ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ..

ಪುನೀತ್ ಅವರು ಇನ್ನಿಲ್ಲ ಎಂಬ ಕೊರಗು ನಮಗಿಂತ ಹೆಚ್ಚಾಗಿ ಪುನೀತ್ ಅವರ ಕುಟುಂಬದವರಿಗೆ ಹೆಚ್ಚು ಕಾಡುತ್ತದೆ. ಅದರಲ್ಲೂ ವಿಶೇಷವಾಗಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಪ್ರತಿದಿನ ಪುನೀತ್ ಅವರು ನನ್ನ ಜೊತೆಗಿಲ್ಲ ಎಂಬ ಕೊರಗು ಕಾಡುತ್ತಲೇ ಇರುತ್ತೆ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಅಶ್ವಿನಿ ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. 2 ಹೆಣ್ಣು ಮಕ್ಕಳನ್ನು ನಿಭಾಯಿಸುವುದರ ಜೊತೆ ಜೊತೆಗೆ ತಮ್ಮ ವೃತ್ತಿಜೀವನವನ್ನು ಕೂಡ ನಿಭಾಯಿಸುತ್ತಿದ್ದಾರೆ.

ಜೊತೆಗಿಲ್ಲದ ಅಪ್ಪನನ್ನು ಬಿಟ್ಟು ಅಶ್ವಿನಿಯವರ ಬದುಕು ನಕ್ಷತ್ರವಿಲ್ಲದ ಆಕಾಶದಂತೆ ಕತ್ತಲಾಗಿದೆ. ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇರಬಹುದು ಆದರೆ ಅಶ್ವಿನಿಯವರಿಗೆ ನೆಟ್ಟವರೇ ಸರ್ವಸ್ವವಾಗಿತ್ತು. ಯಾರು ಎಷ್ಟೇ ಸಮಾಧಾನ ಮಾಡಿದರೂ ಸಹ ಕೊನೆಯದಾಗಿ ಅಶ್ವಿನಿಯವರೇ ಎಲ್ಲ ದುಃಖವನ್ನು ನುಂಗಬೇಕು. ಇತ್ತೀಚೆಗೆ ಅಶ್ವಿನಿಯವರು ನಿಧಾನವಾಗಿ ದುಃಖಸಾಗರದಿಂದ ಆಚೆ ಬರುತ್ತಿದ್ದಾರೆ ಜನರೊಡನೆ ಬೆರೆತು ನಗುಮುಖವನ್ನು ತೋರುತ್ತಿದ್ದಾರೆ. ಅಶ್ವಿನಿ ಅವರ ಮುಖದಲ್ಲಿ ಸ್ವಲ್ಪ ಚೈತನ್ಯ ತುಂಬಿದೆ. ಇದು ಅಪ್ಪು ಅಭಿಮಾನಿಗಳಿಗೆ ಸಹ ಖುಷಿ ತಂದಿದೆ.

ಹಲವಾರು ಸಭೆ ಸಮಾರಂಭಗಳಿಗೆ ಅಶ್ವಿನಿಯವರು ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕರ್ನಾಟಕದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ , ನಟ ದರ್ಶನ್ ,ರಾಕ್ ಲೈನ್ ವೆಂಕಟೇಶ್ ಮತ್ತು ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವಾರು ಗಣ್ಯರು ಕೂಡ ಆಗಮಿಸಿದ್ದರು. ಕಾರ್ಯಕ್ರಮ ಪ್ರಾರಂಭವಾಗುವುದು ಕ್ಕಿಂತಲೂ ಮುಂಚೆ ಬಂದಿದ್ದ ಅತಿಥಿಗಳೊಂದಿಗೆ ಅಶ್ವಿನಿ ನಗುನಗುತ್ತಾ ಮಾತನಾಡುತ್ತಿದ್ದರು.

