ಭಯಂಕರ ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ನಟಿ ಸಮಂತಾ. ಸಮಂತಾ ಗೆ ಬಂದಿರುವ ಆ ಕಾಯಿಲೆ ಯಾವುದು ಗೊತ್ತಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಟಿ ಸಮಂತ ಅವರು ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ 2017ರಲ್ಲಿ ಹಲವಾರು ವರ್ಷಗಳಿಂದ ಪ್ರೀತಿಸಿದ್ದ ನಟ ನಾಗಚೈತನ್ಯ ಅವರನ್ನು ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಅನ್ವಯ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಮದುವೆ ಆಗುತ್ತಾರೆ. ಇವರಿಬ್ಬರ ಮದುವೆ ಎನ್ನುವುದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿತ್ತು.

ಆದರೆ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ಅಂದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಇದರ ಹಿಂದಿನ ಕಾರಣಗಳು ನಿಜಕ್ಕೂ ಏನು ಎಂಬುದು ಇಂದಿಗೂ ಕೂಡ ಬಹಿರಂಗವಾಗಿಲ್ಲ. ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಮತ್ತೆ ನಾಯಕ ನಟಿಯಾಗಿ ಹಾಗೂ ನಟಿಯಾಗಿ ಸಮಂತ ಅವರು ಈಗ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಆರಂಭಿಸಿದ್ದಾರೆ.

ಮತ್ತೊಮ್ಮೆ ಯಶಸ್ವಿ ನಾಯಕ ನಟಿಯಾಗಿ ಭಾರತ ಚಿತ್ರರಂಗದಲ್ಲಿ ಹೆಸರನ್ನು ಗಳಿಸುತ್ತಿರುವ ಬೆನ್ನಲ್ಲೇ ಸಮಂತಾ ಅವರಿಗೆ ಒಂದು ವಿಚಿತ್ರ ಕಾಯಿಲೆಯೊಂದು ತಗುಲಿದೆ. ಹೌದು ಗೆಳೆಯರೇ ಅದರ ಹೆಸರು ಮಯೋಸಿಟಿಸ್ ಎನ್ನುವುದಾಗಿ. ಇದನ್ನು ಸ್ವತಹ ನಟಿ ಸಮಂತ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇದು ಮಾಂಸಖಂಡ ಹಾಗೂ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಈಗಾಗಲೇ ವಿದೇಶದಲ್ಲಿ ನುರಿತ ತಜ್ಞರ ಬಳಿ ಸಮಂತ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಸಂಪೂರ್ಣವಾಗಿ ರಿಕವರಿ ಆಗಲು ಸಮಂತ ಅವರಿಗೆ ಕೊಂಚ ಹೆಚ್ಚಿನ ಸಮಯ ತಗಲಬಹುದು ಎನ್ನುವುದನ್ನು ಪೋಸ್ಟ್ ಮಾಡುವ ಸಂದರ್ಭದಲ್ಲಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಪ್ರತಿಯೊಬ್ಬರೂ ಕೂಡ ಸಮಂತ ಅವರು ಸಂಪೂರ್ಣ ಗುಣಮುಖವಾಗಿ ಬರಲಿ ಎಂಬುದಾಗಿ ಹಾರೈಸುತ್ತಿದ್ದಾರೆ. ಇತ್ತೀಚಿಗಷ್ಟೇ ಸಮಂತ ನಟನೆಯ ಯಶೋಧ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.

Leave a Comment

error: Content is protected !!