ಅಪ್ಪು ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್. ಅಪ್ಪು ಅವರ ವಾಯ್ಸ್ ನಲ್ಲಿಯೇ ಜೇಮ್ಸ್ ಸಿನಿಮಾವನ್ನು ನೋಡುವ ಅವಕಾಶ

ನಿಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಹೊಂದಿದೆ. ಮತ್ತು ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರಿಲ್ಲದೆ ಅವರ ಕೊನೆಯ ಚಿತ್ರವನ್ನು ನೋಡುವುದು ಮನಸ್ಸಿಗೆ ತುಂಬಾ ಭಾರವಾಗುತ್ತೆ. ಆದರೂ ಕೂಡ ಅಭಿಮಾನಿಗಳು ಕೊನೆಯ ಬಾರಿ ಅಪ್ಪು ಅವರನ್ನ ಕಣ್ತುಂಬಿಕೊಳ್ಳುವ ಸದಾವಕಾಶ ಪಡೆದಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳೆಲ್ಲ ಜೇಮ್ಸ್ ಚಿತ್ರವನ್ನು ಜಾತ್ರೆಯ ಹಾಗೆ ಸಡಗರದಿಂದ ಸಂಭ್ರಮಿಸಿದ್ದರು. ಜೇಮ್ಸ್ ಜಾತ್ರೆ ಎಂದೇ ಕರೆಯಲಾಗಿತ್ತು.

ಜೇಮ್ಸ್ ಚಿತ್ರವನ್ನು ನೋಡಿದ ಅಭಿಮಾನಿಗಳೆಲ್ಲ ಮೂಕವಿಸ್ಮಿತರಾದರು. ಅಪ್ಪು ಅವರ ಆ್ಯಕ್ಷನ್ ಅಭಿನಯವನ್ನು ನೋಡಿ ಮಾತೇ ಹೊರಡಲಿಲ್ಲ. ಆದರೆ ಈ ಚಿತ್ರದಲ್ಲಿ ಮಿಸ್ ಹೊಡೆದ ಅಂಶವೇನೆಂದರೆ ಅಪ್ಪು ಅವರ ವಾಯ್ಸ್. ಡಬ್ಬಿಂಗ್ ಮಾಡುವುದಕ್ಕಿಂತ ಮುಂಚೆ ಪುನೀತ್ ತೀರಿಕೊಂಡಿದ್ದ ಕಾರಣ ಜೇಮ್ಸ್ ಚಿತ್ರಕ್ಕೆ ಅಪ್ಪು ಅವರು ವಾಯ್ಸ್ ನೀಡುವುದು ಸಾಧ್ಯವಾಗಲಿಲ್ಲ. ಆದಕಾರಣ ಜೇಮ್ಸ್ ಚಿತ್ರಕ್ಕೆ ಅಪ್ಪು ಬದಲಾಗಿ ಶಿವಣ್ಣ ಅವರೇ ವಾಯ್ಸ್ ನೀಡಿದ್ದರು. ಅಪ್ಪು ಅವರ ವಾಯ್ಸ್ ಕೇಳದೆ ಅಭಿಮಾನಿಗಳಿಗೆ ಬೇಸರವಾಗಿದ್ದು ನಿಜ.

ಇದೀಗ ಅಭಿಮಾನಿಗಳ ಆಸೆ ಈಡೇರಿದೆ. ನಿರಾಶ್ರಿತರಾಗಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮೇಲೆ ಜೇಮ್ಸ್ ಚಿತ್ರವನ್ನು ಅಪ್ಪುವವರು ವಯಸ್ಸಿನಲ್ಲಿಯೇ ನೋಡುವಂತಹ ಸೌಭಾಗ್ಯ ದೊರೆತಿದೆ. ಹೌದು ಗೆಳೆಯರೇ ಜೇಮ್ಸ್ ಚಿತ್ರಕ್ಕೆ ಅಪ್ಪು ಅವರ ವೈಸ್ ನೀಡಬೇಕೆಂದು ಹಲವು ತಿಂಗಳುಗಳಿಂದ ಜೇಮ್ಸ್ ಚಿತ್ರತಂಡದವರು ಹರಸಾಹಸವನ್ನೇ ಪಡುತ್ತಿದ್ದಾರೆ. ಆದರೆ ಇಂದು ಈ ಒಂದು ಪ್ರಯತ್ನ ಸಫಲವಾಗಿದೆ. ಜೇಮ್ಸ್ ಚಿತ್ರವನ್ನು ಸಂಪೂರ್ಣವಾಗಿ ಅಪ್ಪು ಅವರ ವಾಯ್ಸ್ ನಲ್ಲಿಯೇ ನಾವು ಇನ್ಮೇಲೆ ಕೇಳಬಹುದಾಗಿದೆ.

