Pushpa 2: ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ ಕೇಳುತ್ತಿರುವ ಹಣ ಎಷ್ಟು ಗೊತ್ತಾ? ರಾಜ ಮೌಳಿ ಹಾಗೂ ಕೆಜಿಎಫ್ ಸಿನಿಮಾಗಳಿಗಿಂತ ಹೆಚ್ಚಂತೆ!

Allu Arjun ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ(Pushpa) ಸಿನಿಮಾ ಯಾವ ರೀತಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ಮಾತು. ಈಗ ಪುಷ್ಪಾ ಸಿನಿಮಾದ ಎರಡನೇ ಭಾಗಕ್ಕಾಗಿ ಬಹುತೇಕ ಎಲ್ಲಾ ಭಾಷೆಗಳ ಪ್ರೇಕ್ಷಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್(Allu Arjun) ಅವರ ವಿಶೇಷ ಡೈಲಾಗ್ ಡೆಲಿವರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಇನ್ನು ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ಅವರ ಜೊತೆಗೆ ರಶ್ಮಿಕ ಮಂದಣ್ಣ(Rashmika Mandanna) ಮಲಯಾಳಂ ನಟ ಫಹಾದ್ ಫಾಸಿಲ್ ಕನ್ನಡದ ಡಾಲಿ ಧನಂಜಯ್(Daali Dhananjay) ಸೇರಿದಂತೆ ಹಲವಾರು ಖ್ಯಾತ ನಾಮರು ನಟಿಸಲಿದ್ದಾರೆ. ವಿಜಯ್ ಸೇತುಪತಿ ಕೂಡ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ.

ಇನ್ನು ಪುಷ್ಪ 2(Pushpa 2) ಸಿನಿಮಾಗಾಗಿ ಅಲ್ಲು ಅರ್ಜುನ್ ಕೇಳುತ್ತಿರುವ ಬೆಲೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ ಮೌಳಿ(Rajamouli) ನಿರ್ದೇಶನದಲ್ಲಿ ಮೂಡಿಬಂದಂತಹ ಆರ್ ಆರ್ ಆರ್ ಸಿನಿಮಾ ಕೂಡ ವಿಶ್ವಾದ್ಯಂತ ಥಿಯೇಟ್ರಿಕಲ್ ಹಕ್ಕಿನ ಮೂಲಕ 700 ಕೋಟಿಯ ಆಸುಪಾಸಿನಲ್ಲಿ ಹಣವನ್ನು ಗಳಿಸಿತ್ತು ಆದರೆ ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ ಕೇಳುತ್ತಿರುವ ಬೆಲೆಯನ್ನು ಕೇಳಿದರೆ ನೀವು ಕೂಡ ಬೆಚ್ಚಿ ಬೀಳ್ತೀರಾ.

ಹೌದು ಗೆಳೆಯರೇ ಪುಷ್ಪ 2 ಸಿನಿಮಾಗಾಗಿ ನಾಯಕ ನಟ ಅಲ್ಲು ಅರ್ಜುನ್(Allu Arjun) ಅವರು ಭರ್ಜರಿ 150 ಕೋಟಿ ರೂಪಾಯಿ ಬೆಲೆಯನ್ನು ಕೇಳುತ್ತಿದ್ದಾರೆ. ಇದರ ಕುರಿತಂತೆ ಹಲವಾರು ಸಿನಿಮಾ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದು ಇದು ನಿಮಗೆ ಓವರ್ ಅಂತ ಅನ್ನಿಸ್ತಿಲ್ವಾ ಎನ್ನುವುದಾಗಿ ಕಾಮೆಂಟ್ ಮಾಡಿದ್ದಾರೆ. ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ ಕೇಳುತ್ತಿರುವ ಈ ಬೆಲೆ ನಿಮ್ಮ ಪ್ರಕಾರ ನ್ಯಾಯಯುತವಾದದ್ದ ಇಲ್ವಾ ಎನ್ನುವುದನ್ನು ಕಾಮೆಂಟ್ ಮಾಡಿ.

Leave a Comment

error: Content is protected !!