Billa Ranga Baasha: ಕಿಚ್ಚನ ಅಭಿಮಾನಿಗಳಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಅನುಪ್ ಭಂಡಾರಿ! ಕಿಚ್ಚನ ಅಭಿಮಾನಿಗಳು ಫುಲ್ ಖುಷ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ಯಾವುದು ಏನೋ ಕುರಿತಂತೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಗೊಂದಲಗಳು ಊಹಾಪೋಹಗಳ ರೀತಿಯಲ್ಲಿ ಎಲ್ಲ ಕಡೆ ಓಡಾಡುತ್ತಿವೆ. ಹಲವಾರು ಮೂಲಗಳಿಂದ ಹಲವಾರು ಸುದ್ದಿಗಳು ಹೊರಬಂದು ಕಿಚ್ಚನ ಅಭಿಮಾನಿಗಳಲ್ಲಿ ಕೂಡ ಈ ಗೊಂದಲ ಹೆಚ್ಚಾಗಿದೆ. ಸದ್ಯಕ್ಕೆ ಕಿಚ್ಚ(Kiccha) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ(Kabzaa) ಇದೆ ಮಾರ್ಚ್ 17ಕ್ಕೆ ಬಿಡುಗಡೆಯಾಗುತ್ತಿದೆ.

ಇದೇ ಮಾರ್ಚ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ನಟನೆಯ ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಆಗಿರುವ ಅನೂಪ್ ಭಂಡಾರಿ(Anup Bhandari) ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ತಮ್ಮ ಮುಂದಿನ ಸಿನಿಮಾದ ಬಗ್ಗೆ ಕಿಚ್ಚನ ಅಭಿಮಾನಿಗಳಲ್ಲಿ ದೊಡ್ಡ ರೀತಿಯಲ್ಲಿ ಸಂಚಲನ ಉಂಟುಮಾಡುವಂತಹ ಹೇಳಿಕೆಯನ್ನು ನೀಡಿದ್ದಾರೆ.

ಹೌದು ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಕ್ಕೆ ಪ್ರತಿಯೊಬ್ಬ ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತಾ, ಬಿಗಿಯಾಗಿ ಕೂತ್ಕೊಳ್ಳಿ, ರಂಪಾಟ ಶುರುವಾಗೋಕೆ ಸ್ವಲ್ಪ ಸಮಯ ಬೇಕು, ಬಾಡೂಟದ ಜೊತೆಗೆ ಬರ್ತೀವಿ ಅಲ್ಲಿವರೆಗೂ ಇಂದಿನ ಹಾಗೆ ತಾಳ್ಮೆ ಇರಲಿ ಎನ್ನುವುದಾಗಿ ವಿಚಿತ್ರವಾಗಿ ಧನ್ಯವಾದಗಳನ್ನು ಕೋರಿದ್ದಾರೆ. ಇದರ ಮೂಲಕ ಕಿಚ್ಚನ(Kiccha) ಮುಂದಿನ ಸಿನಿಮಾದ ಬಗ್ಗೆ ಅನೂಪ್ ಭಂಡಾರಿ ಪಕ್ಕಾ ಮಾಹಿತಿ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಅವರು ಹೇಳಿರುವಂತಹ ಪದಗಳ ಮೊದಲ ಮೂರು ಅಕ್ಷರಗಳನ್ನು ತೆಗೆದುಕೊಂಡರೆ ಅದು ಬಿ ರಂ ಬಾ ಆಗುತ್ತದೆ. ಅದರ ಅರ್ಥ ಬಿಲ್ಲ ರಂಗ ಬಾಷಾ ಆಗಿದೆ. ಅಂದರೆ ಅತಿ ಶೀಘ್ರದಲ್ಲಿ ಬಿಲ್ಲರಂಗ ಬಾಷಾ(Billa Ranga Baasha) ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎನ್ನುವ ವಿಚಾರವನ್ನು ಪರೋಕ್ಷವಾಗಿ ಅನೂಪ್ ಭಂಡಾರಿ ಇಲ್ಲಿ ಹೇಳಿದ್ದಾರೆ ಎಂದು ಹೇಳಬಹುದಾಗಿದೆ. ಒಗಟಿನ ರೀತಿಯಲ್ಲಿ ಸುಳಿವನ್ನು ನೀಡಿದ್ದರೂ ಕೂಡ ಕಿಚ್ಚನ ಅಭಿಮಾನಿಗಳಲ್ಲಿ ಮಾತ್ರ ಸಂತೋಷದ ಮನೆ ಮಾಡುವಂತೆ ಮಾಡಿದ್ದಾರೆ.

Leave a Comment

error: Content is protected !!