ರಿಷಬ್ ಶೆಟ್ಟಿ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿದ ಬಾಲಿವುಡ್ ಆ್ಯಂಕರ್. ವಿಡಿಯೋ ಎಲ್ಲೆಡೆ ವೈರಲ್

ಕಾಂತಾರ ಸಿನಿಮಾ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿ ಕೇವಲ ಕನ್ನಡ ಭಾಷೆಯಲ್ಲಿಯೇ ನೂರು ಕೋಟಿ ರೂಪಾಯಿ ಪೂರ್ಣಗೊಳಿಸುವತ್ತ ದಾಪುಗಾಲು ಇಡುತ್ತಿದೆ. ಇನ್ನು ಪ್ರೇಕ್ಷಕರ ಬೇಡಿಕೆಯ ಮೇರೆಗೆ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಕಾಂತಾರ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆಯನ್ನು ಪರ ಭಾಷೆಗಳಲ್ಲಿ ಕೂಡ ಹೊಂದಿದೆ ಎಂಬುದನ್ನು ನೆನೆಸಿಕೊಳ್ಳಲು ಕೂಡ ಹೆಮ್ಮೆ ಎನಿಸುತ್ತದೆ. ಇನ್ನು ಕಾಂತಾರ ಸಿನಿಮಾ ಹಿಂದಿಯಲ್ಲಿ ಇಂದಿನಿಂದ ಬಿಡುಗಡೆಯನ್ನು ಕಾಣಲಿದ್ದು ಮೊದಲ ದಿನವೇ ಅತ್ಯುತ್ತಮ ರೆಸ್ಪಾನ್ಸ್ ಅನ್ನು ಪಡೆಯುವ ನಿರೀಕ್ಷೆ ಇದೆ.

ಹೌದು ಗೆಳೆಯರೆ ಕಾಂತಾರ ಸಿನಿಮಾ ಹಿಂದಿಯಲ್ಲಿ ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗುವ ಘೋಷಣೆ ಈಗಾಗಲೇ ಸಿನಿಮಾ ಮೂಲಗಳಿಂದ ಸಿಕ್ಕಿದೆ. ಇನ್ನು ಕಾಂತಾರ ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಹಾಗೂ ನಾಯಕಿ ಸಪ್ತಮಿ ಗೌಡ ಅವರು ಪ್ರಮೋಷನ್ ಕಾರ್ಯಕ್ರಮದ ಸಲುವಾಗಿ ಹಿಂದಿ youtube ಚಾನೆಲ್ ಗಳಿಗೆ ಸಂದರ್ಶನವನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಖ್ಯಾತ ವಿಮರ್ಶಕ ಆಗಿರುವ ಸೂರಜ್ ಕುಮಾರ್ ಮಾಡಿದ ಕೆಲಸ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮೊದಲಿಗೆ ರಿಷಬ್ ಶೆಟ್ಟಿ ಅವರನ್ನು ಎದ್ದೇಳಲು ಹೇಳಿ ನಂತರ ಅವರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಇಂತಹ ಪಾತ್ರವನ್ನು ನನ್ನ ಜೀವಮಾನದಲ್ಲಿ ಎಂದು ಕೂಡ ನಾನು ನೋಡಿಲ್ಲ, ಯಾರಿಗೂ ಕೂಡ ನಾನು ಕಾಲಿಗೆ ಬೀಳಬೇಕು ಎಂಬುದಾಗಿ ಭಾವಿಸಿರಲಿಲ್ಲ ಮೊದಲ ಬಾರಿಗೆ ನಿಮ್ಮ ಪಾತ್ರವನ್ನು ನೋಡಿ ಅಷ್ಟೊಂದು ಪ್ರಭಾವಿತನಾಗಿ ನಿಮ್ಮ ಕಾಲಿಗೆ ಬೀಳುತ್ತಿದ್ದೇನೆ ಎಂಬುದಾಗಿ ಸೂರಜ್ಕುಮಾರ್ ರಿಷಬ್ ಶೆಟ್ಟಿ ಅವರ ಕಾಲಿಗೆ ಬಿದ್ದಿದ್ದಾರೆ. ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದು ಒಂದು ಸಿನಿಮಾ ಗೆ ಯಾವ ರೀತಿಯ ತಾಕತ್ತು ಇದೆ ಎಂಬುದನ್ನು ಕಾಂತಾರ ಸಿನಿಮಾ ಸಾಬೀತುಪಡಿಸಿದೆ.

Leave a Comment

error: Content is protected !!