ’ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದ್ದರಂತೆ. ಮಾನಸಿಕ ಒತ್ತಡವನ್ನು ಸಹಿಸಿಕೊಳ್ಳಲಾರದೆ ಸಿಲ್ಕ್ ಸ್ಮಿತಾ ಅವರು ಹೊತ್ತು ಕಳೆದ ಬಳಿಕ ಆತ್ಮಹತ್ಯೆಯನ್ನು ಮಾಡಿಕೊಂಡು ಜಂಜಾಟಗಳಿಂದ ಮುಕ್ತಿ ಪಡೆಯುತ್ತಾರೆ.

Leave a Comment

error: Content is protected !!