Aishwarya Rai ವಯಸ್ಸು 50 ಆಗಿದ್ರು ಐಶ್ವರ್ಯ ರೈ ಇಂದಿಗೂ ನಾಯಕನಟಿಯಾಗಿ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Aishwarya Rai Bachchan ನಮ್ಮ ಕರಾವಳಿ ಮೂಲದ ಹಲವಾರು ಹುಡುಗಿಯರು ಬಾಲಿವುಡ್ ಹಾಗೂ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗಾಗಲೇ ನಾಯಕನಟಿಯರಾಗಿ ಕಮಾಲ್ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅವರಲ್ಲಿ ಮೊದಲಿಗರಾಗಿ ಮಂಗಳೂರು(Mangalore) ಮೂಲದ ಐಶ್ವರ್ಯ ರೈ ಅವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಭುವನ ಸುಂದರಿಯಾಗಿ ಕಾಣಿಸಿಕೊಂಡ ನಂತರ ಐಶ್ವರ್ಯ ರೈ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಬೆಂಬಿಡದಂತೆ ಆಫರ್(Offers) ಗಳು ಒಂದಾದ ಮೇಲೊಂದರಂತೆ ಸಿಗುತ್ತವೆ.

ಪ್ರಾರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಐಶ್ವರ್ಯ ರೈ ರವರು ನಂತರ ಬಾಲಿವುಡ್ ಚಿತ್ರರಂಗಕ್ಕೆ ಸ್ವಂತವಾಗಿ ಬಿಡುತ್ತಾರೆ. ಸಾಕಷ್ಟು ನಟರ ಜೊತೆಗೆ ಐಶ್ವರ್ಯ ರೈ ಅವರ ಹೆಸರು ಕೇಳಿ ಬಂದರೂ ಕೂಡ ನಂತರ ಬಾಲಿವುಡ್ ಚಿತ್ರರಂಗದ ದಂತಕಥೆ ಹಾಗೂ ಲೆಜೆಂಡರಿ(Legendary) ನಟ ಆಗಿರುವ ಅಮಿತಾ ಬಚ್ಚನ್ ಅವರ ಸುಪುತ್ರ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಮದುವೆ ಆಗುತ್ತಾರೆ. ಈ ದಂಪತಿಗಳಿಗೆ ಆರಾಧ್ಯ ಎನ್ನುವ ಹೆಣ್ಣು ಮಗಳು ಕೂಡ ಇದ್ದಾಳೆ. ಇನ್ನು ಐಶ್ವರ್ಯ ರೈ ಅವರಿಗೆ 49 ವರ್ಷ ವಯಸ್ಸಾಗಿದೆ.

Aishwarya Rai Bachchan

ಇಂದಿಗೂ ಭಾರತೀಯ ಚಿತ್ರರಂಗದಲ್ಲಿ ಇರುವಂತಹ 25 ರ ಹರೆಯದ ಸ್ಟಾರ್ ನಟಿಯರಿಗೂ ಕೂಡ ಸ್ಪರ್ಧೆಯನ್ನು ನೀಡುವಂತಹ ಸೌಂದರ್ಯ(Beauty) ಹಾಗೂ ಪ್ರತಿಭೆ(Talent) ಐಶ್ವರ್ಯ ರೈ ಅವರ ಬಳಿ ಇದೆ. ಇನ್ನು ಇತ್ತೀಚಿಗಷ್ಟೇ ಮಾಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಪ್ಯಾನ್ ಇಂಡಿಯನ್(Pan Indian) ಸಿನಿಮಾ ಆಗಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡು ಎಲ್ಲರ ಮನವನ್ನು ಐಶ್ವರ್ಯ ರೈ ಗೆದ್ದಿದ್ದಾರೆ. ಈ ವಯಸ್ಸಿನಲ್ಲಿಯೂ ಕೂಡ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವಂತಹ ಐಶ್ವರ್ಯ ರೈ ಅವರು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುವ ಹಣ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಸ್ಟಾರ್ ನಟಿಯರಷ್ಟೇ ಬೇಡಿಕೆಯನ್ನು ಪ್ರತಿಯೊಂದು ಭಾಷೆಗಳಲ್ಲಿ ಹೊಂದಿರುವ ಐಶ್ವರ್ಯ ರೈ ಅವರು ಪ್ರತಿ ಸಿನಿಮಾಗಳಿಗೆ ಭರ್ಜರಿಯಾಗಿ ಆರರಿಂದ ಏಳು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಈ ವಯಸ್ಸಿನಲ್ಲಿಯೂ ಕೂಡ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದುಕೊಳ್ಳುವ ಮತ್ತೊಬ್ಬ ಸ್ಟಾರ್ ನಟಿ ಇಡೀ ಭಾರತೀಯ ಚಿತ್ರರಂಗದಲ್ಲಿ ನಿಮಗೆ ಸಿಗಲು ಸಾಧ್ಯವೇ ಇಲ್ಲ.

Leave a Comment

error: Content is protected !!