ಇವತ್ತು ಮಳೆ ಬಂದಿದೆ ನಾನು ಇನ್ಮೇಲೆ ಅಳೋದೆ ಇಲ್ಲ ಅಂತ ಅನುಶ್ರೀ ಹೇಳಿದ್ದೇಕೆ
ನಟಿ ಮತ್ತು ಆಂಕರ್ ಅನುಶ್ರೀ ಅವರು ಇಡೀ ಕರ್ನಾಟಕಕ್ಕೆ ಚಿರಪರಿಚಿತ ಹುಡುಗಿ. ಇವರು ಕನ್ನಡದ ನಂಬರ್ ವನ್ ಆ್ಯಂಕರ್. ಇವರಿಲ್ಲದೆ ರಿಯಾಲಿಟಿ ಶೋಗಳು ಮತ್ತು ಕನ್ನಡ ಸಿನಿಮಾಗಳ ಪ್ರಚಾರವೇ ನಡೆಯುವುದಿಲ್ಲ. ಹಾಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆ್ಯಂಕರ್ ಕೂಡ ಹೌದು. ಸಿನಿಮಾ ಹೀರೋಯಿನ್ ಗಳು ಕೂಡ ನಟಿ ಅನುಶ್ರೀ ಪಡೆಯುವಷ್ಟು ಹಣವನ್ನು ಪಡೆಯುವುದಿಲ್ಲ. ಒಂದು ಎಪಿಸೋಡ್ ಗೆ ಅನುಶ್ರೀ ಎಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ.
ವೈಯಕ್ತಿಕ ವಿಚಾರಕ್ಕೆ ಬಂದರೆ ಅನುಶ್ರೀ ಅವರು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್ ರಾಜ್ ಕುಮಾರ್ ಅಂದರೆ ಅನುಶ್ರೀ ಅವರಿಗೆ ಹುಚ್ಚು ಪ್ರೀತಿ. ಅವರ ನಿಷ್ಕಲ್ಮಶ ನಗುವನ್ನು ಕಂಡರೆ ಅಚ್ಚುಮೆಚ್ಚು. ಇದೀಗ ಅಪ್ಪು ಅವರನ್ನು ಕಳೆದುಕೊಂಡು ಸಪ್ಪೆಯಾಗಿದ್ದಾರೆ. ಕಳೆದ 4 ತಿಂಗಳಿಂದಲೂ ಅನುಶ್ರೀ ಮನಸ್ಸು ಭಾರವಾಗಿದೆ. ಸಭೆ ಸಮಾರಂಭಗಳಲ್ಲಿ ಅಪ್ಪು ಅವರ ಬಗ್ಗೆ ಮಾತಾಡುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಅಪ್ಪು ನಾ ಫೋಟೋ ನೋಡಿದ ತಕ್ಷಣವೇ ಅನುಶ್ರೀ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಅಪ್ಪು ಇಲ್ಲ ಎಂಬ ಸತ್ಯ ಆಚೆ ಬರಲು ಅನುಶ್ರೀ ಸಿಕ್ಕಾಪಟ್ಟೆ ಕಷ್ಟ ಪಡುತ್ತಿದ್ದರು. ಇದೇ ವಾರ ಅನುಶ್ರೀ ಅವರು ತೆಲುಗಿನ RRR ಸಿನಿಮಾ ಪ್ರಮೋಷನ್ ಗೋಸ್ಕರ ಕಾರ್ಯಕ್ರಮವೊಂದಕ್ಕೆ ಆ್ಯಂಕರ್ ಆಗಿ ಹೋಗಿದ್ದರು. ಈ ಸಮಯದಲ್ಲಿ ತೆಲುಗು ನಟ ಜ್ಯೂನಿಯರ್ ಎನ್ ಟಿ ಆರ್, ರಾಮ್ ಚರಣ್ ಮತ್ತು ಶಿವಣ್ಣ ಕೂಡ ಬಂದಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳು ತಮ್ಮ ಮಾತುಗಳನ್ನು ಪ್ರಾರಂಭ ಮಾಡಿದ್ದು ಅಪ್ಪು ಅವರಿಂದಲೇ.
