ಬಾಲಿವುಡ್ ನಟ ಅಮೀರ್ ಖಾನ್ ತನ್ನ ಮಗಳ ಜೊತೆ ಹುಟ್ಟುಹಬ್ಬ ಆಚರಿಸಿದ ರೀತಿ ನೋಡಿ ಕೆಂಡಾಮಂಡಲವಾದ ನೆಟ್ಟಿಗರು
ನಟ ಅಮೀರ್ ಖಾನ್ ಮಗಳು ಇರಾ ಖಾನ್ ಇದೀಗ ತನ್ನ 25 ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಇರಾ ಖಾನ್ ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಎರಡನೆಯ ಮಗು. 18 ಏಪ್ರಿಲ್ 198 6ರಲ್ಲಿ ಅಮೀರ್ ಖಾನ್ ತನ್ನ ಪಕ್ಕದ ಮನೆಯ ಹುಡುಗಿಯಾಗಿದ್ದ ರೀಣಾ ದತ್ತಾ ಳನ್ನು ವಿವಾಹವಾಗಿದ್ದರು. ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇಲೆ ಮದುವೆಯಾಗಿದ್ದರು. 6 ವರ್ಷಗಳ ಕಾಲ ಇವರು ಸುಖಸಂಸಾರವನ್ನು ನಡೆಸಿದರು. ಅದಾದ ಮೇಲೆ ಇವರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಲು ಪ್ರಾರಂಭವಾಯ್ತು.
2002 ರಲ್ಲಿ ಅಮೀರ್ ಖಾನ್ ಮತ್ತು ರೀನಾ ದತ್ತ ವಿಚ್ಚೇದನವನ್ನು ಪಡೆದರು. ವಿಚ್ಛೇದನ ಪಡೆದರೂ ಕೂಡ ರೀನಾ ಮತ್ತು ಅಮೀರ್ ಖಾನ್ ಅವರ ನಡುವಿನ ಸಂಬಂಧ ಶಾಶ್ವತವಾಗಿ ಉಳಿದುಕೊಂಡಿದೆ. ಆಗಾಗ ಅಮೀರ್ ಖಾನ್ ಅವರು ತನ್ನ ಮೊದಲ ಪತ್ನಿಯ ಮನೆಗೆ ಬಂದು ತಮ್ಮ ಮಕ್ಕಳ ಜೊತೆಗೆ ಪಾರ್ಟಿ ಮಾಡಿ ಮಾಡುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಮಕ್ಕಳ ಮತ್ತು ಹೆಂಡತಿಯ ಜೊತೆ ಹಳೆಯ ಸಂಬಂಧವನ್ನು ಅಮೀರ್ ಖಾನ್ ಅವರು ಉಳಿಸಿಕೊಂಡಿರುವುದು ವಿಶೇಷ..
ಅಮೀರ್ ಖಾನ್ ಅವರು ಮಕ್ಕಳ ಜೊತೆ ವಿಶೇಷವಾದ ಸಂಬಂಧವನ್ನು ಹೊಂದಿದ್ದಾರೆ. ತಮ್ಮ ಮಕ್ಕಳ ಜೊತೆ ಅಮೀರ್ ಖಾನ್ ಅವರು ತುಂಬಾ ಫ್ರೆಂಡ್ಲಿಯಾಗಿ ಇರುತ್ತಾರೆ. ಮಕ್ಕಳನ್ನು ಸ್ನೇಹಿತರಂತೆ ಅಮೀರ್ ಖಾನ್ ಕಾಣುತ್ತಾರೆ. ಮಕ್ಕಳ ಜೊತೆ ಪೂಲ್ ಪಾರ್ಟಿ ಮಾಡುತ್ತಾರೆ. ಮಕ್ಕಳ ಜೊತೆ ಆಟ ಆಡುತ್ತಾರೆ. ಅಪ್ಪ ಮತ್ತು ಮಕ್ಕಳ ಮಧ್ಯೆ ಯಾವುದೇ ಮುಚ್ಚುಮರೆಯಿಲ್ಲ. ಇದೀಗ ಇದೇ ವಿಷಯ ಚರ್ಚೆಗೆ ಆಹಾರವಾಗಿದೆ. ಅಮೀರ್ ಖಾನ್ ತನ್ನ ಮಗಳ ಹುಟ್ಟುಹಬ್ಬದ ದಿನ ಮಾಡಿದ ಒಂದು ಕೆಲಸ ನೆಟ್ಟಿಗರಲ್ಲಿ ಈ ಚರ್ಚೆ ಹುಟ್ಟಿಸಿದೆ.
