Arjun Sarja: ಕೋಟಿ ಕೋಟಿ ಕೊಟ್ಟು ನಟಿ ಖುಷ್ಬೂ ಮನೆ ಖರೀದಿಸಿದ್ದ ಅರ್ಜುನ್ ಸರ್ಜಾ. ಈಗ ಏನಾಗಿದೆ ಗೊತ್ತಾ?

Arjun Sarja ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ(Action King Arjun Sarja) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಅವರ ನಟನೆಯ ಸಿನಿಮಾಗಳು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪ್ರೇಕ್ಷಕರಲ್ಲಿ ಪಡೆದುಕೊಂಡಿದೆ. ಇನ್ನು ಇವರು ಕೋಟ್ಯಾಂತರ ರೂಪಾಯಿ ನೀಡಿ ಖರೀದಿಸಿದ ಮನೆಯನ್ನು ಈಗ ಕೆಲವೇ ಸಮಯಗಳಲ್ಲಿ ಬಿಟ್ಟು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಅಲ್ಲಿ ಏನಾಗಿತ್ತು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈ ಮನೆಯನ್ನು ಮೊದಲು ನಟಿ ಖುಷ್ಬು ಅವರು ಚೆನ್ನೈನಲ್ಲಿ ತನ್ನ ಕನಸಿನಂತೆ ಕಟ್ಟಿಸಬೇಕು ಎನ್ನುವ ಕಾರಣಕ್ಕಾಗಿ ಜಾಗವನ್ನು ಖರೀದಿಸಿ ಕಟ್ಟಿಸಿದರು. ಆದರೆ ಅದೇ ಸಂದರ್ಭದಲ್ಲಿ ಹಾವಿನ ಹುತ್ತ ಅಲ್ಲಿತ್ತು ಎಂದು ಹೇಳಲಾಗಿದ್ದು ಆ ಹುತ್ತವನ್ನು ಅಗೆದು ಆ ಜಾಗದಲ್ಲಿಯ ಮನೆಯನ್ನು ನಿರ್ಮಿಸಿದ್ದರು. ಇದಾದ ನಂತರ ನಟಿ ಖುಷ್ಬು(Khushbu Actress) ಅವರ ರಾಜಕೀಯ ಹಾಗೂ ಸಿನಿಮಾ ಜೀವನದಲ್ಲಿ ಒಂದೊಂದೇ ಸಂಕಷ್ಟಗಳು ಬರಲು ಪ್ರಾರಂಭವಾಗುತ್ತವೆ. ಆಗ ಈ ಸಂದರ್ಭದಲ್ಲಿ ಈ ಮನೆಯನ್ನು ಅರ್ಜುನ್ ಸರ್ಜಾ ಅವರಿಗೆ ಖುಷ್ಬು ಅವರು ಮಾರಿಬಿಡುತ್ತಾರೆ.

ಈ ಸಂದರ್ಭದಲ್ಲಿ ಖುಷ್ಬು ಸೇರಿದಂತೆ ಪ್ರತಿಯೊಬ್ಬರೂ ಕೂಡ ಈ ಮನೆಯಲ್ಲಿ ಹಾವಿನ ಸಮಸ್ಯೆ ಇದೆ ಆಗಾಗ ಹಾವು ಕಾಣಿಸಿಕೊಳ್ಳುತ್ತದೆ ಎನ್ನುವ ಸಲಹೆಯನ್ನು ನೀಡಿದ್ದರು ಕೂಡ ಧಾರ್ಮಿಕ ಪೂಜೆ ಪುನಸ್ಕಾರಗಳಲ್ಲಿ ಸಾಕಷ್ಟು ನಂಬಿಕೆ ಇದ್ದ ಅರ್ಜುನ್ ಸರ್ಜಾ(Arjun Sarja) ಅದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳದೆ ಮನೆಯನ್ನು ಖರೀದಿಸಿಯೇ ಬಿಡುತ್ತಾರೆ. ಅವರಿಗೂ ಕೂಡ ಸಾಕಷ್ಟು ಹೋಮ ಹವಮಾನಗಳನ್ನು ಮಾಡಿದ ನಂತರವೂ ಕೂಡ ಹಾವಿನ ಸಮಸ್ಯೆ ಹೆಚ್ಚಾಗಿ ಕಾಣಲು ಪ್ರಾರಂಭವಾಗುತ್ತದೆ.

ನಂತರ ಅವರು ಕೂಡ ಯೋಚನೆ ಮಾಡಿ ಇದನ್ನು ಬೇರೆಯವರಿಗೆ ಮಾರಾಟ ಮಾಡಿದೆ ಅಲ್ಲೇ ಒಂದು ದೇವಸ್ಥಾನವನ್ನು ಕಟ್ಟಿ, ಮನೆಯನ್ನು ಖಾಲಿ ಮಾಡಿಕೊಂಡು ಹೋಗುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ನಿಜಕ್ಕೂ ಇಲ್ಲಿ ನಾವು ಅರ್ಜುನ್ ಸರ್ಜಾ(Arjun Sarja Kannada Actor) ಅವರ ಮನಸ್ಸನ್ನು ಮೆಚ್ಚಲೇಬೇಕು ಯಾಕೆಂದರೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದ್ದರೂ ಕೂಡ ಅದನ್ನು ಬೇರೆಯವರಿಗೆ ಮಾರದೆ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ದೇವಸ್ಥಾನ ಕಟ್ಟಿಸಿ ಹಾಗೆ ಬಿಟ್ಟಿರುವುದು ನಿಜಕ್ಕೂ ಕೂಡ ಮೆಚ್ಚುವ ವಿಚಾರ.

Leave a Comment

error: Content is protected !!