ಆದರೆ ಕಾರ್ಯಕ್ರಮದ ಕೊನೆಗೆ ಅಶ್ವಿನಿ ಅವರ ಮುಖದಲ್ಲಿ ಬೇಸರದ ಭಾವನೆ ಕಂಡುಬಂದಿತು. ಮತ್ತು ಕಾರ್ಯಕ್ರಮದ ಮುಗಿದ ನಂತರ ಅಶ್ವಿನಿಯವರನ್ನು ಯಾರು ಕೂಡ ಮಾತನಾಡಿಸಲು ಬರಲಿಲ್ಲ. ವೇದಿಕೆ ಮೇಲೆ ಉಪಸ್ಥಿತರಿದ್ದ ಅತಿಥಿಗಳೆಲ್ಲ ಬೇರೆಯವರೊಡನೆ ಮಾತನಾಡುತ್ತಿದ್ದರು ಆಗ ಅಶ್ವಿನಿ ಅವರು ಮಾತ್ರ ಅವರ ಪಾಡಿಗೆ ಅವರು ಕುಳಿತಲ್ಲೇ ಕೂತಿದ್ದರು. ಯಾರಾದರೂ ಬಂದು ವಂದನೆ ಸಲ್ಲಿಸುತ್ತಾರಾ ಎಂದು ಕಾಯುತ್ತ ಕೆಲವು ಸೆಕೆಂಡು ಕಾದು ಕುಳಿತಿದ್ದರು. ಆದರೆ ಯಾರೂ ಕೂಡ ಅಶ್ವಿನಿ ಅವರನ್ನು ಮಾತನಾಡಿಸಲು ಬರಲಿಲ್ಲ. ಪ್ರೇಕ್ಷಕರಿಗೆ ಅಶ್ವಿನಿಯವರನ್ನು ಈ ಸ್ಥಿತಿಯಲ್ಲಿ ನೋಡಿ ತುಂಬಾ ಬೇಸರವಾಯಿತು. ಅಪ್ಪು ಇಲ್ಲದೆ ಒಬ್ಬಂಟಿಯಾಗಿರುವ ಅಶ್ವಿನಿಯವರನ್ನು ನೋಡಿದರೆ ನಿಜಕ್ಕೂ ಮನಸ್ಸಿಗೆ ಬೇಸರವಾಗುತ್ತದೆ.

ತನ್ನ ಬಳಿ ಯಾರೂ ಬರದೇ ಇದ್ದದ್ದನ್ನು ನೋಡಿ ಅಶ್ವಿನಿಯವರು ತಮ್ಮ ಪಾಡಿಗೆ ತಾವು ವೇದಿಕೆಯಿಂದ ಇಳಿದು ನಡೆದುಕೊಂಡು ಹೋದರು. ಅಶ್ವಿನಿಯವರ ಬಳಿ ಕೊನೆಯದಾಗಿ ಗುಡ್ ಬಾಯ್ ಕೂಡ ಹೇಳಲು ಅಲ್ಲಿ ನೆರೆದಿದ್ದ ಅತಿಥಿಗಳಿಗೆ ಸಮಯ ಸಿಗಲಿಲ್ಲ. ಅಶ್ವಿನಿ ಅವರನ್ನು ಬಿಟ್ಟು ಉಳಿದ ಅತಿಥಿಗಳು ಒಬ್ಬರಿಗೆ ಒಬ್ಬರು ಶೆಕ್ ಹ್ಯಾಂಡ್‌ ಕೊಟ್ಟು ಗುಡ್ ಬೈ ಹೇಳುತ್ತಾ ಇದ್ದರು. ಇದರಿಂದ ಅಶ್ವಿನಿಯವರಿಗೆ ಬೇಸರವಾಯಿತೋ ಏನೋ ಗೊತ್ತಿಲ್ಲ… ಅವರು ತಮ್ಮ ಪಾಡಿಗೆ ತಾವು ವೇದಿಕೆಯಿಂದಿಳಿದು ಸುಮ್ಮನೆ ಮನೆಯ ದಾರಿ ಹಿಡಿದರು. ಈ ದೃಶ್ಯವನ್ನು ನೋಡಿದ ಮೇಲೆ ನಮಗೆಲ್ಲ ಛೇ.. ಪುನೀತ್ ಅವರು ಇರಬೇಕಿತ್ತು ಎಂದು ಅನಿಸುತ್ತದೆ.

Leave a Comment

error: Content is protected !!