ಸ್ವಂತ ಅಣ್ಣನ ಹೆಂಡತಿಯನ್ನೇ ಮದುವೆಯಾದ ತಮ್ಮ. ಈ ಕಥೆ ಕೇಳಿದರೆ ನೀವು ಕೂಡ ಕಣ್ಣೀರು ಹಾಕ್ತಿರಾ.

Real Story ನಮ್ಮ ಭಾರತ ದೇಶ ಎನ್ನುವುದು ಬೇರೆ ದೇಶಗಳಿಗೆ ಹೋಲಿಸಿದರೆ ಸಂಬಂಧಗಳಿಗೆ ಹಾಗೂ ಸಂಸ್ಕೃತಿಗೆ ಹೆಚ್ಚು ಬೆಲೆ ನೀಡುವಂತಹ ದೇಶ‌. ಅಣ್ಣ ತಮ್ಮ ಅಕ್ಕ ತಂಗಿಯ ತಂದೆ ತಾಯಿ ಇದೇ ರೀತಿಯ ಸಂಬಂಧದ ಮೌಲ್ಯಗಳ(Values) ಮೇಲೆ ನಿಂತಿರುವಂತಹ ದೇಶ ನಮ್ಮದು. ಜೀವನದಲ್ಲಿ ನಮ್ಮ ಆಪ್ತ ಸಂಬಂಧಗಳು ಚೆನ್ನಾಗಿದ್ದಷ್ಟು ನಮ್ಮ ಸಂತೋಷ ಹೆಚ್ಚಾಗುತ್ತದೆ ಎಂಬುದು ಸಾಬೀತಾಗಿರುವಂತಹ ವಿಚಾರ. ಇಂದಿನ ಲೇಖನಿಯಲ್ಲಿ ನಾವು ತನ್ನ ಸ್ವಂತ ಅಣ್ಣನ ಮಡದಿ ಅಂದರೆ ಅತ್ತಿಗೆಯನ್ನೇ ಮದುವೆ ಆಗಿರುವ ಘಟನೆಯೊಂದರ ಕುರಿತಂತೆ ವಿವರಿಸಿ ಹೇಳಲು ಹೊರಟಿದ್ದೇವೆ.

ಈ ಘಟನೆಯನ್ನು ಸಂಪೂರ್ಣವಾಗಿ ಕೇಳಿದ ನಂತರ ಕೆಲವರು ವಿರೋಧ ವ್ಯಕ್ತಪಡಿಸಿದರೆ ಹಲವಾರು ಜನರು ಆತನ ಕಾರ್ಯಕ್ಕೆ ಪ್ರಶಂಸೆಯನ್ನು(Appreciation) ಕೂಡ ವ್ಯಕ್ತಪಡಿಸುತ್ತಾರೆ. 31 ವರ್ಷದ ನೀಲೇಶ್ 23 ವರ್ಷದ ಪೂನಂ ಎನ್ನುವವರನ್ನು ಮದುವೆಯಾಗುತ್ತಾರೆ. ನೀಲೇಶ್ ಅವರಿಗೆ 26 ವರ್ಷದ ಸಮಾಧಾನ್ ಅನ್ನುವ ಸಹೋದರ ಕೂಡ ಇರುತ್ತಾರೆ. ಇನ್ನು ನೀಲೇಶ್ ಹಾಗೂ ಪೂನಂ ದಂಪತಿಗಳಿಗೆ ಒಂದುವರೆ ವರ್ಷದ ಮಗು ಕೂಡ ಇರುತ್ತದೆ. ಸುಖವಾಗಿ ಸಾಗುತ್ತಿದ್ದ ಇವರ ಸಂಸಾರದ ನಡುವೆ ನೀಲೇಶ್ ಮಹಾಮಾರಿಯ ಕಾರಣದಿಂದಾಗಿ ಕಳೆದ ವರ್ಷ ಮರಣವನ್ನು ಹೊಂದಬೇಕಾಗುತ್ತದೆ.

ಇಷ್ಟೊಂದು ಚಿಕ್ಕ ವಯಸ್ಸಿಗೆ ಅಂದರೆ ಕೇವಲ 23 ವರ್ಷಕ್ಕೆ ಪೂನಂ ತನ್ನ ಗಂಡ ನನ್ನು ಕಳೆದುಕೊಳ್ಳಬೇಕಾಯಿತು. ಒಬ್ಬಂಟಿ ಹೆಣ್ಣು ಮಗಳು ಒಂದುವರೆ ವರ್ಷದ ಮಗುವನ್ನು ಸಾಕುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಇದನ್ನೆಲ್ಲ ನೋಡಿದ ನೀಲೇಶ್ ಸಹೋದರ ಸಮಾಧಾನ್ ಪೂನಂ ಹಾಗೂ ಅವಳ ಮಗುವಿಗೆ ಒಂದೊಳ್ಳೆ ಜೀವನವನ್ನು ನೀಡಲು ನಿರ್ಧಾರ(Decided) ಮಾಡಿ ತಾನೇ ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾಗಲು ಮುಂದಾಗುತ್ತಾನೆ. ಇದಕ್ಕೆ ಎರಡು ಕುಟುಂಬದವರು ಒಪ್ಪಿ ಕೆಲವು ಸಮಯಗಳ ಹಿಂದಯಷ್ಟೇ ತಮ್ಮ ಊರಿನಲ್ಲಿ ಸರಳವಾಗಿ ಮದುವೆಯಾಗುತ್ತಾರೆ.

ಈ ಘಟನೆ ನಡೆದಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ. ಅಕ್ಕ ಪಕ್ಕದವರು ಆ ಹೆಣ್ಣು ಮಗಳಿಗೆ ಒಂದೊಳ್ಳೆ ಜೀವನವನ್ನು ಕಟ್ಟಿಕೊಟ್ಟ ಸಮಾಧಾನ್ ಗೆ ಪ್ರಶಂಸೆಯನ್ನು ಹೇಳುತ್ತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಕುರಿತಂತೆ ಓದಿರುವ ನೆಟ್ಟಿಗರು ಮಾತ್ರ ಅತ್ತಿಗೆಯನ್ನು ತಾಯಿಯ ಸಮಾನ ಎಂಬುದಾಗಿ ಕರೆಯುತ್ತಾರೆ ಒಂದು ವೇಳೆ ಆಕೆಗೆ ಇನ್ನೊಂದು ಉತ್ತಮ ಜೀವನವನ್ನು ಕಟ್ಟಿಕೊಡುವ ಮನಸ್ಸೇ ಇದ್ದಿದ್ದರೆ ಬೇರೆಯವರಿಗೆ ಮದುವೆ ಮಾಡಿಸಿಕೊಡಬಹುದಾಗಿತ್ತು ಎನ್ನುವ ತರ್ಕ ಬದ್ಧ ನಿಲುವು ಕೂಡ ಇದೆ. ಈ ಘಟನೆಯ ಬಗ್ಗೆ ನಿಮ್ಮ ಒಟ್ಟಾರೆ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!