ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ ಅಮಿತಾ ಬಚ್ಚನ್ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತಾ??

ಯಾವ ಕಲಾವಿದರ ಮಧ್ಯೆ ಯಾವ ರೀತಿಯ ಸಂಬಂಧವಿದೆ? ಯಾವ ತರನಾದ ಘಟನೆಗಳು ನಡೆದಿವೆ? ಎಂದು ಅವರನ್ನು ತೆರೆಯ ಮೇಲೆ ಕಂಡ ನಾವು ನಿರ್ಧರಿಸಲು ಸಾಧ್ಯವಿಲ್ಲ. ಪರದೆಯ ಮೇಲೆ ಶ್ರೀಮಂತರಾಗಿ ಕಾಣಿಸಿಕೊಂಡ ನಟ ಅಥವಾ ನಟಿಯರು ಕೂಡ ನಿಜ ಜೀವನದಲ್ಲಿ ಕಷ್ಟದಲ್ಲಿ ಸಿಲುಕಿಕೊಂಡಿರಬಹುದು. ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ಮಾಡುವ ಕಲಾವಿದನು ನಿಜ ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಮೆರೆದ ನಾಯಕನಾಗಿರಬಹುದು.

ಅಮಿತಾ ಬಚ್ಚನ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸೇವೆಗೈದು, ಸಿನಿ ಪ್ರಿಯರ ಮನ ಗೆದ್ದು, ಭಾರತೀಯ ಮನೆ ಮಂದಿಗೆಲ್ಲ ನೆಚ್ಚಿನವರು. ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರ ಮಗನಾಗಿ ಜನಿಸಿದ ಪುನೀತ್ ರಾಜಕುಮಾರ್ ಅವರ ಬಗ್ಗೆ ಅಮಿತಾ ಬಚ್ಚನ್ ಅವರು ಅದೊಂದು ವಿಡಿಯೋದಲ್ಲಿ ಏನೆಲ್ಲಾ ಹೇಳಿದ್ದಾರೆ? ಎಂಬುದರ ಬಗ್ಗೆ ತಿಳಿಯಬೇಕೆಂದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ.

ಅಪ್ಪು ಅವರು ತೀರಿ ಹೋಗಿ ವರ್ಷವೇ ಕಳೆದರೂ ಅವರ ಸಾವಿನ ದುಃಖವನ್ನು ಯಾರು ಮರೆತಿಲ್ಲ. ಒಬ್ಬರ ನಂತರ ಮತ್ತೊಬ್ಬರು ಮಾಡಿದ ಸಹಾಯವನ್ನು ನೆನೆದು ಮತ್ತೊಮ್ಮೆ ಜನಿಸಬೇಕು ಎನ್ನುತ್ತಾ ಕಣ್ಣೀರಿಡುತ್ತಿದ್ದಾರೆ. ಸಿನಿಮಾಗಳಲ್ಲಿಯೂ ನಿಜ ಜೀವನದಲ್ಲಿಯೂ ನಾಯಕರಾಗಿ ಬದುಕಿದ ಅಪ್ಪು ಅವರ ಕೊನೆಯ ಚಿತ್ರವಾದ ಗಂಧದಗುಡಿ ಸಿನಿಮಾವನ್ನು ನೋಡಿ ಬಿಗ್ ಬಾಸ್ ಅಥವಾ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಬ್ ಬಚ್ಚನ್ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.

‘ನಾನೀಗ ಮಾತನಾಡುತ್ತಿರುವುದು ಪುನೀತ್ ರಾಜಕುಮಾರ್ ಅವರ ಬಗ್ಗೆ… ಜೊತೆಗಾರರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಇವರನ್ನು ಅಪ್ಪು ಎಂದೇ ಕರೆಯುತ್ತಾರೆ. ಪುನೀತ್ ರಾಜಕುಮಾರ್ ಅವರ ಜೀವನದಲ್ಲಿ ನಡೆದು ಹೋದ ಕಹಿ ಘಟನೆಯನ್ನು ಅರಗಿಸಿಕೊಳ್ಳುವುದು ಕಷ್ಟಕರ. ನಾನು ಅವರನ್ನು ಮೊದಲು ಭೇಟಿಯಾದಾಗ ಆತನಿನ್ನು ಪುಟ್ಟ ಬಾಲಕನಾಗಿದ್ದ. ಎಲ್ಲೇ ಹೋಗಲಿ ಯಾರೊಂದಿಗೆ ಆಗಲಿ ತನ್ನ ಮುದ್ದಾದ ನಗುವಿನಿಂದಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವ ಆಕರ್ಷಣೆ ಅವನಲ್ಲಿತ್ತು. ಅವರ ನಗುವೇ ನನಗೆ ಬಹಳ ಇಷ್ಟವಾದದ್ದು. ಅಪಾರ ಸಂಖ್ಯೆಯಲ್ಲಿ ಅಪ್ಪು ಅವರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗಂಧದಗುಡಿ ಚಿತ್ರದಲ್ಲಿ ಅವರು ನಟಿಸಿರುವುದಲ್ಲ. ಗಂಧದಗುಡಿ ಚಿತ್ರವು ಅವರ ಜೀವನದ ಒಂದು ಭಾಗದಂತೆ ಇದೆ. ಚಿತ್ರದಲ್ಲಿ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಚಿತ್ರಣವನ್ನು ಸೆರೆಹಿಡಿದು ಜನತೆಗೆ ಉಣಬಡಿಸಿದ್ದು, ಅವರ ಮ್ಯಾಜಿಕಲ್ ಜರ್ನಿಯಾಗಿದೆ. ಪ್ರಕೃತಿ ಎಲ್ಲರಿಗೂ ಅವಶ್ಯವಾಗಿದೆ ಅದನ್ನು ಉಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದ ಈ ಚಿತ್ರವನ್ನು, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಗಂಧದ ಗುಡಿ ಚಿತ್ರದ ಸಕ್ಸಸ್ ಗೆ ನನ್ನ ಶುಭ ಹಾರೈಕೆಗಳು. ಹಿಂತಿರುಗಿ ನೋಡಿದರೆ ಅಪ್ಪು ಕೂಡ ನನ್ನ ಜೀವನದಲ್ಲಿದ್ದಾರೆ’ ಎಂದು ಭಾವನಾತ್ಮಕವಾಗಿ ಅಮಿತಾಬ್ ಬಚ್ಚನ್ ಅವರು ನುಡಿದಿದ್ದಾರೆ.

ಅಮಿತಾ ಬಚ್ಚನ್ ಅವರ ಈ ನುಡಿಗಳ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶೇರ್ ಮಾಡಿ, ಬರಹವೊಂದನ್ನು ಹಂಚಿಕೊಂಡಿದ್ದಾರೆ; ‘ಶ್ರೀ ಅಮಿತಾಬ್ ಬಚ್ಚನ್ ಅವರೇ, ನಿಮ್ಮ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದಿದ್ದಾರೆ.

Leave a Comment

error: Content is protected !!