ಹೈದರಾಬಾದ್ ನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಸೌಂಡ್ ಎಂಜಿನಿಯರ್ ಗಳು ಸತತವಾಗಿ ಎಡಬಿಡದೆ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ. ಅಪ್ಪು ಅವರ ವಾಯ್ಸ್ ಗಳನ್ನು ಕಲೆಕ್ಟ್ ಮಾಡಿಕೊಂಡು ತಂತ್ರಜ್ಞಾನಗಳ ಮೂಲಕ ಹೊಸದಾದ ಪ್ರಯೋಗವನ್ನು ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ಹಳೆಯ ಸಂದರ್ಶನಗಳ ಹಾಗೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ವಾಯ್ಸ್ ಗಳನ್ನು ಡೇಟಾ ಆಗಿ ಇಟ್ಟುಕೊಂಡು, ಅದನ್ನು ಪ್ರೊಸೆಸ್ ಮಾಡಿ ಪ್ರೋಗ್ರಾಮಿಂಗ್ ಮೂಲಕ ಜೇಮ್ಸ್ ಚಿತ್ರಕ್ಕೆ ಅಳವಡಿಸಲಾಗಿದೆ. ಪ್ರಸಿದ್ಧ ಐಐಟಿ ಎಂಜಿನಿಯರ್ ಗಳು ಹಗಲು ರಾತ್ರಿ ಕೆಲಸ ಮಾಡಿ ಕೊನೆಗೂ ಯಶಸ್ವಿಯಾಗಿದ್ದಾರೆ .

ಕೊನೆಗೂ ಅಪ್ಪುವವರು ವೈಸ್ ಕೇಳುವಂತಹ ಸದಾವಕಾಶ ದೊರೆತಿದೆ ಎಂಬುದು ನಮಗೆಲ್ಲ ಸಂತೋಷದ ವಿಷಯ. ಜೇಮ್ಸ್ ಸಿನಿಮಾದ ನಿರ್ದೇಶಕರು ಚೇತನ್ ಅವರು ತಂತ್ರಜ್ಞಾನದ ಮೂಲಕ ರಚಿಸಲಾದ ಅಪ್ಪು ಅವರ ವಾಯ್ಸ್ ಕೇಳಿ ಶಾಕ್ ಆಗಿದ್ದಾರೆ. ಯಾಕೆಂದರೆ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಾದ ಅಪ್ಪು ಅವರ ವಾಯ್ಸ್ ಸೇಮ್ ಟು ಸೇಮ್ ಅಪ್ಪು ಅವರು ಮಾತನಾಡುವ ವಾಯ್ಸ್ ಹಾಗೆ ಇದೆಯ೦ತೆ. ನೀವೆಲ್ಲ ಈ ಸೌಭಾಗ್ಯ ಕಣ್ತುಂಬಿಕೊಳ್ಳ ಬೇಕೆಂದರೆ ಏಪ್ರಿಲ್ 22ರ ತನಕ ಕಾಯಬೇಕು. ಇದೇ ಶುಕ್ರವಾರದಿಂದ ಜೇಮ್ಸ್ ಚಿತ್ರ ಪ್ರದರ್ಶನ ಕಾಣುತ್ತಿರುವ ಥಿಯೇಟರ್ ಗಳಲ್ಲಿ ಜೇಮ್ಸ್ ಚಿತ್ರವನ್ನು ಅಪ್ಪುವವರ ವಾಯ್ಸ್ ನಲ್ಲಿಯೇ ನೋಡಬಹುದು. ಥಿಯೇಟರ್ ಗಳಿಗೆ ಹೋಗಲಿಕ್ಕೆ ಸಾಧ್ಯವಾಗದಿದ್ದಲ್ಲಿ ಜೇಮ್ಸ್ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡುತ್ತಾರೆ ಅಲ್ಲಿ ಕೂಡ ನೀವು ಅಪ್ಪು ವಾಯ್ಸ್ ನಲ್ಲಿಯೇ ಸಿನಿಮಾ ನೋಡಬಹುದು.

Leave a Comment

error: Content is protected !!