Ambareesh: ಕೋಟಿ ಕೋಟಿ ಆಸ್ತಿಯನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಬಿಟ್ಟು ಹೋಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗೆ ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Rebel Star Ambareesh ಕನ್ನಡ ಚಿತ್ರರಂಗದಿಂದ ಪರಭಾಷೆಗಳಲ್ಲಿ ಕೂಡ ಅಂದಿನ ಕಾಲದಲ್ಲಿ ದೊಡ್ಡಮಟ್ಟದ ಸ್ನೇಹಿತರ ಬಳಗವನ್ನು ಹೊಂದಿದ್ದ ಏಕೈಕ ನಟ ಎಂದರೆ ಅದು ರೆಬೆಲ್ ಸ್ಟಾರ್ ಅಂಬರೀಶ್. ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ದೊಡ್ಡ ದೊಡ್ಡ ನಟರು ಅವರ ಸ್ನೇಹಿತರಾಗಿದ್ದರು. ಸ್ನೇಹಿತ ಎನ್ನುವ ಪದಕ್ಕೆ ಅಂಬರೀಶ್(Ambarish) ಅವರೇ ಸರಿಯಾದ ಅರ್ಥವನ್ನು ನೀಡಿರುವ ವ್ಯಕ್ತಿಯಾಗಿದ್ದರು.

ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಕರ್ಣ ಎನ್ನುವುದಾಗಿ ಎಲ್ಲರೂ ಹೇಳುತ್ತಿದ್ದರು. ಕೇವಲ ಸ್ನೇಹದ ವಿಚಾರಕ್ಕಾಗಿ ಮಾತ್ರವಲ್ಲದೆ ಕಷ್ಟ ಎಂದು ಬಂದವರಿಗೆ ನೇರವಾಗಿ ಸಹಾಯ ಮಾಡುವ ಗುಣದಿಂದಲೂ ಕೂಡ ಅವರನ್ನು ಕರ್ಣ ಎನ್ನುವುದಾಗಿ ಎಲ್ಲರೂ ಕರೆಯುತ್ತಿದ್ದರು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ರಾಜಕೀಯವಾಗಿ ಕೂಡ ಸಾಕಷ್ಟು ಯಶಸ್ಸನ್ನು ಸಾಧಿಸಿರುವ ವ್ಯಕ್ತಿತ್ವ ನಮ್ಮ ಅಂಬರೀಶಣ್ಣಂದು(Ambareeshanna).

ಇಂದು ತಮ್ಮ ಪತ್ನಿ ಸುಮಲತಾ ಅಂಬರೀಶ್(Sumalatha Ambareesh) ಹಾಗೂ ಮಗ ಅಭಿಷೇಕ್ ಅಂಬರೀಶ್ ಅವರಿಗಾಗಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಬಿಟ್ಟು ಹೋಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಂದಿನ ಕಾಲದಲ್ಲಿ ನಾಯಕನಟನಾಗಿದ್ದ ಸಂದರ್ಭದಲ್ಲಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಅಂದಿನ ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವವರ ಪೈಕಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಮೊದಲಿಗರಾಗಿದ್ದರು. ನಾಯಕ ನಟನಾಗಿ ಇದ್ದ ಸಂದರ್ಭದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರು 20 ರಿಂದ 25 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಅದು ಇಂದಿನ ಕಾಲಕ್ಕೆ ಹೋಲಿಸಿದರೆ ಅದರ ಮೌಲ್ಯ ಸಾಕಷ್ಟು ದುಪ್ಪಟ್ಟಾಗುತ್ತದೆ. ಇನ್ನು ನಂತರ ಇತ್ತೀಚಿನ ವರ್ಷಗಳಲ್ಲಿ ಕೊನೆ ಕೊನೆಗೆ ಅವರು ನಟಿಸುತ್ತಿದ್ದ ಸಂದರ್ಭದಲ್ಲಿ ಕೆಲವೊಂದು ಸಿನಿಮಾಗಳಿಗೆ ಸಂಭಾವನೆ ಇಲ್ಲದೆ ನಟಿಸುತ್ತಿದ್ದರು ಇನ್ನೂ ಕೆಲವು ಸಿನಿಮಾಗಳಿಗೆ ಒಂದು ಕೋಟಿ ಆಸುಪಾಸಿನಲ್ಲಿ ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

Leave A Reply

Your email address will not be published.