Puneeth Rajkumar ಸಿಂಹ ಪ್ರಿಯ ಮದುವೆಯಲ್ಲಿ ಪ್ರತ್ಯಕ್ಷರಾದ ಅಪ್ಪು; ವೈರಲ್ ಆಯ್ತು ಫೋಟೋ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞ(Technicians) ಕೂಡ ಮೆಚ್ಚುವಂತಹ ಅಜಾತಶತ್ರು ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದರು. ಆದರೆ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಮಾಸಲಾಗದಂತಹ ಬೇಸರವನ್ನು ಉಂಟು ಮಾಡಿತ್ತು. ಅಪ್ಪು ಅವರ ಮರಣ ಕೂಡ ವೈದ್ಯಲೋಕಕ್ಕೆ ಸವಾಲನ್ನು ಎಸೆಯುವಂತಿತ್ತು.

ನಮ್ಮೆಲ್ಲರ ನೆಚ್ಚಿನ ಅಪ್ಪು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಯುವ ಕಲಾವಿದನ ಸಿನಿಮಾಗಳಿಗೆ ಕೂಡ ಶುಭ ಹಾರೈಸುತ್ತಿದ್ದರು ಹಾಗೂ ಟ್ರೈಲರ್ ಟೀಸರ್(Teaser) ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಲ್ಲೆಲ್ಲ ಹೋಗುತ್ತಿದ್ದರು. ಒಮ್ಮೆ ಕೂಡ ತಾನು ಸ್ಟಾರ್ ನಟ ಅಥವಾ ರಾಜ್‌ಕುಮಾರ್ ಅವರ ಮಗ ಎನ್ನುವ ಹಮ್ಮು ಬಿಮ್ಮನ್ನು ತೋರಿಸದವರಲ್ಲ. ಇದಕ್ಕಾಗಿ ಅವರು ಪ್ರತಿಯೊಬ್ಬರಿಗೆ ಇಷ್ಟವಾಗುತ್ತಾರೆ.

ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಟಿ ಆಗಿರುವ ವಶಿಷ್ಟ ಹಾಗೂ ಹರಿಪ್ರಿಯ ಇಬ್ಬರು ಕೂಡ ಪ್ರೀತಿಸಿ ಎಂಗೇಜ್ಮೆಂಟ್ ಮಾಡಿಕೊಂಡು ಇದೇ ಜನವರಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಬಹುತೇಕ ಇಡೀ ಕನ್ನಡ ಚಿತ್ರರಂಗವೇ ಹಾಜರಿದ್ದು ನವ ವಧು ವರರಿಗೆ ಶುಭ ಹಾರೈಸಿತ್ತು. ಆದರೆ ಖಂಡಿತವಾಗಿ ಅವರಿಬ್ಬರಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಶುಭ ಸಮಾರಂಭವನ್ನು ನೋಡಲು ಇರಲಿಲ್ಲ ಎಂಬ ಬೇಸರ ಕೂಡ ಇರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಫೋಟೋದಲ್ಲಿ ಇವರಿಬ್ಬರ ಮದುವೆ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಹಾಜರಿದ್ದರು ಎಂಬಂತೆ ಫೋಟೋ(Photo) ಓಡಾಡುತ್ತಿದೆ.

ಆಶ್ಚರ್ಯ ಪಡೋದಕ್ಕೆ ಹೋಗ್ಬೇಡಿ ಗೆಳೆಯರೇ ಯಾಕೆಂದರೆ ಇದು ಅಭಿಮಾನಿ ಒಬ್ಬರು ಎಡಿಟ್ ಮಾಡಿರುವಂತಹ ಕಾಲ್ಪನಿಕ ಫೋಟೋ ಆಗಿದ್ದು ಈ ಫೋಟೋದಲ್ಲಿ ವಸಿಷ್ಟ ಹಾಗೂ ಹರಿಪ್ರಿಯ ಅವರ ಮದುವೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಭಾಗವಹಿಸಿರುವಂತೆ ಕಲ್ಪಿಸಿ(Imagine) ಫೋಟೋವನ್ನು ಎಡಿಟ್ ಮಾಡಲಾಗಿದೆ. ಇದು ಅಭಿಮಾನಿಗಳಿಗೆ ಸಾಕಷ್ಟು ಭಾವುಕ ಅನುಭವವನ್ನು ನೀಡಿದ್ದು ಪ್ರತಿಯೊಬ್ಬರೂ ಕೂಡ ಈ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ನಿಮಗೂ ಕೂಡ ಈ ಫೋಟೋ ಇಷ್ಟವಾಗಿದ್ದರೆ ನೀವು ಕೂಡ ಶೇರ್ ಮಾಡಿ.

Leave a Comment

error: Content is protected !!