ವಿಶೇಷವಾಗಿ ಜೂನಿಯರ್ ಎನ್ಟಿಆರ್ ಅವರು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಆಡಿದ ಮಾತುಗಳು ಮನಸ್ಸಿಗೆ ಹತ್ತಿರವಾಯಿತು. ಅಪ್ಪು ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ಅವರು ನಮ್ಮೊಂದಿಗೆ ಇದ್ದಾರೆ. ಆಕಾಶದ ಮೇಲಿಂದ ನಮಗೆಲ್ಲ ಹಾರೈಸುತ್ತಿದ್ದಾರೆ ಅವರು ಮಳೆ ಗಾಳಿಯ ಮೂಲಕ ನಮ್ಮನ್ನು ಸ್ಪರ್ಶ ಮಾಡುತ್ತಾರೆ ಎಂದು ಜೂನಿಯರ್ ಎನ್ ಟಿಆರ್ ಅವರು ಭಾವುಕ ಮಾತುಗಳನ್ನು ಆಡಿದ್ದಾರೆ. ಜೂನಿಯರ್ ಎನ್ಟಿಆರ್ ಹೇಳಿದ ಮಾತು ಪ್ರತಿಯೊಬ್ಬರಿಗೂ ಅಪ್ಪು ನಮ್ಮೋಂದಿಗೆ ಇದ್ದಾರೆ ಎಂಬ ಭಾವನೆಯನ್ನು ಮೂಡಿಸಿತು.
ಅಪ್ಪು ಇಲ್ಲ ಎಂದೇ ಪ್ರತಿದಿನ ಕೊರಗುತ್ತಿದ್ದನು ಜೂನಿಯರ್ ಎನ್ ಟಿ ಆರ್ ಹೇಳಿದ ಮಾತುಗಳು ಮನಸ್ಸಿಗೆ ಸಮಾಧಾನ ನೀಡಿತು. ಇಂದು ಮಾರ್ಚ್ 20 ರಂದು ಅನುಶ್ರೀ ಅವರು ದೊಡ್ಮನೆ ಕುಟುಂಬದವರ ಜೊತೆ ಬೃಹತ್ ಕಾಲ್ನಡಿಗೆ ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಮೆರವಣಿಗೆಯಲ್ಲಿ ಹೂವಿನ ಪಲ್ಲಕ್ಕಿಯ ಮೇಲೆ ಪುನೀತ್ ಅವರ ಫೋಟೋ ಇಟ್ಟು ಬೃಹತ್ ಮೆರವಣಿಗೆ ನಡೆದಿದೆ. ಈ ಮರೆವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಜೋರಾಗಿ ಮಳೆ ಗಾಳಿ ಕೂಡ ಸುರಿದಿದೆ.
ಈ ಮೆರವಣಿಗೆಯಲ್ಲಿ ಉಪಸ್ಥಿತರಾಗಿದ್ದ ಅನುಶ್ರೀ ಅವರಿಗೆ ಜೋರಾದ ಗಾಳಿ-ಮಳೆ ನೋಡಿ ಜೂನಿಯರ್ ಎನ್ಟಿಆರ್ ಹೇಳಿದ್ದ ಮಾತುಗಳು ನೆನಪಾದವು. ತಕ್ಷಣ ಅನುಶ್ರೀಗೆ ಅರಿವಾದದ್ದು ಏನೆಂದರೆ ಅಪ್ಪು ಸಾರ್ ಗಾಳಿ-ಮಳೆಯ ರೂಪದಲ್ಲಿ ತಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂದು. ಆ ಕ್ಷಣದಿಂದ ಅನುಶ್ರೀಯವರು ಇನ್ಮುಂದೆ ನಾನು ಅಪ್ಪು ಅವರನ್ನು ನೆನಪಿಸಿಕೊಂಡು ಅಳುವುದಿಲ್ಲ ಕೊರಗುವುದಿಲ್ಲ.. ಎಂದೆಂದೂ ನಗುತ್ತಾ ಸಂತೋಷವಾಗಿರುತ್ತೇನೆ ಎಂದು ನಿರ್ಧಾರವನ್ನು ಕೈಗೊಂಡಿದ್ದಾರೆ.