ಬಾಲಿವುಡ್ ನಲ್ಲಿ ಡೆಟಿಂಗ್, ಮದುವೆ, ಮತ್ತೆ ಬ್ರೇಕ್ ಅಪ್ ಅಥವಾ ವಿಚ್ಛೇಧನ ಇದು ಬಹಳ ಕಾಮನ್ ಹಾಗೂ ಹೆಚ್ಚು ಸುದ್ದಿ ಮಾಡೋ ವಿಷಯಗಳು. ಸಿನಿಮಾಗಳಿಗಿಂತ ನಟ ನಟಿಯರ ಇಂಥ ವಿಷಯಗಳೇ ಬೇಗ ಪಸರಿಸುತ್ತವೆ. ಸಾಮಾನ್ಯವಾಗಿ ಸೆಲಿಬ್ರೆಟಿಗಳು ತಮಗೆ ಬೇಕಾದ ಸಂಗಾತಿಯನ್ನ ಆಯ್ಕೆ ಮಾಡಿಕೊಂಡು ಅದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವ ತರಾತುರಿಯಲ್ಲಿರುತ್ತಾರೆ. ತಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಜೊತೆ ಚೆನ್ನಾಗಿ ಸುತ್ತಾಡಿ, ಫೋಟೋ ತೆಗೆಸಿಕೊಳ್ಳುತ್ತಾರೆ. ಮುಂದಿನದು ದೇವರೇ ಬಲ್ಲ. ಯಾಕಂದ್ರೆ ಹೀಗೆ ಸಾಮಾಜಿಕವಾಗಿ ಕಾಣಿಸಿಕೊಂಡ ಜೋಡಿ ಲೈಫ್ ಲಾಂಗ್ ಜೊತೆಯಾಗಿ ಇದ್ದಿದ್ದೇ ಕಡಿಮೆ.

ನಾವಿವತ್ತು ಬಾಲಿವುಡ್ ಸೆಲಿಬ್ರೆಟಿ ಮಲೈಕಾ ಅವರ ಬಗ್ಗೆ ಮಾತಾಡ್ತಿದ್ದೇವೆ. ಮಲೈಕಾ ಅರೋರಾ ಬಾಲಿವುಡ್ ನ ಖ್ಯಾತ ನಟಿ, ಡ್ಯಾನ್ಸರ್ ಹಾಗೂ ಮಾಡೆಲ್ ಕೂಡ ಹೌದು. ಅವರ ಬಳುಕುವ ಬಳ್ಳಿಯಂತ ಮೈ ಮಾಟ ನೋಡಿದ್ರೆ ಅವರ ಮಯಸ್ಸಾನ್ನ ಯಾರೂ ಊಹಿಸಲು ಸಾಧ್ಯವೇ ಇಲ್ಲ. ತಮ್ಮ 48 ವರ್ಷ ವಯಸ್ಸಿನಲ್ಲೂ 28 ವರ್ಷ ವಯಸ್ಸಿನವರಂತೆ ಕಾಣುತ್ತಾರೆ ಮಲೈಕಾ. ಮಲೈಕಾ ಹಾಗೂ ನಟ ಅರ್ಜುನ್ ಕಪೂರ್ ವರ ಡೆಟಿಂಗ್ ಬಗ್ಗೆ ಎಲ್ಲರಿಗೂ ಗೊತ್ತು. ಇವರಿಬ್ಬರೂ ಈ ವರ್ಷದ ಕೊನೆಯಲ್ಲಿ ಹಸೆ ಮಣೆ ಏರಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನ ತುಂಬೆಲ್ಲಾ ಹರಿದಾಡುತ್ತಿದೆ. ಇವರಿಬ್ಬರ ಡೆಟಿಂಗ್ ಇಂದು ನಿನ್ನೆಯದಲ್ಲ. 2016ರಿಂದಲೂ ಡೆಟಿಂಗ್ ನಲ್ಲಿರುವ ಈ ಜೋಡಿ ಈ ವರ್ಷ ನವೆಂಬರ್ ಡಿಸೆಂಬರ್ ಹೊತ್ತಿಗೆ ಮದುವೆಯಾಗುವುದು ಭಾಗಶಃ ಫಿಕ್ಸ್ ಆಗಿದೆ.

ಮಲೈಕಾ ಇದುವರೆಗೆ ಮದುವೆಯಾಗದೇ ಇರುವ ಕನ್ಯೆ ಏನಲ್ಲ. 1998ರಲ್ಲಿ ನಟ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ರು. ಇವರಿಗೆ ಒಬ್ಬ ಪುತ್ರನೂ ಇದ್ದಾನೆ. ಇವನ ಹೆಸರು ಅರಹಾನ್ ಖಾನ್. ಇವನ ಈಗಿನ ವಯಸ್ಸು 19 ವರ್ಷ. 2017ರಲ್ಲಿ ಮಲೈಕಾ ಅರ್ಬಾಜ್ ಖಾನ್ ಗೆ ವಿಚ್ಚೇಧನ ನೀಡಿದ್ದರು. ಇನ್ನು ಅರ್ಜುನ್ ಕಪೂರ್ ಗೆ ಇದು ಮೊದಲ ಮದುವೆ. ಇಬ್ಬರು ಇಷ್ಟು ವರ್ಷ ಡೇಟಿಂಗ್ ನಲ್ಲಿದ್ದು, ಇದೀಗ ಸರಳ ವಿವಾಹವನ್ನೇ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿದೆ ಬಿಟೌನ್! ಇನ್ನು ಇವರಿಬ್ಬರ ವಯಸ್ಸಿನ ಅಂತರ ಕೇಳಿದ್ರೆ ನಿಮಗೆ ಶಾಖ್ ಆಗಬಹುದು.

ಮಲೈಕಾ 48 ವರ್ಷಕ್ಕೆ ಕಾಲಿಟ್ಟಿದ್ದರೆ ಅರ್ಜುನ್ ಕಪೂರ್ ಗೆ 36ರ ಹರೆಯ. ಅರ್ಜುನ್ ಗಿಂತ 12 ವರ್ಷ ದೊಡ್ಡವರು ಮಲೈಕಾ. ಆದರೆ ಪ್ರೀತಿ ಗೀತಿ ಇತ್ಯಾದಿಯಲ್ಲಿ ವಯಸ್ಸಿಗೇನು ಕೆಲಸ ಅನ್ನುತ್ತಾರೆ ಮಲೈಕಾ ಅರ್ಜುನ್ ಜೋಡಿ!. ಹೀಗೆ ತಮಗಿಂತ ಕಿರಿಯ ವಯಸ್ಸಿನವರನ್ನು ಮದುವೆಯಾಗುವುದು ಹೊಸತೇನಲ್ಲ. ಇದು ಬಾಲಿವುಡ್ ನಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಅದರಲ್ಲೂ ಮಲೈಕಾ ಅರೋರಾರಂತಹ ಝಿರೋ ಫಿಗರ್ ಇರೋರ ವಯಸ್ಸು ಯಾವುದೇ ಕಾರಣಕ್ಕೂ ಮುಖ್ಯವಾಗುವುದೇ ಇಲ್ಲ ಬಿಡಿ!

By admin

Leave a Reply

Your email address will not be published.