ಮಗಳ ಇಪ್ಪತ್ತೈದನೇ ವರ್ಷದ ಹುಟ್ಟುಹಬ್ಬಕ್ಕೆ ನೈಟ್ ಪಾರ್ಟಿ ಅರೇಂಜ್ ಮಾಡಲಾಗಿತ್ತು. ಇದನ್ನು ಪೂಲ್ ಪಾರ್ಟಿ ಅಂತ ಕರೆಯುತ್ತಾರೆ. ಮಧ್ಯರಾತ್ರಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಎಂಜಾಯ್ ಮಾಡಿಕೊಂಡು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುವ ಕ್ಷಣ. ಈ ಪೂಲ್ ಪಾರ್ಟಿಯಲ್ಲಿ ಅಮೀರ್ ಖಾನ್ ಹಾಗೂ ಮೊದಲ ಪತ್ನಿ ರೀನಾ ಕೂಡ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಮಗಳು ಇರಾ ಖಾನ್ ಅವಳ ಬಾಯ್ ಫ್ರೆಂಡ್ ನುಪುರ್ ಶಿಖಾರೆ ಕೂಡ ಪಾಲ್ಗೊಂಡಿದ್ದ. ಇರಾ ಖಾನ್ ತನಗಿಂತ 10 ವರ್ಷ ದೊಡ್ಡ ವಯಸ್ಸಿನ ಪುರುಷ ನುಪುರ್ ಶಿಖಾರೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಪೂಲ್ ಪಾರ್ಟಿಯಲ್ಲಿ ಅಮೀರ್ ಖಾನ್ ಮತ್ತು ಮೊದಲ ಹೆಂಡತಿ ರೀನಾ ಸಮ್ಮುಖದಲ್ಲಿ ಮಗಳು ಇರಾ ಖಾನ್ ಕೇಕ್ ಕಟ್ ಮಾಡುವ ಫೋಟೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ…
ಈ ಒಂದು ಕೇಕ್ ಕಟ್ ಮಾಡುತ್ತಿರುವ ಫೋಟೋದಲ್ಲಿ ಅಮೀರ್ ಖಾನ್ ಮತ್ತು ಅವರ ಮಗ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ ಬಿ’ಕಿ’ನಿ ಉಡುಪು ಹಾಕಿಕೊಂಡಿರುವ ಇರಾ ಖಾನ್ ತಂದೆ ಜೊತೆ ಕೇಕ್ ಕಟ್ ಮಾಡುತ್ತಿರುವ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ. ತಂದೆಯ ಸಮ್ಮುಖದಲ್ಲಿ ಮಗಳು ಬಿ’ಕಿ’ನಿ ಡ್ರೆಸ್ ಹಾಕಿರುವುದು ಸಮಂಜಸವಲ್ಲ. ಇವರಿಗೆ ಮನೆಯವರ ಎದುರುಗಡೆ ಈ ರೀತಿ ಬಟ್ಟೆಗಳನ್ನು ಹಾಕಲಿಕ್ಕೆ ನಾಚಿಕೆ ಆಗಲ್ವಾ ಅಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಂದೆ ತಾಯಿಯ ಸಮ್ಮುಖದಲ್ಲಿ ಮಗಳು ಈ ರೀತಿಯ ಬಟ್ಟೆ ಹಾಕಿಕೊಂಡು ಕೇಕ್ ಕಟ್ ಮಾಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ಹಲವರು ಅಮೀರ್ ಖಾನ್ ಗೆ ಪಾಠ ಹೇಳಿದ್ದಾರೆ.