Actress meena: ಗಂಡ ವಿಧಿವಶರಾದ ಐದೇ ತಿಂಗಳಿಗೆ ಗಂಡನ ಗೆಳೆಯನ ಜೋತೆ ಮತ್ತೊಂದು ಮದುವೆಯಾಗಲಿದ್ದಾರಾ ಮೀನಾ?

ಮನನೊಂದ ಮೀನಾ ಅವರು ಮತ್ತೊಂದು ಮದುವೆಯಾಗಲಿದ್ದಾರಾ?? ಮೀನಾ ಅವರ ಕೈಹಿಡಿವ ವರ ಯಾರು ಗೊತ್ತಾ?. Actress meena second marraige with husband friend? ಕರೋನ ಮಹಾಮರಿಯು ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಬಡವ, ಶ್ರೀಮಂತ ಎಂದು ಯಾರನ್ನು ಬಿಡದೆ ಅಬ್ಬರಿಸಿತ್ತು. ಬಡವರು ಉದ್ಯೋಗ ಮತ್ತು ಊಟಕ್ಕಾಗಿ ಪರದಾಡುವಂತಾಗಿತ್ತು. ದೊಡ್ಡ ದೊಡ್ಡ ಉದ್ಯಮಿಗಳು, ನಟ ನಟಿಯರು, ಕಲಾವಿದರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಕೈಚಲ್ಲಿ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಅದೆಷ್ಟೋ ಜನರನ್ನು ತಿಂದು ತೇಗಿತ್ತು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಪಡೆದು, ಸುಂದರ ತಾರೆ ಎನಿಸಿಕೊಂಡಿದ್ದ ಮೀನಾ ಅವರ ಪತಿ ಕೂಡ ಆರೋಗ್ಯದ ಸಮಸ್ಯೆಯಿಂದ, ಚಿಕಿತ್ಸೆ ಫಲಕಾರಿಯಾಗದೆ ಮೀನಾ ಅವರನ್ನು ಒಬ್ಬಂಟಿ ಮಾಡಿ ಇಹಲೋಕವನ್ನೇ ತ್ಯಜಿಸಿದರು.

ಸೌಂದರ್ಯವತಿಯಾದ ಮೀನಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗವನ್ನು ಪ್ರವೇಶಿಸಿ, ಬಾಲ್ಯ ನಟಿಯಾಗಿ ಗುರುತಿಸಿಕೊಂಡು, ಸಾಕಷ್ಟು ಪಳಗಿ ನಂತರ ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಸಾಕಷ್ಟು ಅವಕಾಶಗಳು ಅವರನ್ನರಸಿ ಬಂದು ಮೀನಾ ಅವರು ಟಾಪ್ ನಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡರು.

Actress meena second marraige with husband friend

2009ರಲ್ಲಿ ಮೀನಾ ಅವರು ಶ್ರೀಮಂತ ಕುಟುಂಬದ ವಿದ್ಯಾಸಾಗರ್ ಎಂಬುವವರನ್ನು ವಿವಾಹವಾದರು. ವಿದ್ಯಾಸಾಗರ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ವೃತ್ತಿಯನ್ನು ಮಾಡುತ್ತಿದ್ದರು. ಈ ದಂಪತಿಗಳಿಗೆ ಆರು ವರ್ಷದ ಮಗುವಿದೆ. ವೈವಾಹಿಕ ಜೀವನ ಸುಖಮಯವಾಗಿ ಸಾಗುತ್ತಿರುವಾಗಲೇ ವಿಧಿಯು ವಿದ್ಯಾಸಾಗರ್ ಅವರನ್ನು ಭೂಲೋಕದಿಂದ ಕರೆದೊಯ್ದು ಮೀನಾ ಅವರನ್ನು ಒಬ್ಬಂಟಿಯಾಗಿಸಿತು. ಗಂಡನಿಲ್ಲದ ಬೇಸರದಲ್ಲಿ, ಮಗುವಿನ ಪಾಲನೆ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.

ಒಬ್ಬಂಟಿಯಾಗಿ ಜೀವನ ಸಾಗಿಸುವುದು ಸುಲಭದ ಮಾತಲ್ಲವೆಂದು ಮೀನಾ ಅವರ ಕುಟುಂಬಸ್ಥರು ಮತ್ತು ಆಪ್ತರು ಸೇರಿ ಎರಡನೇ ವಿವಾಹದ ವಿಚಾರವಾಗಿ ಚರ್ಚೆ ಮಾಡಿದರಂತೆ. ಮಗುವಿಗೆ ತಂದೆಯ ಸ್ಥಾನದಲ್ಲಿದ್ದು ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆಯುವ, ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಜವಾಬ್ದಾರಿಯುತ ವರನನ್ನು ಮೀನಾ ಅವರಿಗಾಗಿ ಹುಡುಕಲಾಗುತ್ತದಂತೆ. ಪತಿಯನ್ನು ಕಳೆದುಕೊಂಡ ದುಃಖದಿಂದ ಮೀನಾ ಅವರಿನ್ನು ಹೊರಬಂದಿಲ್ಲ ಆದರೆ ಕುಟುಂಬಸ್ಥರ ಮಾತು ಕೂಡ ತಪ್ಪೇನಿಲ್ಲ ಎಂದೆನಿಸಿ, ಮರುವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಮಸ್ಯೆಗಳನ್ನು ಒಬ್ಬರೇ ಎದುರಿಸುವುದಕ್ಕಿಂತ ಜೊತೆಯಲ್ಲಿ ಆಸರೆಯಾಗಿ ಇನ್ನೊಬ್ಬರಿದ್ದರೆ ಹಿತ ಎಂದು ಯೋಚಿಸಿದ ಅಭಿಮಾನಿಗಳು ಕೂಡ ಎರಡನೇ ವಿವಾಹವಾಗುವುದೇ ಸೂಕ್ತ ಎಂದಿದ್ದಾರಂತೆ.

Leave a Comment

error: Content is protected !!