Chandan Shetty: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾಗಿ ಎಷ್ಟು ವರ್ಷ ಆಯ್ತು ಗೊತ್ತಾ? ವೈರಲ್ ಆಯ್ತು ನೋಡಿ ಸ್ಪೆಷಲ್ ಫೋಟೋ.
Niveditha Gowda ಬಿಗ್ ಬಾಸ್(BIGGBOSS) ಮೂಲಕ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಂದನ್ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಮೊದಲಿಗೆ ಪರಿಚಿತರಾಗಿ ನಂತರ ಇವರಿಬ್ಬರ ನಡುವೆ ಸ್ನೇಹ ಮೂಡಿ ಸ್ನೇಹ ಪ್ರೀತಿಗೆ ತಿರುಗಿ ದಸರಾ ಸಂಭ್ರಮದಲ್ಲಿ ಪರಸ್ಪರ ಪ್ರಪೋಸ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ನಂತರ ಪರಸ್ಪರ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಸರಳವಾಗಿಯೇ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಇವರಿಬ್ಬರು ಕಾಲಿಟ್ಟಿದ್ದರು.
ಇವರಿಬ್ಬರ ನಡುವೆ ಸಾಕಷ್ಟು ವರ್ಷಗಳ ವಯಸ್ಸಿನ ಅಂತರ ಇದ್ದರೂ ಕೂಡ ಅದ್ಯಾವುದಕ್ಕೂ ಕೂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ(Niveditha Gowda) ದಂಪತಿಗಳು ತಲೆಕೆಡಿಸಿಕೊಳ್ಳದೆ ಮದುವೆಯಾಗುವ ಮೂಲಕ ಎಲ್ಲಾ ಟೀಕೆಗಳಿಗೂ ಕೂಡ ಉತ್ತರವನ್ನು ನೀಡಿದರು. ಸದ್ಯಕ್ಕೆ ಇವರಿಬ್ಬರ ದಾಂಪತ್ಯ ಜೀವನ ಸುಖವಾಗಿ ನಡೆಯುತ್ತಿದ್ದು ವೃತ್ತಿ ಜೀವನದಲ್ಲಿ ಕೂಡ ಇಬ್ಬರು ಸಾಕಷ್ಟು ಯಶಸ್ಸನ್ನು ಹೊಂದಿದ್ದಾರೆ.

ನಿವೇದಿತಾ ಗೌಡ ಅವರು ಯುಟ್ಯೂಬ್(YouTube) ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ರಾಗಿದ್ದು ಚಂದನ್ ಶೆಟ್ಟಿ(Chandan Shetty Rapper) ಅವರು ಮ್ಯೂಸಿಕ್ ಹಾಗೂ ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸುವ ಮೂಲಕವೂ ಕೂಡ ಜನಪ್ರಿಯತೆಯಲ್ಲಿ ಇದ್ದಾರೆ. ಇನ್ನು ಇವರಿಬ್ಬರೂ ಮದುವೆಯಾಗಿ ಎಷ್ಟು ವರ್ಷಗಳಾಗಿದ್ದಾವೆ ಎಂಬುದನ್ನು ತಿಳಿಯೋಣ ಬನ್ನಿ.
ನಿವೇದಿತಾ ಗೌಡ(Niveditha Gowda) ಹಾಗೂ ಚಂದನ್ ಶೆಟ್ಟಿ ಅವರ ವಿವಾಹ ನಡೆದು ಭರ್ಜರಿ ಮೂರು ವರ್ಷಗಳಾಗಿದ್ದು ಇತ್ತೀಚೆಗಷ್ಟೇ ನಿವೇದಿತಾ ಗೌಡ ಅವರು ವಿಶೇಷವಾದ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ನೆನಪು ಮಾಡಿಕೊಂಡಿದ್ದಾರೆ. ನೀವು ಕೂಡ ಈ ಫೋಟೋವನ್ನು ವೀಕ್ಷಿಸಬಹುದಾಗಿದ್ದು ಈ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಕಾಮೆಂಟ್ ಮಾಡುವ ಮೂಲಕ ಕೋರಬಹುದಾಗಿದೆ. ಈ ದಂಪತಿಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.