ಎಕ್ಸಾಮ್ ನಲ್ಲಿ ಅಪ್ಪು ಮಗಳು ಪಡೆದ ಅಂಕ ಎಷ್ಟು ಗೊತ್ತಾ? ಇಡೀ ಕರುನಾಡೆ ಕಾದಿದ್ದ ವಿಷಯ ಕೊನೆಗೂ ಬಹಿರಂಗ.

actor puneeth rajkumar: ಪವರ್ ಸ್ಟಾರ್ (Powerstar) ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಕ್ಕೂ ಮೀರಿ ದಿನಗಳು ಕಳೆದಿದ್ದರೂ ಕೂಡ ಅವರ ನೆನಪು ಇಂದಿಗೂ ಕೂಡ ಸದಾ ಕಾಲ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಕರ್ನಾಟಕ ರಾಜ್ಯದ ಅತ್ಯಂತ ಉನ್ನತ ಪ್ರಶಸ್ತಿ ಯಾಗಿರುವ ಕರ್ನಾಟಕ ರತ್ನ ಪ್ರಶಸ್ತಿಗೆ ಮರಣೋತ್ತರವಾಗಿ ಭಾಜನರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವಂತಹ ಜನಪರ ಕಾರ್ಯಗಳು ನಿಜಕ್ಕೂ ಅವರನ್ನು ದೇವರನ್ನಾಗಿ ಮಾಡುತ್ತದೆ.

ಅಪ್ಪು ಅವರನ್ನು ನೋಡಲು ಅವರ ಸಮಾಧಿಯಾಗಿರುವ ಕಂಠೀರವ ಸ್ಟುಡಿಯೋ(Studio) ಬಳಿ ಇಂದಿಗೂ ಕೂಡ ಜನರು ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಸೇರುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ಅವರನ್ನು ನಾವು ಪರದೆಯ ಮೇಲೆ ನೋಡಿದ್ದೇವೆ ಎಂದು ಹೇಳುವುದಕ್ಕೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡಲೇಬೇಕು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎರಡನೆಯ ಮಗಳ ಬಗ್ಗೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.

actor puneeth rajkumar
actor puneeth rajkumar

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೊದಲ ಮಗಳಾಗಿರುವ ದೃತಿ ವಿದೇಶದಲ್ಲಿ ಸ್ಕಾಲರ್ಶಿಪ್(Scholarship) ಮೇಲೆ ಓದುತ್ತಿದ್ದಾರೆ. ಇನ್ನು ಎರಡನೇ ಮಗಳಾಗಿರುವ ವಂದಿತ ತಮ್ಮ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆಗೆ ಬೆಂಗಳೂರಿನಲ್ಲಿಯೇ ಇದ್ದು 10ನೇ ತರಗತಿ ಎಕ್ಸಾಮ್ ಅನ್ನು ಬರೆದಿದ್ದರು. ತಂದೆಯವರ ನೆನಪಿನಲ್ಲಿಯೇ ಎಕ್ಸಾಮ್(Exam) ಬರೆಯಲು ಹೋಗಿದ್ದ ವಂದಿತ ಅವರಿಗೆ ಇಡೀ ಕರುನಾಡೆ ಶುಭ ಕೋರಿತು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ..ಹೋಟೆಲ್ ರೂಂನಲ್ಲಿ ತನ್ನ ಪ್ರೇಯಸಿಯ ಜೊತೆಗೆ ಗಂಡ ಡಿಂಗ್ ಡಾಂಗ್ ಮಾಡುತ್ತಿದ್ದನ್ನು ನೋಡಿ ಅವನ ಹೆಂಡತಿ ಮಾಡಿದ್ದೇನು ಗೊತ್ತಾ?

ಈಗ ಅವರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು ವಂದಿತ ಅವರು ಫಸ್ಟ್ ರಾಂಕ್(First Rank) ನಲ್ಲಿ ಪಾಸ್ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಪ್ಪು ಅವರ ಹೆಸರನ್ನು ಅವರ ಮಕ್ಕಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕಾಗಿರುವಂತಹ ವಿಚಾರ. ಅವರ ತಂದೆಯಂತೆ ಅವರ ಮಕ್ಕಳು ಕೂಡ ಇದೇ ರೀತಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಲಿ ಎನ್ನುವುದೇ ಅಪ್ಪು ಅಭಿಮಾನಿಗಳ ಆಶಯ.

Leave a Comment

error: Content is protected !!