450 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆಗಿದ್ದ ಬ್ರಹ್ಮಾಸ್ತ್ರ ಮೊದಲ ದಿನ ಗಳಿಸಿದ್ದಷ್ಟು ಗೊತ್ತಾ, ಬಾಲಿವುಡ್ ಗೆ ಸಿಕ್ತು ಮತ್ತೊಂದು ಶಾಕಿಂಗ್ ನ್ಯೂಸ್


ಈಗಾಗಲೇ ನೀವು ತಿಳಿದುಕೊಂಡಿರುವ ಹಾಗೆ ಬಾಲಿವುಡ್ ನಲ್ಲಿ ಬಾಯ್ಕಾಟ್ ಟ್ರೆಂಡ್ ನಡೆಯುತ್ತಿದೆ. ಈಗಾಗಲೇ ದೊಡ್ಡ ದೊಡ್ಡ ಮಟ್ಟದ ಸ್ಟಾರ್ ನಟರ ಸಿನಿಮಾಗಳು ನೆಲಕಚ್ಚಿವೆ. ಸದ್ಯಕ್ಕೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು ಇದು ಕೂಡ ಇದೇ ಲಿಸ್ಟ್ ಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಕೇವಲ ಇವರಿಬ್ಬರೇ ಮಾತ್ರವಲ್ಲದೆ ಸಾಕಷ್ಟು ಖ್ಯಾತನಾಮರೂ ಕೂಡ ನಟಿಸಿದ್ದಾರೆ.

ಹೌದು ಪ್ರಮುಖ ಪಾತ್ರದಲ್ಲಿ ಶಾರುಖ್ ಖಾನ್ ಅಮಿತಾ ಬಚ್ಚನ್ ನಾಗಾರ್ಜುನ ಮೌನಿ ರಾಯ್ ಸೇರಿದಂತೆ ಹಲವಾರು ಸ್ಟಾರ್ ಗಳು ಕಾಣಿಸಿಕೊಂಡಿದ್ದಾರೆ. ಅಸ್ತ್ರಗಳ ಕುರಿತಂತೆ ಕಾಲ್ಪನಿಕ ಕಥೆಯನ್ನು ರಚಿಸಿ ನಿರ್ಮಿಸಿರುವ ಈ ಸಿನಿಮಾಗೆ ಬರೋಬ್ಬರಿ 450 ಕೋಟಿಗೂ ಅಧಿಕ ಬಜೆಟ್ ಖರ್ಚಾಗಿದೆ. ಆದರೆ ಸಿನಿಮಾ ಪ್ರೇಮಿಗಳಲ್ಲಿ ಸಿನಿಮಾದ ಕುರಿತಂತೆ ಯಾವುದೇ ಸಕಾರಾತ್ಮಕ ಸುದ್ದಿಗಳು ಕೇಳಿ ಬರುತ್ತಿಲ್ಲ.

ಅದರಲ್ಲೂ ಸಪ್ಟೆಂಬರ್ 9 ರಂದು ಈ ಸಿನಿಮಾ ಬಿಡುಗಡೆಯಾಗಿದ್ದು ಮೊದಲ ದಿನವೇ ಮಖಾಡೆ ಮಲಗಿಕೊಂಡಿರುವ ಸೂಚನೆ ಕಂಡು ಬರುತ್ತಿದೆ. ಯಾಕೆಂದರೆ ಇಷ್ಟೊಂದು ದೊಡ್ಡ ಬಜೆಟ್ ನಲ್ಲಿ ಹಾಗೂ ದೊಡ್ಡ ಮಟ್ಟದ ತಾರಾ ಬಳಗವನ್ನು ಹೊಂದಿರುವ ಸಿನಿಮಾ ಮೊದಲ ದಿನ ಕಡಿಮೆ ಎಂದರು 60 ರಿಂದ 100 ಕೋಟಿ ರೂಪಾಯಿ ವಿಶ್ವಾದ್ಯಂತ ಕಲೆಕ್ಷನ್ ಮಾಡಬೇಕಾಗಿತ್ತು.

ಆದರೆ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು 30 ಕೋಟಿ ಮಾತ್ರ ಎಂಬುದಾಗಿ ತಿಳಿದು ಬಂದಿದೆ. ಈ 30 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಇಡೀ ವಿಶ್ವದ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಆಗಿದೆ. ನಮ್ಮ ದಕ್ಷಿಣ ಭಾರತದ ಚಿತ್ರಗಳು ಕೂಡ ಇದಕ್ಕಿಂತ ಹೆಚ್ಚಾಗಿ ಕಲೆಕ್ಷನ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕಾಲದಲ್ಲಿ ಇಷ್ಟೊಂದು ದೊಡ್ಡ ಬಜೆಟ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸಂಪೂರ್ಣವಾಗಿ ಸೋತಿದೆ ಎಂದು ಹೇಳಬಹುದಾಗಿದೆ. ಈ ಮೂಲಕ ಬಾಲಿವುಡ್ ಮತ್ತೊಮ್ಮೆ ಪಾತಾಳಕ್ಕೆ ಬಿದ್ದಿದೆ ಎಂದು ಹೇಳಬಹುದು.


Leave A Reply

Your email address will not be published.