ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣದಲ್ಲಿ ಡಿ ಬಾಸ್ ನೀಡಿದ ಉಡುಗೊರೆಯ ಬೆಲೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಅಮೂಲ್ಯ ರವರು ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕವಯಸ್ಸಿನಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಅವರು ಕಾಲಿಡುತ್ತಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾದವರ ಪೈಕಿಯಲ್ಲಿ ನಟಿ ಅಮೂಲ್ಯ ಕೂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ರಾಜಕೀಯ ಹಿನ್ನಲೆ ಉಳ್ಳಂತಹ ಜಗದೀಶ್ ಎನ್ನುವವರನ್ನು ಅಮೂಲ್ಯ ಅವರು ಮದುವೆ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಅವಳಿ ಮಕ್ಕಳಿಗೆ ಅಮೂಲ್ಯ ಅವರು ತಾಯಿಯಾಗಿದ್ದರು.

ಇನ್ನು ಈಗ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳಿಬ್ಬರು ಸೇರಿ ತಮ್ಮ ಅವಳಿ ಮಕ್ಕಳಿಗೆ ಕುಟುಂಬಸ್ಥರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಅಥರ್ವ್ ಹಾಗೂ ಅಧವ್ ಎನ್ನುವ ಹೆಸರನ್ನು ಇಟ್ಟು ನಾಮಕರಣ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಸಂಪೂರ್ಣಗೊಳಿಸಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಂದಿದ್ದು ಮಕ್ಕಳಿಗೆ ದುಬಾರಿಯಾದ ಗಿಫ್ಟ್ ಒಂದನ್ನು ನೀಡಿದ್ದಾರೆ.

ಹೌದು ಗೆಳೆಯರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಮುದ್ದಾದ ಅವಳಿ ಮಕ್ಕಳಿಗೆ ಎರಡು ಲಕ್ಷ ರೂಪಾಯಿ ಬೆಲೆಬಾಳುವಂತಹ ಚಿನ್ನದ ಸರವನ್ನು ಇಬ್ಬರಿಗೂ ಕೂಡ ನೀಡಿದ್ದಾರೆ. ತಮ್ಮ ಪ್ರೀತಿಪಾತ್ರರು ಯಾವುದೇ ಸಮಾರಂಭಗಳಿಗೂ ಕರೆದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಪ್ಪದೇ ಅಲ್ಲಿಗೆ ಹೋಗಿ ಅವರ ಸಂತೋಷದಲ್ಲಿ ಭಾಗಿಯಾಗುವುದೇ ಅವರನ್ನು ಎಲ್ಲರೂ ಇಷ್ಟಪಡುವಂತೆ ಮಾಡಿರುವುದು.

Leave a Comment

error: Content is protected !!