ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಅನಂತನಾಗ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Anantnag, who is acting in Kannada film industry, is his real age ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟಿಸಿಕೊಂಡು ಬರುತ್ತಿರುವ ಕಲಾವಿದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಲೆಜೆಂಡರಿ ನಟ ಅನಂತ್ ನಾಗ್ ರವರು. ಚಿತ್ರರಂಗದಲ್ಲಿ ಭರ್ಜರಿ 50 ವರ್ಷಗಳಿಂದ ಅನಂತನಾಗ್ ಅವರು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿಗೂ ಕೂಡ ಯಂಗ್ ಅಂಡ್ ಎನರ್ಜೆಟಿಕ್ (Energetic) ಆಗಿ ಕಾಣಿಸಿಕೊಳ್ಳುವ ಅನಂತನಾಗ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ಪರೀಕ್ಷಕರು ಕೂಡ ಅನಂತ್ ನಾಗ್ (Anantnag)ಅವರ ಅಭಿನಯಕ್ಕೆ ಅಭಿಮಾನಿ.

ಇದುವರೆಗೂ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅನಂತನಾಗ್ ಅವರು 200ಕ್ಕೂ ಅಧಿಕ ಕನ್ನಡ ಸಿನಿಮಾದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ ತೆಲುಗು ಮರಾಠಿ ಮಲಯಾಳಂ ಹಾಗೂ ಆಂಗ್ಲ ಭಾಷೆಯ ಸಿನಿಮಾಗಳಲ್ಲಿ ಕೂಡ ಅನಂತ್ ನಾಗ್ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದವರಾಗಿದ್ದಾರೆ.

ಇನ್ನು ಈಗಲೂ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲಿ ಯಾರಿಗೆ ಏನು ಕಡಿಮೆ ಇಲ್ಲ ವಯಸ್ಸು ನನಗೆ ಅಡ್ಡಿ ಇಲ್ಲ ಎಂಬಂತೆ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ಅನಂತನಾಗ್ ಅವರು. ನಟನಿಗಾಗಿ ಹ್ಯಾಟ್ರಿಕ್ ಫಿಲಂ ಫೇರ್ (Hattrick Filmfare) ಪ್ರಶಸ್ತಿಯನ್ನು ಪಡೆದುಕೊಂಡ ಬೆರಳೆಣಿಕೆಯಷ್ಟು ಕನ್ನಡದ ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು. ಇಂದಿಗೂ ನಟನೆ ವಿಚಾರಕ್ಕೆ ಬಂದರೆ ಯಾವ ರೀತಿಯ ಪಾತ್ರ ಸಿಕ್ಕರೂ ಕೂಡ ಅದಕ್ಕೆ 100% ನ್ಯಾಯವನ್ನು ಒದಗಿಸುವಂತಹ ನಟನೆಯನ್ನು ತೋರ್ಪಡಿಸುತ್ತಾರೆ ನಮ್ಮ ಅನಂತನಾಗ್ ಸರ್.

ಇದನೊಮ್ಮೆ ಓದಿ..ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿಗೆ ಸಿಕ್ಕ ಒಟ್ಟಾರೆ ಬಹುಮಾನ ಕೇಳಿದ್ರೇ ಬೆರಗಾಗ್ತೀರ.

ಇನ್ನು ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಅನಂತ್ ನಾಗ್ ಅವರ ನಿಜವಾದ ವಯಸ್ಸು ಎಷ್ಟು ಎಂಬುದರ ಕುರಿತಂತೆ ಜನರು ಮರೆತೆ ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 1948ರ ಸೆಪ್ಟೆಂಬರ್ ನಾಲ್ಕರಂದು ಜನಿಸಿರುವ ಅನಂತನಾಗ್ ಅವರ ವಯಸ್ಸು 74 ವರ್ಷ ವಯಸ್ಸಾಗಿದೆ. ವಯಸ್ಸು 80 ಸಮಿತಿಸುತ್ತಾ ಬಂದರೂ ಕೂಡ ಅನಂತನಾಗ್ ಅವರ ಚೈತನ್ಯ ಹುರುಪು ಹಾಗೂ ಉತ್ಸಾಹ 20ರ ಹರೆಯದ ಯುವಕನಿಗೆ ಹೋಲಿಸಬಹುದು. ನಮ್ಮ ಕನ್ನಡ ಚಿತ್ರರಂಗದ ಕೆಲವೇ ಕೆಲವು ಎವರ್ ಗ್ರೀನ್ ಕಲಾವಿದರಲ್ಲಿ ಅನಂತ್ ನಾಗ್ ಕೂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

Leave a Comment

error: Content is protected !!