Appu ಅಪ್ಪುಗಾಗಿ ಬರೆದಿದ್ದ ಕಥೆಯಲ್ಲೇ ದಿನಕರ್ ತೂಗುದೀಪ್ ಹೊಸ ಸಿನಿಮಾ? ಅಶ್ವಿನಿ ಅವರಿಂದ ಟೈಟಲ್ ಬಿಡುಗಡೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಜೀವಂತವಾಗಿದ್ದಿದ್ದರೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ದಿನಕರ್ ತೂಗುದೀಪ್ (Dinkar Thugudeep) ನಿರ್ದೇಶನದಲ್ಲಿ ಹಾಗೂ ಜಯಣ್ಣ ಕಂಬೈನ್ಸ್(Combines) ನಿರ್ಮಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ನಟಿಸಿರುವ ಸಿನಿಮಾ ಈಗ ಸೆಟ್ ಏರಬೇಕಾಗಿತ್ತು. ಆದರೆ ಆ ವಿಧಿಯ ಕೈವಾಡದಿಂದಾಗಿ ಇದು ನಡೆಯಲು ಸಾಧ್ಯವಾಗಲಿಲ್ಲ. ಪ್ರತಿಯೊಬ್ಬರಿಗೂ ಕೂಡ ಇದರ ಕುರಿತಂತೆ ಸಾಕಷ್ಟು ಬೇಸರವಿದ್ದರೂ ಕಾಲದ ನಿಯಮದ ಮುಂದೆ ಎದುರು ನಿಲ್ಲುವವರಾರು ಹೇಳಿ.

ಇನ್ನು ಈಗ ಬಂದಿರುವ ಸುದ್ದಿಗಳ ಪ್ರಕಾರ ಇದೇ ಕಥೆಯನ್ನು ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಹಾಗೂ ಜಯಣ್ಣ ಅವರ ನಿರ್ಮಾಣದಲ್ಲಿ ವಿರಾಟ್ ನಾಯಕ ನಟನಾಗಿ ನಟಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಸಿನಿಮಾ ಈಗಾಗಲೇ ಸೆಟ್ ಏರಿದ್ದು ಅಪ್ಪು ಅವರ ಆಶೀರ್ವಾದದೊಂದಿಗೆ ಪ್ರಾರಂಭವಾಗಿರುವ ಈ ಸಿನಿಮಾದ ಟೈಟಲ್ ಅನ್ನು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರು ರಿವೀಲ್(Reveal) ಮಾಡಲಿದ್ದಾರೆ.

Puneeth Rajkumar And Ashwini Puneeth Rajkumar

ಹೌದು ಮಿತ್ರರೇ ಇದೇ ಫೆಬ್ರವರಿ ಆರರಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಾಗೂ ನಿರ್ಮಾಪಕ ವಿಜಯ್ ಕಿರಗೊಂದವರು ಅವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಪ್ರೊಡಕ್ಷನ್ 23 ಎನ್ನುವ ತಾತ್ಕಾಲಿಕ ಹೆಸರನ್ನು ಹೊಂದಿರುವ ಈ ಸಿನಿಮಾದ ನಿಜವಾದ ಟೈಟಲ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್(Super Hit) ಹಾಗೂ ಜನರು ಮೆಚ್ಚುವಂತಹ ಸಿನಿಮಾಗಳನ್ನು ನೀಡಿರುವ ಜಯಣ್ಣ ಕಂಬೈನ್ಸ್ ನಿರ್ಮಾಣ ಸಂಸ್ಥೆ ಈಗ ಮತ್ತೊಂದು ಸದಭಿ ರುಚಿಯ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದೆ ಎಂದರೆ ತಪ್ಪಾಗಲಾರದು.

ನವಗ್ರಹ ಜೊತೆ ಜೊತೆಯಲಿ ಸಾರಥಿಗಳಂತಹ ದೊಡ್ಡ ಮಟ್ಟದ ಯಶಸ್ವಿ ಸಿನಿಮಾಗಳನ್ನೇ ಕನ್ನಡ ಚಿತ್ರರಂಗಕ್ಕೆ ನೀಡಿರುವಂತಹ ಯಶಸ್ವಿ ನಿರ್ದೇಶಕ ದಿನಕರ್ ತೂಗುದೀಪ್ ರವರು ಈಗ ಮತ್ತೊಮ್ಮೆ ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ವಿರಾಟ್ ರವರ ನಾಯಕತ್ವದಲ್ಲಿ ಮತ್ತೊಂದು ಯಶಸ್ವಿ ಸಿನಿಮಾವನ್ನು ಕನ್ನಡ ಪ್ರೇಕ್ಷಕರಿಗೆ(Kannada Audience) ನೀಡಲು ಸಜ್ಜಾಗಿ ನಿಂತಿದ್ದಾರೆ. ಸದ್ಯಕ್ಕೆ ಇದನ್ನು ಆರಂಭಿಕ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಸಿನಿಮಾದ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ.

Leave a Comment

error: Content is protected !!