ಅಭಿಮಾನಿಗಳ ಕಲ್ಪನೆಯಲ್ಲಿ ಮೂಡಿಬಂದ ಶಿವಣ್ಣ ಅಪ್ಪು. ಸೋಷಿಯಲ್ ಮೀಡಿಯಾದಲ್ಲಿ ಸಹೋದರರದ್ದೇ ದರ್ಬಾರ್.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಗೂ ಅವರ ಸಹೋದರ ಆಗಿರುವಂತಹ ಕರುನಾಡ ಚಕ್ರವರ್ತಿ ಶಿವಣ್ಣ ಇಬ್ಬರೂ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಒಟ್ಟಿಗೆ ನಡೆದು ಬಂದವರು. ತಮ್ಮ ತಂದೆ ನಟಸಾರ್ವಭೌಮ ಡಾ. ರಾಜ್ ಕುಮಾರ್ ರವರಿಗೆ ಸಮರ್ಥ ಉತ್ತರಾಧಿಕಾರಿ ಗಳಾಗಿ ಚಿತ್ರರಂಗದಲ್ಲಿ ಮಿಂಚಿದವರು. ಆದರೆ ಇಂದು ಈ ಸಹೋದರರಲ್ಲಿ ಒಬ್ಬರು ನಮ್ಮನೆಲ್ಲಾ ಅಕಾಲಿಕವಾಗಿ ಅಗಲಿ ವರುಷಗಳೇ ಮೀರಿವೆ. ಇಂದಿಗೂ ಅವರ ಅಗಲಿಕೆ ನಮ್ಮನ್ನು ಬಿಡದಂತೆ ಕಾಡುತ್ತಿದೆ. ಎಂದಿಗೂ ಅವರ ಸ್ಥಾನ(Position) ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ನಟನಿಂದ ಪೂರ್ತಿಯಾಗಲು ಸಾಧ್ಯವೇ ಇಲ್ಲ.

ಇನ್ನು ಮತ್ತೊಂದು ಕೊರಗು ಏನೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣ ಇಬ್ಬರೂ ಅಣ್ಣ ತಮ್ಮ ಆಗಿದ್ದರೂ ಕೂಡ ಒಟ್ಟಾಗಿ ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸುವಂತಹ ಅವಕಾಶ ಮಾತ್ರ ಕಂಡುಬರಲಿಲ್ಲ. ಇದು ಕನ್ನಡ ಪ್ರೇಕ್ಷಕರ ದುರಾದೃಷ್ಟವೇ(Unfortunat) ಸರಿ ಎನ್ನಬಹುದು. ಮುಂದಿನ ಹಲವಾರು ವರ್ಷಗಳ ಕಾಲವೂ ಕೂಡ ಇದು ಕೊರತೆಯಾಗಿ ಕಾಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದನ್ನು ಈಗ ಅಭಿಮಾನಿಗಳು ಪರಿಹರಿಸಲು ಹೊರಟಿದ್ದಾರೆ.

ಹೌದು ಗೆಳೆಯರೆ ಅಪ್ಪು ಹಾಗೂ ಶಿವಣ್ಣ ಅಭಿಮಾನಿಗಳು ಕಾಲ್ಪನಿಕವಾಗಿ ಒಂದುಫೋಟೋ ಎಡಿಟ್ ಮಾಡಿದ್ದು ಈಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ನಿಜಕ್ಕೂ ಇವರಿಬ್ಬರ ಕಾಂಬಿನೇಷನ್ ನಲ್ಲಿ ಯಾವದೋ ಹೊಸ ಸಿನಿಮಾ ಮೂಡಿಬರುತ್ತಿರಬಹುದು ಎನ್ನುವ ಆಲೋಚನೆಯನ್ನು ಸೃಷ್ಟಿ ಮಾಡುತ್ತದೆ. ನೀವು ಕೂಡ ನೋಡಿದರೆ ಅದನ್ನೇ ಹೇಳುತ್ತೀರ. ಅಷ್ಟರ ಮಟ್ಟಿಗೆ ಆ ಫೋಟೋ ನೈಜರೀತಿಯಲ್ಲಿ(Naturally) ಮೂಡಿಬಂದಿದೆ. ಈ ಫೋಟೋ ಹಲವಾರು ಕಡೆಗಳಲ್ಲಿ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇರಬಹುದು ಎನ್ನುವ ಊಹಾಪೋಹಗಳಿಗೆ ನಾಂದಿ ಹಾಡಿದೆ.

ಸಿನಿಮಾ ದಲ್ಲಿ ಅಣ್ಣ ಹಾಗೂ ತಮ್ಮನನ್ನು ಒಟ್ಟಾಗಿ ನೋಡಲು ಸಾಧ್ಯವಾಗಿಲ್ಲ. ಕೊನೇ ಪಕ್ಷ ಇಬ್ಬರೂ ಜೊತೆ ಇರುವಂತಹ ಅಭಿಮಾನಿಗಳ ಎಡಿಟೆಡ್(Edited) ಫೋಟೋ ಆದರೂ ನೋಡುವಂತಹ ಭಾಗ್ಯ ನಮಗೆ ಸಿಕ್ಕಿತು ಎಂಬುದನ್ನು ನಾವು ಮೆಚ್ಚಿಕೊಳ್ಳಬೇಕು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಿವಣ್ಣನ ಅಭಿಮಾನಿಗಳು ಮಾಡಿರುವಂತಹ ಈ ಕಾಲ್ಪನಿಕ ಫೋಟೋ ಎಡಿಟ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!